ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗೃಹಸಚಿವ ಪರಮೇಶ್ವರ

By ವಿಕಾಸ್ ನಂಜಪ್ಪ
|
Google Oneindia Kannada News

ಮೈಸೂರು, ಆಗಸ್ಟ್ 01: ಮೈಸೂರಿನ ನ್ಯಾಯಾಲಯವೊಂದರಲ್ಲಿ ಸೋಮವಾರ ಸಂಜೆ ಸ್ಫೋಟ ಸಂಭವಿಸಿದೆ. ನ್ಯಾಯಾಲಯದ ಹಿಂಬದಿಯಲ್ಲಿರುವ ಶೌಚಾಲಯದಲ್ಲಿ ಭಾರಿ ಶಬ್ದ ಕೇಳಿ ಬಂದಿದ್ದು, ಶೌಚಾಲಯದ ಕಿಟಕಿ, ಬಾಗಿಲುಗಳು ಧ್ವಂಸಗೊಂಡಿವೆ.

ಇತ್ತೀಚಿನ ಅಪ್ಡೇಟ್ಸ್:

* ಮೈಸೂರು ಕೋರ್ಟ್ ಆವರಣಕ್ಕೆ ಭೇಟಿ ನೀಡಿದ ಗೃಹಸಚಿವ ಜಿ ಪರಮೇಶ್ವರ ಅವರು ಸ್ಫೋಟ ಬಗ್ಗೆ ಮಾಹಿತಿ ಪಡೆದುಕೊಂಡರು.
* ಘಟನೆ ಹಿನ್ನಲೆ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ವಿಧಿ ವಿಜ್ಞಾನ ತಂಡ ನೀಡುವ ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ.
* ಮೈಸೂರು ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಘಟನಾ ಸ್ಥಳದಲ್ಲಿದ್ದಾರೆ.
* ಕೋರ್ಟ್ ಆವರಣದಲ್ಲಿ 3 ಬ್ಯಾಟರಿ ಸೆಲ್ ಗಳು ಪತ್ತೆಯಾಗಿವೆ.
* ಘಟನಾ ಸ್ಥಳದಲ್ಲಿ ಒಂದು ಸಿಮ್ ಕಾರ್ಡ್ ಹಾಗೂ ಅಮೋನಿಯಂ ನೈಟ್ರೇಟ್ ಪುಡಿ ಪತ್ತೆ.
* ಶ್ವಾನದಳ, ಬಾಂಬ್ ನಿಷ್ರ್ಕಿಯ ದಳದಿಂಡ ತೀವ್ರ ತಪಾಸಣೆ

Blast in Mysuru court in Public toilet room

ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಸಿಬ್ಬಂದಿ ದೌಡಾಯಿಸಿದ್ದಾರೆ, ಲಕ್ಷ್ಮಿಪುರಂ ಪೊಲೀಸರು ಕೋರ್ಟ್ ಆವರಣದಲ್ಲಿ ತಪಾಸಣೆ ನಡೆಸಿದ್ದಾರೆ.

ಸಾರ್ವಜನಿಕ ಶೌಚಾಲಯದಲ್ಲಿ ಸ್ಫೋಟದ ಸದ್ದು ಕೇಳಿಬಂದಿದ್ದು, ಸಂಜೆ 4.15 ರಿಂದ 4.25 ರ ಸಮಯದಲ್ಲಿ ಭಾರಿ ಸದ್ದು ಕೇಳಿ ಬಂದಿತು ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.

Blast in Mysuru court in Public toilet room

ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಸಾವು ನೋವು ಸಂಭವಿಸಿಲ್ಲ. ಶೌಚಾಲಯದಲ್ಲಿ ಇನ್ನೂ ಸ್ಫೋಟಕ ವಸ್ತುಗಳು ಇರುವ ಶಂಕೆ ವ್ಯಕ್ತವಾಗಿದೆ. ಮೇಲ್ನೋಟಕ್ಕೆ ಇದು ಕಚ್ಚಾ ಬಾಂಬ್ (crude bomb)ಸ್ಫೋಟ ಎಂದು ಶಂಕಿಸಲಾಗಿದೆ.

English summary
The blast occurred in the public toilet in the Mysuru court. The police suspect that it may be a crude bomb. The Jayalakshmipuram police have visited the spot. The incident occurred at between 4.15 and 4.30 PM. No deaths reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X