• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹಿಂದುಳಿದ ಕ್ಷೇತ್ರ ಹೆಚ್ಡಿ ಕೋಟೆಯಲ್ಲಿ ಮತದಾರನ ಒಲವು ಯಾರ ಮೇಲಿದೆ ?

By Yashaswini
|

ಮೈಸೂರು, ಏಪ್ರಿಲ್ 11: ಮೈಸೂರು ಜಿಲ್ಲೆಯ ಹಿಂದುಳಿದ ತಾಲ್ಲೂಕು ಎಂದೇ ಕರೆಯಲ್ಪಡುವ ಗಡಿ ಭಾಗದಲ್ಲಿರುವ ವನಸಿರಿ ನಾಡು ಮತ್ತು ಜಲಾಶಯಗಳ ಬೀಡು ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವಾಗಿದೆ.

ಕ್ಷೇತ್ರದಲ್ಲಿ ಒಟ್ಟು 2,09,502 ಮತದಾರರಿದ್ದು, ಇದರಲ್ಲಿ ಪುರುಷರು 1,05,876, ಮಹಿಳೆಯರು 1,03,626 ಮಂದಿ ಇದ್ದಾರೆ. ಇದು ಪರಿಶಿಷ್ಟ ಪಂಗಡಕ್ಕೆ ಸೇರಿದ ಮೀಸಲು ಕ್ಷೇತ್ರವಾಗಿದೆ. ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ನಿರ್ಮಾಣಗೊಂಡ ನಂತರ 55 ವರ್ಷಗಳಲ್ಲಿ 45 ವರ್ಷಗಳ ಕಾಲ ಪರಿಶಿಷ್ಟ ಜಾತಿ ಮೀಸಲಾತಿಗೆ ಸೀಮಿತವಾಗಿತ್ತು. ಕ್ಷೇತ್ರ ಪುನರ್ ವಿಂಗಡಣೆ ನಂತರ 2008 ರಿಂದ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರು ಮೊದಲ ಸ್ಥಾನದಲ್ಲಿದ್ದು 51-54 ಸಾವಿರ ಮಂದಿ ಮತದಾರರಿದ್ದಾರೆ.

ಮೈಸೂರಿನ ಕೆ.ಆರ್.ನಗರ: ಯಾರಿಗೆ ಒಲಿಯಲಿದ್ದಾನೆ ಮತದಾರ?

ಪರಿಶಿಷ್ಟ ಪಂಗಡದವರು 40-43 ಸಾವಿರ ಮತದಾರರಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಲಿಂಗಾಯತ ವೀರಶೈವರು 34,000, ಒಕ್ಕಲಿಗರು 27,000, ಕುರುಬರು 16,000, ನಾಮಧಾರಿ ಗೌಡರು 10,000, ವಿಶ್ವಕರ್ಮ 9,000, ಮುಸ್ಲಿಮರು 8,000, ಉಳಿದಂತೆ ಈಡಿಗ ಗೌಡರು, ಮಡಿವಾಳ, ಮರಾಠಿ, ತಮಿಳರು, ಜೈನರು, ಬ್ರಾಹ್ಮಣರು, ಬಣಜಿಗಶೆಟ್ಟರು, ತೆಲುಗು ಮನೆ ಶೆಟ್ಟರು ಸೇರಿದಂತೆ ಇನ್ನಿತರ ಸಮುದಾಯದವರು 34,000 ಮಂದಿ ಇದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೆದ್ದು ಬೀಗಿದವರು – ಸೋತು ಸಪ್ಪಗಾದವರು

ಗೆದ್ದು ಬೀಗಿದವರು – ಸೋತು ಸಪ್ಪಗಾದವರು

ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ 8 ಮಂದಿ ಜನಪ್ರತಿನಿಧಿಗಳು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಇದರಲ್ಲಿ ಒಬ್ಬರು ಹ್ಯಾಟ್ರಿಕ್ ಜಯಗಳಿಸಿದ್ದು, ಇಬ್ಬರು ತಲಾ ಎರಡು ಬಾರಿ, ಐವರು ತಲಾ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸುಶೀಲ ಚೆಲುವರಾಜು ಅವರು ಆಯ್ಕೆ ಯಾಗುವ ಮೂಲಕ ತಾಲ್ಲೂಕಿನ ಏಕೈಕ ಮಹಿಳಾ ಶಾಸಕಿ ಎನಿಸಿಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಶಿವಣ್ಣ ಅವರು ತಾಲ್ಲೂಕಿನ ಪ್ರಥಮ ಹಾಗೂ ಏಕೈಕ ಸಚಿವರಾಗಿದ್ದು, ಇವರು 1999ರಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಎಂ.ಶಿವಣ್ಣ ಸಚಿವರಾಗಿ 5 ವರ್ಷದಲ್ಲಿ ಐದು ಖಾತೆಗಳನ್ನು ನಿರ್ವಹಿಸಿರುವ ಏಕೈಕ ಸಚಿವರಾಗಿದ್ದಾರೆ. ಕ್ಷೇತ್ರದಲ್ಲಿ ಚುನಾಯಿತರಾಗಿದ್ದ ಎಂಟು ಜನ ಶಾಸಕರ ಪೈಕಿ ಮಾಜಿ ಶಾಸಕ ಮತ್ತು ಜಾ.ದಳ ಅಭ್ಯರ್ಥಿ ಬೀಚನಹಳ್ಳಿ ಚಿಕ್ಕಣ್ಣ, ಮಾಜಿ ಸಚಿವ ಎಂ.ಶಿವಣ್ಣ ಇವರನ್ನು ಹೊರತುಪಡಿಸಿ ಇನ್ನು ಉಳಿದ ಎಲ್ಲರೂ ನಿಧನ ಹೊಂದಿದ್ದಾರೆ. ಚಿಕ್ಕಮಾದು ಅವರು ಶಾಸಕರಾಗಿದ್ದಾಗಲೇ ನಿಧನ ಹೊಂದಿದರು.

ಕ್ಷೇತ್ರ ವಿಂಗಡಣೆಯ ನಂತರ

ಕ್ಷೇತ್ರ ವಿಂಗಡಣೆಯ ನಂತರ

ಎಚ್.ಡಿ.ಕೋಟೆ ಕ್ಷೇತ್ರ 1962ರಲ್ಲಿ ಪ್ರತ್ಯೇಕವಾಗಿ ವಿಧಾನಸಭಾ ಕ್ಷೇತ್ರವಾಗಿ ವಿಂಗಡಣೆಗೊಂಡ ನಂತರ ಆರ್.ಪೀರಣ್ಣ ಅವರು ಸತತ ಮೂರು ಬಾರಿ ಶಾಸಕರಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಒಂದು ಬಾರಿ ಪಕ್ಷೇತರ, ಎರಡು ಬಾರಿ ಸಂಸ್ಥಾ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಆರ್.ಪೀರಣ್ಣ ಅವರ ಪುತ್ರ ಎಂ.ಪಿ.ವೆಂಕಟೇಶ್ ಎರಡು ಬಾರಿ ಜನತಾ ಪರಿವಾರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಎಂ.ಶಿವಣ್ಣ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸಿದ್ದರೆ,

ಸುಶೀಲ ಚೆಲುವರಾಜು ಮತ್ತು ಬೀಚನಹಳ್ಳಿ ಚಿಕ್ಕಣ್ಣ ಕಾಂಗ್ರೆಸ್ ಪಕ್ಷದಿಂದ ತಲಾ ಒಂದು ಬಾರಿ ಆಯ್ಕೆ ಯಾಗಿದ್ದರು. ಎಚ್.ಬಿ.ಚೆಲುವಯ್ಯ, ಎನ್.ನಾಗರಾಜು ಮತ್ತು ಎಸ್.ಚಿಕ್ಕಮಾದು ಜನತಾ ಪರಿವಾರದಿಂದ ತಲಾ ಒಂದು ಬಾರಿ ಶಾಸಕರಾಗಿದ್ದರು. ತಾಲ್ಲೂಕಿನಲ್ಲಿ ಏಳು ಬಾರಿ ಹೊರಗಿ ನವರಿಗೆ ಮತ್ತು ಐದು ಬಾರಿ ಸ್ಥಳೀಯರಿಗೆ ಶಾಸಕರಾಗಿ ಅಧಿಕಾರ ನಡೆಸಲು ಅವಕಾಶ ದೊರೆತಿದೆ

ವರುಣ ಕ್ಷೇತ್ರ : ಕಾಂಗ್ರೆಸ್ಸಿಗೆ ಸುಲಭ ಗೆಲುವು ಕಷ್ಟ

ಅಭ್ಯರ್ಥಿಗಳಲ್ಲಿ ಶುರುವಾಗಿದೆ ಪೈಪೋಟಿ

ಅಭ್ಯರ್ಥಿಗಳಲ್ಲಿ ಶುರುವಾಗಿದೆ ಪೈಪೋಟಿ

ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿ ಪಕ್ಷದ ಅಭ್ಯರ್ಥಿಯಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಡಾ.ಎಚ್.ವಿ.ಕೃಷ್ಣಸ್ವಾಮಿ ಮತ್ತು ಸ್ಥಳೀಯ ಯುವ ಮುಖಂಡ ಡಿಪ್ ಸಿದ್ದನಾಯಕ ಇವರ ನಡುವೆ ಹೋರಾಟ ನಡೆಯುತ್ತಿದೆ.

ಇನ್ನುಯ ನಾಯಕ ಜನಾಂಗದ ರಾಜ್ಯ ಮುಖಂಡರಾದ ಶಾಸಕ ದಿವಂಗತ ಎಸ್.ಚಿಕ್ಕಮಾದು ಕುಟುಂಬಕ್ಕೆ ಪಕ್ಷದಿಂದ ಆದ್ಯತೆ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ಆರ್.ಧ್ರುವನಾರಾಯಣ ಅವರು ಅನಿಲ್ ಚಿಕ್ಕಮಾದು ಅವರನ್ನು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಇದೆ. ಇನ್ನು ಒಪ್ಪಂದದಂತೆ ನನಗೆ ಪಕ್ಷದಿಂದ ಟಿಕೆಟ್ ನೀಡಲೇಬೇಕೆಂದು ಮುಖಂಡ ಎಂ.ಸಿ.ದೊಡ್ಡನಾಯಕ ಪಟ್ಟು ಹಿಡಿದಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಾಯಕ ಸಮಾಜದ ಅಧ್ಯಕ್ಷರು ಮತ್ತು ಹಿರಿಯರಾದ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಜಿ.ಟಿ.ದೇವೇಗೌಡ, ರೇವಣ್ಣ, ಪ್ರೊ.ಕೆ.ಎಸ್.ರಂಗಪ್ಪ, ಸಂದೇಶ್ ನಾಗರಾಜು ಮತ್ತಿತರರು ಸುದೀರ್ಘವಾಗಿ ಚರ್ಚೆ ನಡೆಸಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.

ಈ ಹಿಂದೆ ಗೆದ್ದವರು

ಈ ಹಿಂದೆ ಗೆದ್ದವರು

1962 - ಆರ್.ಪೀರಣ್ಣ - ಪಕ್ಷೇತರ - 14788

1967 - ಆರ್.ಪೀರಣ್ಣ - ಕಾಂಗ್ರೆಸ್ - 20689

1972 - ಆರ್.ಪೀರಣ್ಣ - ಕಾಂಗ್ರೆಸ್ - 21859

1978 ಸು- ಶೀಲಾ ಚೆಲುವರಾಜು - ಕಾಂಗ್ರೆಸ್ - 27821

1983 - ಎಚ್.ಬಿ.ಚೆಲುವಯ್ಯ - ಜನತಾ ಪಕ್ಷ - 33840

1985 - ಎಂ.ಶಿವಣ್ಣ - ಕಾಂಗ್ರೆಸ್ - 26286

1989 - ಎಂ.ಪಿ.ವೆಂಕಟೇಶ್ ಜ.ಪಕ್ಷ - 29676

1994 - ಎನ್.ನಾಗರಾಜು - ಜ.ದಳ - 41208

1999 - ಎಂ.ಶಿವಣ್ಣ - ಕಾಂಗ್ರೆಸ್ - 45136

2004 - ಎಂ.ಪಿ.ವೆಂಕಟೇಶ್ - ಜಾ.ದಳ- 50729

2008 - ಚಿಕ್ಕಣ್ಣ - ಕಾಂಗ್ರೆಸ್ - 43222

2013 - ಎಸ್. ಚಿಕ್ಕಮಾದು - ಜಾ.ದಳ - 48606

ಪಿರಿಯಾಪಟ್ಟಣದಲ್ಲಿ ಗೆಲುವಿನ ನಗೆ ಬೀರುವರ್ಯಾರು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly elections 2018: HD Kote constituency in Mysuru is one of the most important constituencies. Here is brief political history and importance of this constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more