ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮುಖ್ಯಮಂತ್ರಿಗಳೇ ಮೊದಲು ಗ್ರಾಮ ವಾಸ್ತವ್ಯದ ನಾಟಕ ನಿಲ್ಲಿಸಿ'

|
Google Oneindia Kannada News

ಮೈಸೂರು, ಜೂನ್ 17: ಮುಖ್ಯಮಂತ್ರಿಗಳೇ, ಮೊದಲು ಗ್ರಾಮ ವಾಸ್ತವ್ಯದ ನಾಟಕ ನಿಲ್ಲಿಸಿ. ರಾಜ್ಯದ ಶೇ.80ರಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರಗಾಲ ಇದೆ. ಈ ವೇಳೆ ನಿಮಗೇಕೆ ಗ್ರಾಮವಾಸ್ತವ್ಯ ಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು, ಚಾಮರಾಜನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ರಾಜ್ಯಾದ್ಯಂತ ತೀವ್ರ ಬರಗಾಲವಿದೆ. ಗ್ರಾಮ ವಾಸ್ತವ್ಯ ಮಾಡುವ ಬದಲು ಬರ ಪರಿಸ್ಥಿತಿ ನಿರ್ವಹಿಸುವ ಬಗ್ಗೆ ಗಮನ ಕೊಡಿ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ನಿಗಾವಹಿಸಿ ಎಂದು ಸಿಎಂ ಎಚ್ಡಿಕೆಗೆ ತಿಳಿಸಿದರು.

 ಬಿಜೆಪಿ ಅಹೋರಾತ್ರಿ ಧರಣಿ: ರಸ್ತೆ ಬದಿ ನಿದ್ದೆಗೆ ಜಾರಿದ ಮುಖಂಡರು ಬಿಜೆಪಿ ಅಹೋರಾತ್ರಿ ಧರಣಿ: ರಸ್ತೆ ಬದಿ ನಿದ್ದೆಗೆ ಜಾರಿದ ಮುಖಂಡರು

ಜಿಂದಾಲ್ ಕಂಪನಿಗೆ ಭೂಮಿ ಹಂಚುವ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ಜಿಂದಾಲ್‌ಗೆ ಭೂಮಿ ಪರಭಾರೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ, ಕೈಗೊಳ್ಳುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ನಾವು ಹೋರಾಟ ರೂಪಿಸಿದ್ದೆವು. ನಾನು ಧರಣಿ ಮಾಡುವುದು ವಾರದ ಹಿಂದೆಯೇ ಮುಖ್ಯಮಂತ್ರಿಗೆ ಗೊತ್ತಿತ್ತು. ಆಗಲೇ ಮಾತುಕತೆಗೆ ಕರೆಯಬಹುದಿತ್ತು. ಆದರೆ ನಾವು ಅಹೋರಾತ್ರಿ ಧರಣಿ ಮುಗಿಸಿ ಮೆರವಣಿಗೆ ಹೊರಡುವ ಹೊತ್ತಿಗೆ ಸಿಎಂ ಪತ್ರ ಬರೆದಿದ್ದಾರೆ.

BJP state President BS Yaddyurappa reacts on CM Kumaraswamy grama vastavya and Jindal case

 ಮಂಡ್ಯದ ಜನತೆಯನ್ನು ನಿಂದಿಸಿದ ಸಚಿವ ತಮ್ಮಣ್ಣಗೆ ಬಿಎಸ್‌ವೈ ಏನಂದ್ರು? ಮಂಡ್ಯದ ಜನತೆಯನ್ನು ನಿಂದಿಸಿದ ಸಚಿವ ತಮ್ಮಣ್ಣಗೆ ಬಿಎಸ್‌ವೈ ಏನಂದ್ರು?

ಯಡಿಯೂರಪ್ಪ ಸಹಕಾರ ಕೊಡಲಿಲ್ಲ. ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಜಿಂದಾಲ್‌ನಂತಹ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ನನಗೆ ರಾಜ್ಯದ ಒಳಿತು ಮಾತ್ರ ಮುಖ್ಯ ಎಂದು ತಿಳಿಸಿದರು.

English summary
BJP state President BS Yadiyurappa reacts on CM Kumaraswamy grama vastavya and Jindal case. State is suffering from shortage of drinking water. At this time, why you Kumaraswamy is interested about grama vastavya he asked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X