ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬ್ರಿಡ್ಜ್ ಕೋರ್ಸ್‌

|
Google Oneindia Kannada News

ಮೈಸೂರು, ಮೇ 2 : ಯುದ್ಧದ ಕಾರಣದಿಂದಾಗಿ ಉಕ್ರೇನ್‌ನಿಂದ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಚೀನಾದಲ್ಲಿ ಕೊರೊನಾದಿಂದಾಗಿ ಭಾರತಕ್ಕೆ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜೆಎಸ್ಎಸ್ ವೈದ್ಯಕೀಯ ಕಾಲೇಜು ಬ್ರಿಡ್ಜ್ ಕೋರ್ಸ್‌ ಘೋಷಣೆ ಮಾಡಿತ್ತು. ಇದಕ್ಕೆ ಕಳೆದ 24 ಗಂಟೆಯಲ್ಲೇ ವಿದ್ಯಾರ್ಥಿಗಳಿಂದಲೇ ಆಗಾಧವಾಗ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 511 ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಲು ಉತ್ಸುಕರಾಗಿದ್ದಾರೆ.

ಭಾರತದಾದ್ಯಂತ 511 ವಿದ್ಯಾರ್ಥಿಗಳು ಅದರಲ್ಲಿ 321 ಕರ್ನಾಟಕದವರಾಗಿದ್ದು, ಈ ಕೋರ್ಸ್‌ ಸೇರಿಕೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕೋರ್ಸ್‌ನ್ನು ಮೇ ಎರಡನೇ ವಾರದಿಂದ ಪ್ರಾರಂಭಿಸುವ ನಿರೀಕ್ಷೆಯಿದೆ.

ಭಾನುವಾರ ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಕಾಲೇಜು ಆಡಳಿಯ ಮಂಡಳಿ, ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಅವಕಾಶ ನೀಡಲಾಗುವುದು ಮತ್ತು ಎಲ್ಲಾ ಪ್ರಯೋಗಾಲಯ ಸೌಲಭ್ಯಗಳು ಅವರಿಗೆ ಉಚಿತವಾಗಿ ತೆರೆದಿರುತ್ತವೆ ಎಂದು ತಿಳಿಸಿದೆ. ಇನ್ನು ಈ ಕೋರ್ಸ್‌ಗೆ ಸೇರಲು ಕರ್ನಾಟಕದ ಹೊರತಾಗಿ, ದೆಹಲಿ, ಮುಂಬೈ, ಗುಜರಾತ್ ಮತ್ತು ಇತರ ಸ್ಥಳಗಳಿಂದ ವಿದ್ಯಾರ್ಥಿಗಳು ಈ ಕೋರ್ಸ್‌ ಸೇರಲು ಆಸಕ್ತಿ ತೋರಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

Bridge course for indian medical students displaced from ukraine recives overwhelming response

ಜೆಎಸ್‌ಎಸ್‌ ಆಕಾಡೆಮಿ ಆಫ್‌ ಹೈಯರ್ ಎಜುಕೇಶನ್‌ನ ಪ್ರೋ ಚಾನ್ಸೆಲರ್‌ ಆದ ಡಾ. ಬಿ ಸುರೇಶ್ ಮಾತನಾಡಿ, ಬ್ರಿಡ್ಜ್ ಕೋರ್ಸ್‌ನಲ್ಲಿ ಉಕ್ರೇನ್‌ ಮತ್ತು ಚೀನಾದಲ್ಲಿ ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುತ್ತಿರುವ ತಲಾ 125 ವಿದ್ಯಾರ್ಥಿಗಳ ನಾಲ್ಕು ಬ್ಯಾಚ್‌ಗಳನ್ನು ಒಳಗೊಂಡಿರುತ್ತದೆ . ಕೋರ್ಸ್‌ ಮ್ಯಾಪಿಂಗ್ ಮಾಡಿದ ನಂತರ ತರಗತಿಗಳು ನಡೆಯುತ್ತವೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳಲ್ಲಿ ಅನುಸರಿಸುತ್ತಿರುವ ಪಠ್ಯಕ್ರಮಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಸಲಾಗುತ್ತದೆ ಎಂದು ತಿಳಿಸಿದರು.

ಕೋರ್ಸ್‌ನ ಕೊನೆಯಲ್ಲಿ ಪರಿಚಯಿಸಲಾಗುವ ವಿಷಯಗಳ ಆಧಾರದ ಮೇಲೆ ಅವಧಿಯು ನಾಲ್ಕು ವಾರಗಳಿಂದ ಆರು ಅಥವಾ ಎಂಟು ವಾರಗಳವರೆಗೆ ಬದಲಾಗಬಹುದು, ವಿದ್ಯಾರ್ಥಿಗಳು ಅಧ್ಯಯನ ಮಾಡಿದ ವಿಷಯಗಳ ವಿವರಗಳು ಮತ್ತು ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪ್ರಾಧ್ಯಪಕರ ಮೌಲ್ಯಮಾಪನದೊಂದಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಆಧರಿಸಿ ಈ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಎಂದು ಡಾ.ಬಿ ಸುರೇಶ್ ತಿಳಿಸಿದ್ದಾರೆ.

Bridge course for indian medical students displaced from ukraine recives overwhelming response

ಹವಮಾನ ಬದಲಾವಣೆ ಅಥವಾ ಯುದ್ಧದಂತಹ ಇತರ ಮಾನವ ನಿರ್ಮಿತ ಅಗತ್ಯತೆಗಳಿಂದ ನೈಸರ್ಗಿಕ ವಿಕೋಪಗಳಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಬೇರೆಡೆ ಮುಂದುವರೆಸುವ ಸನ್ನಿವೇಶ ಎದುರಾಗುತ್ತದೆ. ಹೀಗಾಗಿ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಕೂಡ ಇಂತಹ ಸನ್ನಿವೇಶವನ್ನು ನಿಭಾಯಿಸಲು ಸಿದ್ದವಾಗಿದೆ. ಅದಕ್ಕಾಗಿ ಜೆಎಸ್‌ಎಸ್‌ ಇಂಡಿಯಾ ಇಂಟರ್‌ ನ್ಯಾಷನಲ್ ಇನಿಶಿಯೇಟಿವ್‌ನ ಭಾಗವಾಗಿ ಬ್ರಿಡ್ಕ್ ಕೋರ್ಸ್‌ ಅನ್ನು ನೀಡುತ್ತಿದ್ದೇವೆ ಎಂದು ಬಿ.ಸುರೇಶ್ ತಿಳಿಸಿದ್ದಾರೆ.

ಇನ್ನು ಕಾಲೇಜಿನ ಉಪಕುಲಪತಿಗಳಾದ ಡಾ. ಸುರೇಂದ್ರ ಸಿಂಗ್ ಕೂಡ ಮಾತನಾಡಿ, ಕಾಲೇಜಿನಲ್ಲಿ ಶಿಕ್ಷಕರೊಂದಿಗೆ ಸಂಪರ್ಕದ ಕೊರತೆ ಮತ್ತು ಪ್ರಯೋಗಾಲಯಗಳಿಗೆ ಪ್ರವೇಶದ ಕೊರತೆಯಿಂದಾಗಿ ಸಂಭವಿಸುವ ಜ್ಞಾನ ಮತ್ತು ಕೌಶಲ್ಯದ ಅಂತರವನ್ನು ನಿವಾರಿಸಲು ಈ ಬ್ರಿಡ್ಜ್‌ ಕೋರ್ಸ್ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿಗೋಷ್ಟಿಯಲ್ಲಿ ಡಾ. ಎಂ ಕುಲಸಚಿವ ಮಂಜುನಾಥ್, ಜೆಎಸ್‌ಎಸ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಸವಣ್ಣ ಗೌಡಪ್ಪ ಸೇರಿದಂತೆ ಇತರರಿದ್ದರು.

English summary
The bridge course announced by JSS Medical College for medical students displaced from Ukraine due to war and owing to COVID-19 from China, has received overwhelming response within 24 hours of its announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X