ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಹೇಳನಕಾರಿ ಹೇಳಿಕೆ: ಪ್ರಕಾಶ್ ರಾಜ್‌ಗೆ ಸ್ಸಾರಿ ಎಂದ ಪ್ರತಾಪ್ ಸಿಂಹ

|
Google Oneindia Kannada News

Recommended Video

ಪ್ರಕಾಶ್ ರಾಜ್‌ಗೆ ಸ್ಸಾರಿ ಎಂದ ಪ್ರತಾಪ್ ಸಿಂಹ

"ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಪ್ರತಾಪ ಸಿಂಹ, ಟ್ವೀಟರ್, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ್ದಲ್ಲದೆ ಟ್ರೋಲ್ ಗೂಂಡಾಗಿರಿ ನಡೆಸಿದ್ದಾರೆ" ಎಂದು ನಟ, ರಾಜಕಾರಣಿ ಪ್ರಕಾಶ್ ರೈ ಅವರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಹೂಡಿದ್ದ 1 ರೂಪಾಯಿ ಮೌಲ್ಯದ ಮಾನನಷ್ಟ ಮೊಕದ್ದಮೆ ಪ್ರಕರಣ ಬಹುತೇಕ ಸುಖಾಂತ್ಯ ಕಂಡಿದೆ.

"ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು" ಎಂದು ಆಗ್ರಹಿಸಿ ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಆದರೆ ಅದಕ್ಕೆ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಕಾನೂನು ಸಮರಕ್ಕೆ ಈಗ ಮುಂದಾಗಿದ್ದರು. ಪ್ರತಾಪ್ ಸಿಂಹ ಅವರು ಜನಪ್ರತಿನಿಧಿ ಕೋರ್ಟಿಗೆ ಹಾಜರಾಗಿ ಐದು ಗಂಟೆಗಳ ಕಾಲ ಕುಳಿತು ಬಂದಿದ್ದರು.

ವರ್ಷಗಳ ಹಿಂದಿನ ಈ ಪ್ರಕರಣಕ್ಕೆ ತೆರೆ ಎಳೆಯುವ ಸಲುವಾಗಿ,ಸಾಮಾಜಿಕ ಜಾಲತಾಣಗಳಲ್ಲಿ ಶುರುವಾರ ಈ ಯುದ್ಧಕ್ಕೆ ಪ್ರತಾಪ್ ಸಿಂಹ ಅವರು ಟ್ವೀಟ್ ಮೂಲಕವೇ ಅಂತ್ಯ ಹಾಡಿದ್ದಾರೆ.

ಟ್ವೀಟರ್​ನಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.

ಟ್ವೀಟರ್​ನಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.

ಅಂದು ಪ್ರಕಾಶ್ ರೈ ಹಾಗೂ ಅವರ ಕೌಟುಂಬಿಕ ವಿಚಾರದ ಬಗ್ಗೆ ಅವಹೇಳನಕಾರಿಯಾದ ಬರಹವನ್ನು ಪ್ರಕಟಿಸಿದ್ದರು. ಇಂದು ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಈ ಕುರಿತು ಇಂದು ಟ್ವೀಟರ್​ನಲ್ಲಿ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.

Array

ಪ್ರತಾಪ್ ಸಿಂಹ ಟ್ವೀಟ್

"ಆತ್ಮೀಯ ಪ್ರಕಾಶ್ ರೈ ಅವರೆ, ನಿಮ್ಮ ಹಾಗೂ ನಿಮ್ಮ ಕುಟುಂಬದ ಮಾನ ಹಾನಿಯಾಗುವಂತಹ ಬರಹವನ್ನು ನಾನು 2017 ಆಕ್ಟೋಬರ್ 2 ಮತ್ತು 3 ರಂದು ಬರೆದಿದ್ದೆ. ಆದರೆ, ಇದು ಅನಗತ್ಯ ಮತ್ತು ಮನಸ್ಸಿಗೆ ನೋವು ತರುವ ವಿಚಾರ ಎಂದು ಈಗ ಅರ್ಥಮಾಡಿಕೊಂಡಿದ್ದೇನೆ. ಹೀಗಾಗಿ ಈ ಟ್ವಿಟರ್ ಮತ್ತು ಎಫ್​ಬಿಯಲ್ಲಿ ಬರೆಯಲಾಗಿರುವ ಬರಹದ ಕುರಿತು ವಿಷಾಧಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರೈ ನೀಡಿದ ಉತ್ತರ

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, "ಧನ್ಯವಾದಗಳು ಪ್ರತಾಪ್ ಸಿಂಹ. ನಮ್ಮ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ, ವ್ಯಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವುದು ತಪ್ಪು. ನಾವು ಇಬ್ಬರೂ ಅವರವರ ಕ್ಷೇತ್ರದಲ್ಲಿ ವ್ಯಯಕ್ತಿಕವಾಗಿ ಉನ್ನತ ಮಟ್ಟಕ್ಕೆ ಏರಿದ್ದೇವೆ. ಹೀಗಾಗಿ ನಾವು ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುವುದು ನಮ್ಮ ಕರ್ತವ್ಯ, ನಿಮಗೆ ಶುಭವಾಗಲಿ" ಎಂದಿದ್ದಾರೆ.

**

ಪ್ರತಾಪ್ ಸಿಂಹ ಕ್ರಮಕ್ಕೆ ಬೆಂಬಲ

ಪ್ರತಾಪ್ ಸಿಂಹ ಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿ, ಅನೇಕರು ಟ್ವೀಟ್ ಮಾಡಿದ್ದಾರೆ, ಕೆಲವರು ಪ್ರತಾಪ್ ಅವರನ್ನು ಎರಡನೇ ಸಾವರ್ಕರ್ ಎಂದು ಮೂದಲಿಸಿದ್ದಾರೆ.

English summary
BJP MP Pratap Simha Apologies to Actor, Politician Prakash Raj regarding defamatory article and tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X