ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೋಟಿಂಗ್ ವೇಳೆ ವಿಡಿಯೋ ಮಾಡುವಾಗ ಆಯ ತಪ್ಪಿ ಬಿದ್ದು ಸಾವು

|
Google Oneindia Kannada News

ಮೈಸೂರು, ಆಗಸ್ಟ್ 3 : ಪ್ರವಾಸಕ್ಕೆ ಬಂದಿದ್ದ ಇಂಜಿನಿಯರ್ ಒಬ್ಬರು ಕೆರೆಯಲ್ಲಿ ಬೋಟಿಂಗ್ ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಪಿರಿಯಾಪಟ್ಟಣ ತಾಲೂಕು ಬಿಲಗುಂದ ಗ್ರಾಮದ ಕೆಸರೆಕೆರೆಯಲ್ಲಿ ಈ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರು ಮೂಲದ ಶ್ರೀನಿವಾಸನ್ ಅವರ ಮಗ ಐ.ಎಸ್.ಎಸ್ ಕಾರ್ತಿಕ್ ಮೃತಪಟ್ಟಿರುವ ವ್ಯಕ್ತಿ. ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದಾಗ ನಿನ್ನೆ ಸಂಜೆ ಶವ ಪತ್ತೆಯಾಗಿದೆ.

 ಈಜಲು ಹೋಗಿ ಕಾವೇರಿ ನದಿ ಪಾಲಾದ ವಿದ್ಯಾರ್ಥಿಗಳು ಈಜಲು ಹೋಗಿ ಕಾವೇರಿ ನದಿ ಪಾಲಾದ ವಿದ್ಯಾರ್ಥಿಗಳು

ಕೊಪ್ಪ ಗ್ರಾಮದಲ್ಲಿರುವ ಅಡ್ವೆಂಚರ್ ಎಂಬ ಹೆಸರಿನ ಬೋಟಿಂಗ್ ತಂಡ ಅನುಮತಿ ಪಡೆದು ನಾಲ್ವರು ಜಂಟಿ ಮಾಲೀಕತ್ವದಲ್ಲಿ ನಡೆಸುತ್ತಿದೆ. ಕೊಯಮತ್ತೂರಿನಿಂದ 40 ಮಂದಿ ಪ್ರವಾಸಿಗರು ಅಕ್ಕಪಕ್ಕದಲ್ಲಿರುವ ಪ್ರವಾಸಿ ತಾಣವನ್ನು ಪರಿಚಯಿಸಿಕೊಡುವಂತೆ ಒತ್ತಾಯಿಸಿದಾಗ ಡಿಜಿ ಮತ್ತು ಸಿಜು ಎಂಬುವವರು ಈ ಜಾಗಕ್ಕೆ ಕರೆ ತಂದರು ಎನ್ನಲಾಗಿದೆ. ನಂತರ ಈ ತಾಣಕ್ಕೆ ಆಗಮಿಸಿದ ಪ್ರಯಾಣಿಕರು ಕೆರೆಯಲ್ಲಿ ಬೋಟಿಂಗ್ ಮಾಡುವಾಗ ಕಾರ್ತಿಕ್ ತನ್ನ ಮೊಬೈಲ್ ನಿಂದ ವಿಡಿಯೊ ತೆಗೆದುಕೊಳ್ಳುವಾಗ ಆಯತಪ್ಪಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

Boy Died While Capturing Video In Kesarakere

ಪ್ರಕರಣವನ್ನು ಬೆಟ್ಟದಪುರ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

English summary
Tamil Nadu boy drowned while capturing photo in Kesara Kere at Bilagunda village in Periyapatna taluk. He was trying to take a photo by his phone. He accidentally slipped into the water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X