ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಕಾದು ನೋಡಿ" ಎಂದು ಮಾರ್ಮಿಕವಾಗಿ ನುಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 18: "ನಾವು ಆಪರೇಷನ್ ಕಮಲ ಮಾಡೋದಿಲ್ಲ. ಬಿಜೆಪಿಯ ಬಾಗಿಲು ಯಾವಾಗಲೂ ತೆರೆದಿರುತ್ತದೆ" ಎಂದು ಪರೋಕ್ಷವಾಗಿ ತಮ್ಮ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.

ವಿಧಾನ ಪರಿಷತ್ ಚುನಾವಣೆಯಲ್ಲಿ ಜಿ.ಟಿ ದೇವೇಗೌಡ ಬಿಜೆಪಿಗೆ ವೋಟ್ ಹಾಕಿದ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, "ಮುಂದೆ ನೀವೇ ಕಾದು ನೋಡಿ ರಾಜಕೀಯದಲ್ಲಿ ಏನಾಗಲಿದೆ ಎಂದು" ಎಂದು ಮಾರ್ಮಿಕವಾಗಿ ಮಾತನಾಡಿದರು.

ಸಂಪುಟ ಪುನಾರಚನೆ: ಹಾಲಿ ಸಚಿವರಿಗೆ ಆತಂಕ ತಂದ ಕಟೀಲ್ ಹೇಳಿಕೆಸಂಪುಟ ಪುನಾರಚನೆ: ಹಾಲಿ ಸಚಿವರಿಗೆ ಆತಂಕ ತಂದ ಕಟೀಲ್ ಹೇಳಿಕೆ

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಕಾಲೇಜು ವಿದ್ಯಾರ್ಥಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, "ಈ ದೇಶದಲ್ಲಿದ್ದು ಬೇರೆ ರಾಷ್ಟ್ರಕ್ಕೆ ಜೈಕಾರ ಹಾಕೋದು ರಾಷ್ಟ್ರ ವಿರೋಧಿ. ರಾಷ್ಟ್ರ ವಿರೋಧಿ ಕೆಲಸ ಯಾರೇ ಮಾಡಿದರೂ ಅದು ತಪ್ಪು" ಎಂದರು.

Bjp Is Open Always Said Bjp State President Nalin Kumar Kateel

ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಹಿಂದೂ ಕಾರ್ಯಕರ್ತರು ಹಲ್ಲೆ ನಡೆಸಿದ ವಿಚಾರವಾಗಿ ಮಾತನಾಡಿ, "ದೇಶದ್ರೋಹಿಗಳಿಗೆ ಹಿಂದೂ ಅಥವಾ ಬೇರೆ ಧರ್ಮದವರು ಅಂತೇನಿಲ್ಲ. ದೇಶದ್ರೋಹಿಗಳ ಮೇಲಿನ ಕೋಪ ಅಷ್ಟೆ" ಎಂದು ಹಿಂದೂ ಕಾರ್ಯಕರ್ತರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

English summary
Responding to the GT Deve Gowda voted for the BJP in the Vidhan Sabha elections, Nalin kumar kateel said, "Wait and see what happens in politics",
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X