ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಬಿನಿ ಹಿನ್ನೀರಿನ ಕಪ್ಪು ಚಿರತೆಯ ಹಳೇ ಫೋಟೊ ವೈರಲ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 7: ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಕಪ್ಪು ಚಿರತೆಯ ಹಳೆ ಫೋಟೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊಗಳು ವೈರಲ್ ಆಗುತ್ತಿರುವ ಹೊತ್ತಿನಲ್ಲೇ ಎರಡು ದಿನಗಳ ಹಿಂದೆಯೂ ಈ ಕಪ್ಪು ಚಿರತೆ ಕಾಣಿಸಿಕೊಂಡಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಕಪ್ಪು ಚಿರತೆಯೊಂದು ಕಳೆದ ಎರಡು ವರ್ಷಗಳಿಂದ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿದ್ದು, ಸಫಾರಿಗೆ ಬರುವ ಹವ್ಯಾಸಿ ಛಾಯಾಗ್ರಾಹಕರು ಇದರ ನೂರಾರು ಫೋಟೊಗಳನ್ನು ತೆಗೆದಿದ್ದರು. ಇದೀಗ ಶಾಝ್ ಝಂಗ್ ಎನ್ನುವ ಛಾಯಾಗ್ರಾಹಕ ತೆಗೆದಿರುವ ಕಪ್ಪು ಚಿರತೆಯ ಹಳೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಬಂಟ್ವಾಳದಲ್ಲಿ ಪತ್ತೆಯಾಯಿತು ಅತಿ ಅಪರೂಪದ ಬಿಳಿ ಹೆಬ್ಬಾವುಬಂಟ್ವಾಳದಲ್ಲಿ ಪತ್ತೆಯಾಯಿತು ಅತಿ ಅಪರೂಪದ ಬಿಳಿ ಹೆಬ್ಬಾವು

Black Panther Photoes At Kabini Nagarhole National Park Viral

ಇದಾದ ನಂತರ ಕಬಿನಿಯಲ್ಲಿನ ಈ ಕಪ್ಪು ಚಿರತೆಯ ಹಲವು ಛಾಯಾಗ್ರಾಹಕರ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಕಪ್ಪು ಚಿರತೆಯು ವಂಶವಾಹಿಯ ವ್ಯತ್ಯಾಸದಿಂದ ಈ ರೀತಿ ಕಪ್ಪು ಬಣ್ಣವಾಗಿ ಜನಿಸಿದ್ದು, ಸಾಮಾನ್ಯ ಚಿರತೆಗಳ ಜೊತೆ ಕಾದಾಡುತ್ತಿರುವ ಚಿತ್ರ, ಮಿಲನದ ಫೋಟೋಗಳು, ವಿಡಿಯೋಗಳು ವೈರಲ್ ಆಗಿವೆ ಎಂದು ಪಶು ವೈದ್ಯ ಡಾ.ನಾಗರಾಜ್ ಮಾಹಿತಿ ನೀಡಿದ್ದಾರೆ.

English summary
Black Panther photoes took before 2 years at Kabini backwater Nagarhole National Park viral in social media,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X