ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾಹದಲ್ಲಿ ಮಾಸ್ಕ್ ಹಾರ ಬದಲಾಯಿಸಿಕೊಂಡ ವಧು-ವರರು!

|
Google Oneindia Kannada News

ಮೈಸೂರು, ಮೇ 4: ಕೊರೊನಾ ಸೋಂಕು ಹೆಚ್ಚುತ್ತಿರುವ ವೇಳೆ ಜನರಲ್ಲಿ ಸೋಂಕು ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಮಾಡಲಾಗುತ್ತಿದೆ. ಇದೀಗ ಮೈಸೂರು ನಗರದಲ್ಲಿ ನಡೆದ ಸರಳ ವಿವಾಹದಲ್ಲಿ ಹೂವಿನ ಹಾರ ಬದಲಾಗಿ ಮಾಸ್ಕ್‍ನಿಂದ ತಯಾರಿಸಿದ ಹಾರವನ್ನು ವಧು-ವರರು ಬದಲಾಯಿಸಿ ಕೊಂಡಿರುವುದು ಗಮನ ಸೆಳೆದಿದೆ.

ಮಾಜಿ ನಗರ ಪಾಲಿಕೆ ಸದಸ್ಯರಾದ ಯಮುನಾ ಹಾಗೂ ಅನಂತನಾರಾಯಣ ಅವರ ಪುತ್ರಿ ಸ್ನೇಹಾ ಅವರ ವಿವಾಹವು ಆಂಡಾಳ್ ಹಾಗೂ ಪಾರ್ಥಸಾರಥಿಯ ಪುತ್ರ ರಾಘವೇಂದ್ರ ಅವರ ವಿವಾಹವನ್ನು ನಿಶ್ಚಯಿಸಲಾಗಿತ್ತು. ಆದರೆ ಕೊರೊನಾ ಲಾಕ್‌ಡೌನ್ ಇರುವ ಕಾರಣ ವಿವಾಹವನ್ನು ಸರಳವಾಗಿ ಮತ್ತು ವಿಭಿನ್ನವಾಗಿ ಮಾಡಲು ಎರಡು ಕಡೆಯವರು ನಿರ್ಧರಿಸಿದ್ದರು.

ಇದಕ್ಕೆ ಪಾತಿ ಫೌಂಡೇಷನ್ ಹಾಗೂ ನನ್ನ ಹೆಸರು ಕಿಶೋರ 7 ಪಾಸ್ 8 ಚಿತ್ರತಂಡವು ಸಾಥ್ ನೀಡಿದ್ದು, ಅದರಂತೆ ನಜರಬಾದ್ ನಲ್ಲಿರುವ ರಾಶಿ ಶಿವಶಂಕರ್ ರಾಜಗೋಪಾಲ್ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಸಲಾಯಿತು. ಈ ಸರಳ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದಿರಿಸಿ ಪ್ರತಿಯೊಬ್ಬರಿಗೂ ಉಚಿತವಾಗಿ ಮಾಸ್ಕ್ ವಿತರಿಸಿ ಹಾಗೂ ಮಾಸ್ಕ್ ಮಾಲೆಯನ್ನು ಧರಿಸಿಕೊಂಡು ಮಹಾಮಾರಿ ಕೊರೊನಾ ವಿರುದ್ಧ ನೂತನ ವಧು-ವರರು ಹೋರಾಡುವ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Mysuru: Bride And Groom Exchanged Garland Made Of Face Masks To Spread Awareness On Covid-19

ಇದೇ ಸಂದರ್ಭದಲ್ಲಿ ಮಾತನಾಡಿದ ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ ಅವರು, ಮಹಾಮಾರಿ ಕೊರೊನಾ ಎರಡನೇ ಅಲೆ ದೇಶದಲ್ಲಿ ಹೆಚ್ಚುತ್ತಿದ್ದು, ಅದನ್ನು ಅರಿತು ಸರ್ಕಾರ ವಿಧಿಸಿರುವ ನಿಯಮಾನುಸಾರವಾಗಿ ನಡೆದ ಸರಳ ವಿವಾಹದಲ್ಲಿ ನಮ್ಮ ಚಿತ್ರ ತಂಡ ಬೇರೆ ಬೇರೆ ನಗರ ಹಾಗೂ ಜಿಲ್ಲೆಯಿಂದ ಬಂದಿರುವ ನಾಗರಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಧು-ವರರಿಗೆ ಶುಭ ಕೋರುವಂತೆ ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸಿದರು.

Mysuru: Bride And Groom Exchanged Garland Made Of Face Masks To Spread Awareness On Covid-19

Recommended Video

ಮಹಿಳೆಯರನ್ನ CM ಮನೆಯಿಂದ ಹೊರಹಾಕಿದ ಸಿಬ್ಬಂದಿ | Oneindia Kannada

ಹಾಗೆಯೇ ನವ ವಧು-ವರರು ಜೀವನ ಪೂರ್ತಿ ನಮ್ಮ ಉಡುಗೊರೆಯನ್ನು ನೆನೆಯಲೆಂದು ಮಾಸ್ಕ್ ಹಾರವನ್ನು ಬದಲಾಯಿಸುವ ಮೂಲಕ ಅವರಿಗೆ ವಿಶೇಷ ಶುಭ ಕೋರಿ ಜಾಗೃತರಾಗಿ ಸರ್ಕಾರದ ನಿಯಮ ಹೊಸ ಜೀವನವನ್ನು ಸುಖಕರವಾಗಿ ಬಾಳಿ ಎಂದು ಚಿತ್ರ ತಂಡದಿಂದ ಶುಭ ಕೋರಲಾಯಿತು ಎಂದು ತಿಳಿಸಿದ್ದಾರೆ.

English summary
The bride and groom have Exchanged of face Masks to spread awareness On Covid-19 at a simple wedding in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X