ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹಿಂದೂ ಪದ್ಧತಿಯಲ್ಲಿ ಮದುವೆಯಾದ ಬ್ರಿಟನ್ ವಧು-ವರ

By Yashaswini
|
Google Oneindia Kannada News

ಮೈಸೂರು, ಜನವರಿ 6 : ಅರಮನೆ ನಗರಿ ಮೈಸೂರಿಗೂ ವಿದೇಶೀಯರಿಗೂ ಅದೊಂದು ಬಗೆಯ ಒಲವಿದೆ. ಇನ್ನು ಅಲ್ಲೊಂದು- ಇಲ್ಲೊಂದು ಉದಾಹರಣೆ ಎಂಬಂತೆ ನಮ್ಮ ಸಂಸ್ಕೃತಿಯ ಗಂಧ -ಗಾಳಿ ಇಲ್ಲದ ವಿದೇಶೀಯರು ಭಾರತದ ಪರಂಪರೆಗೆ ತಲೆ ಬಾಗುತ್ತಿದ್ದಾರೆ. ಅಂಥದ್ದೇ ಘಟನೆಗೆ ಸಾಕ್ಷಿಯಾಗಿದ್ದು ಮೈಸೂರಿನಲ್ಲಿ ನಡೆದ ವಿವಾಹ ಮಹೋತ್ಸವ.

ಮೈಸೂರಿನಲ್ಲಿ ವಿದೇಶಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಇಲ್ಲಿನ ಜೆ.ಪಿ.ನಗರದಲ್ಲಿರುವ ಒಡನಾಡಿ ಸ್ವಯಂ ಸೇವಾ ಸಂಸ್ಥೆಯಲ್ಲಿ ಸರಳ ವಿವಾಹದ ಮೂಲಕ ವಿದೇಶಿ ಜೋಡಿ ಮದುವೆಯಾದರು. ಬ್ರಿಟನ್ ನ ಫ್ರಿತಾ ಹಾಗೂ ಓಲಾಫ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಡನಾಡಿ ಸೇವಾ ಸಂಸ್ಥೆಯ ಆವರಣ ಒಡಲು ಗಂಡುಮಕ್ಕಳ ಜೀವನ ಪುನರ್ ನಿರ್ಮಾಣ ಕೇಂದ್ರದಲ್ಲಿ ಸರಳವಾಗಿ ಮದುವೆಯಾದರು.

Britain couple married according to Hindu ritual in Mysuru

ಫ್ರಿತಾ ವಿನ್ಸೆಂಟ್ ಬ್ರಿಟನ್ ನಲ್ಲಿ ಸ್ವಯಂಸೇವಕಿಯಾಗಿದ್ದು ಸೀಕ್ರೆಟ್ ಪಿಲ್ಲೋ ಎಂಬ ಕಂಪೆನಿಯ ಒಡತಿಯಾಗಿದ್ದಾರೆ. ದಕ್ಷಿಣ ಭಾರತದಾದ್ಯಂತ ಬುಡಕಟ್ಟು ಜನರ ಸ್ವಾವಲಂಬನೆಗಾಗಿ ಉದ್ಯೋಗ ಒದಗಿಸಿರುವುದಲ್ಲದೆ ಬಂದ ಲಾಭವನ್ನು ಹಂಚುತ್ತಾ ಜಾಗತಿಕ ಬದಲಾವಣೆಗಾಗಿ ತೊಡಗಿಸಿಕೊಂಡಿದ್ದಾರೆ.

ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!ಬ್ರಾಹ್ಮಣರಿಗೆ ವಧುವಿನ ಕೊರತೆ : ಕಲ್ಯಾಣಕ್ಕೆ ಹೊಸ ಪ್ಲಾನ್!

ಜತೆಗೆ ಫ್ರಿತಾ ವಿನ್ಸೆಂಟ್ ಅವರು ಲಂಡನ್ನಿನ ಅಡ್ವೆಂಚರ್ ಆಶ್ರಮದ ಧರ್ಮದರ್ಶಿಯೂ ಆಗಿದ್ದಾರೆ. 10 ವರ್ಷಗಳ ಹಿಂದೆ ಪರಿಚಯವಾಗಿದ್ದ ಸ್ನೇಹಿತ ಓಲಾಫ್ ಮೇಸನ್ ಅವರನ್ನು ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಕಾರ ಕೈ ಹಿಡಿದಿದ್ದಾರೆ.

English summary
Freeta- Olaf couple from Britain, married in Mysuru according to Hindu ritual on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X