ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಪ್ರಣಾಳಿಕೆ ಭಗವದ್ಗೀತೆ ಇದ್ದ ಹಾಗೆ : ಡಿ ವಿ ಸದಾನಂದಗೌಡ

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಮೇ 7: ನಾನೇ ಅಭ್ಯರ್ಥಿ ಎಂದು ಭಾವಿಸಿ ಚಾಮರಾಜ ಕ್ಷೇತ್ರದಲ್ಲಿ ಎಲ್.ನಾಗೇಂದ್ರ ಅವರನ್ನು ಗೆಲ್ಲಿಸಿಕೊಡಿ ಎಂದು ಕೇಂದ್ರ ಸಚಿವ ವಿ.ಸದಾನಂದಗೌಡ ಮನವಿ ಮಾಡಿದರು.

ಚಾಮರಾಜ ಕ್ಷೇತ್ರದ ಕೆ.ಜಿ.ಕೊಪ್ಪಲಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆದರೆ, ಎಲ್.ನಾಗೇಂದ್ರ ಸ್ಥಳೀಯ ಎನ್ನುವ ಕಾರಣಕ್ಕೆ ಭಾರತೀಯ ಜನತಾ ಪಕ್ಷ ಅವಕಾಶ ನೀಡಿದೆ. ನಾಗೇಂದ್ರ ಅವರು ಗೆದ್ದರೆ ನಾನೇ ಗೆದ್ದಂತೆ, ಚಾಮರಾಜ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡು ಹೋಗಲಿದ್ದೇವೆ ಎಂದು ಭರವಸೆ ನೀಡಿದರು.

 ಸಿದ್ದರಾಮಯ್ಯ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಸದಾನಂದಗೌಡ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ: ಸದಾನಂದಗೌಡ

ಇದೇ ವೇಳೆ ಕೆ.ಜಿ.ಕೊಪ್ಪಲು, ಹೆಬ್ಬಾಳ, ವಿವಿ ಮೊಹಲ್ಲಾದ ದಲಿತರ ಕೇರಿ, ಕುಕ್ಕರಹಳ್ಳಿ, ಸರಸ್ವತಿಪುರಂ, ವಿವಿ ಮೊಹಲ್ಲಾದ ಹೊಸುರು ಭಾಗಗಳಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದರು. ತಿಲಕ್‍ನಗರದಲ್ಲಿ ನಡೆದ ಪ್ರಚಾರದಲ್ಲಿ ನಿವೃತ್ತ ಪೊಲೀಸ್ ಆಯುಕ್ತ ಕೆ.ಶಿವರಾಂ, ಸಿ.ಬಸವೇಗೌಡ, ಮಾಜಿ ನಗರ ಪಾಲಿಕೆ ಸದಸ್ಯ ನಿಂಗಣ್ಣ, ಯುವ ಮೋರ್ಚಾ ಅಧ್ಯಕ್ಷ ದೇವರಾಜ, ಗಣೇಶ್, ಸಂಖ್ಯಾಶಾಸ್ತ್ರದ ಸ್ವಾಮಿಜಿ ಜಯಶ್ರೀನಿವಾಸ್ ಭಾಗವಹಿಸಿದ್ದರು.

BJP Manifesto is Like Bhagavdgitha : Sadanadagowda

ಬಿಜೆಪಿ ಪ್ರಣಾಳಿಕೆ ಭಗವದ್ಗೀತೆ ಇದ್ದ ಹಾಗೆ : ನಗರದ ಮೂರು ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ರೂಪಿಸಿರುವ ಪ್ರಣಾಳಿಕೆಯನ್ನು ನಗರದ ಪತ್ರಕರ್ತರ ಭವನದಲ್ಲಿ ಕೇಂದ ಸಚಿವ ಡಿ.ವಿ.ಸದಾನಂದಗೌಡ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆ ಭಗವದ್ಗೀತೆ ಇದ್ದ ಹಾಗೇ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ನಗರದ ಮೂರು ಕ್ಷೇತ್ರಗಳಾದಚಾಮರಾಜ, ನರಸಿಂಹ ರಾಜ ಹಾಗೂ ಕೃಷ್ಣರಾಜ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಣಾಳಿಕೆ ಪೂರಕವಾಗಿದೆ ಎಂದು ಹೇಳಿದರು.

ಪಕ್ಷವು ಪ್ರತಿ ಕ್ಷೇತ್ರಕ್ಕೂ ಅಲ್ಲಿಯದೇ ಪರಿಸ್ಥಿತಿಗೆ ಅನುಗುಣವಾಗಿ ಪ್ರಣಾಳಿಕೆ ಸಿದ್ಧಪಡಿಸಿದ್ದು, ಸಾಂಸ್ಕೃತಿಕ ನಗರಿ ಮೈಸೂರಿಗೂ ಇದೇ ರೀತಿ ಸಿದ್ಧಪಡಿಸಿ, ಇಲ್ಲಿನ ಪಾರಂಪರಿಕ ಕಟ್ಟಡ, ಕುಡಿಯುವ ನೀರು, ಸ್ವಚ್ಛ ಮೈಸೂರು, ಆರೋಗ್ಯ, ಪ್ರವಾಸೋದ್ಯಮ ಮೊದಲಾದವನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

BJP Manifesto is Like Bhagavdgitha : Sadanadagowda

ನಾವು ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಅದರ ಅವಶ್ಯಕತೆಯೂ ನಮಗೆ ಇಲ್ಲ. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದವರೆಂಬ ಕಾರಣದಿಂದ ಅವರನ್ನು ಪ್ರಧಾನಿ ನರೇಂದ್ರ ಮೋದಿ ಗೌರವಿಸಿ ಮಾತನಾಡುತ್ತಿದ್ದರು ಅಷ್ಟೇ. ಆದರೆ ಮಾರನೇ ದಿನ ಮೋದಿ ಮಾಡಿದ ಟೀಕೆಗಳ ಬಗ್ಗೆ ಮಾತುಗಳೇ ಕೇಳಿ ಬರುವುದಿಲ್ಲ. ವಾಸ್ತವ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುವುದು ಹಲವರಿಗೆ ಕಷ್ಟವಾಗುವುದೇ ಇದಕ್ಕೆ ಕಾರಣವಾಗಿದೆ ಎಂದು ಲೇವಡಿ ಮಾಡಿದರು.

ಜಯನಗರ ಕ್ಷೇತ್ರ ಹೊರತುಪಡಿಸಿ 27 ಕ್ಷೇತ್ರಗಳಲ್ಲಿ ಚುನಾವಣೆ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಯದು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬಹೊಸದಾಗಿ ನೇಮಕವಾಗಿರುವ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

BJP Manifesto is Like Bhagavdgitha : Sadanadagowda

ಮತದಾರರನ್ನು ಸೆಳೆಯಲು ಸಾಕಷ್ಟು ಕಾರ್ಯಕ್ರಮ ಕೈಗೊಂಡಿದ್ದೇವೆ. ಅಂತಿಮವಾಗಿ ಒಟ್ಟು 7,56,000 ಮತದಾರರನ್ನು ಮತಪಟ್ಟಿಗೆ ಸೇರಿಸಲಾಗಿದೆ. ನಗರದಲ್ಲಿ ಒಟ್ಟು 91 ಲಕ್ಷ ಮತದಾರರಿದ್ದಾರೆ. 26 ಸಾವಿರ ಅಂಗವಿಕಲ ಮತದಾರರ ಮತದಾನಕ್ಕೆ ವಿಶೇಷ ಕ್ರಮ ಕೈಗೊಂಡಿದ್ದೇವೆಈತನಕ ಮಾದರಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅಕ್ರಮ ಹಣ 6 ಕೋಟಿ ರೂ, ಸರಕು ಹಂಚಿಕೆ 32 ಪ್ರಕರಣ ದಾಖಲಿಸಿ 17 ಕೋಟಿ ರೂ. ಮೌಲ್ಯದ ವಸ್ತು ವಶ ಪಡಿಸಿಕೊಳ್ಳಲಾಗಿದೆ, ಒಟ್ಟಾರೆ 29 ಕೋಟಿ ರೂ. ಸೀಜ್ ಮಾಡಲಾಗಿದೆ.. ಎಂದು ತಿಳಿಸಿದ್ದಾರೆ.

English summary
Union minister D.V. Sadanand Gowda was participated in campaign at Chamaraja constituency in Mysuru on Monday and appealed the voters to consider the Bjp candidate as if himself and support and BJP Manifesto is Like Bhagavdgitha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X