ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮೇಯರ್ ಹುದ್ದೆಗೆ ನಾವು ಆಪರೇಷನ್ ಮಾಡಲ್ಲ: ರಾಮದಾಸ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 16: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಗಾದಿ ಹಿಡಿಯಲು ಬಿಜೆಪಿ ಯಾವ ಪ್ರಯತ್ನ ಮಾಡುತ್ತಿಲ್ಲ. ಆಪರೇಷನ್ ಕಮಲವನ್ನೂ ಮಾಡುವುದಿಲ್ಲವೆಂದು ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈ ಬಾರಿಯೂ ಮೈತ್ರಿಯನ್ನು ಮುಂದುವರಿಸಿದೆ. ಅವರಲ್ಲೇ ಇರುವ ಸಮಸ್ಯೆಗಳಿಂದ ರೆಸಾರ್ಟ್ ಗೆ ಹೋಗುತ್ತಿದ್ದಾರೆ. ನಾವು ಆಪರೇಷನ್ ಕಮಲ ಮಾತುತ್ತಿಲ್ಲ, ಮಾಡೋದು ಇಲ್ಲ ಎಂದು ತಿಳಿಸಿದರು.

ತನ್ವೀರ್ ಸೇಠ್ ಧ್ವನಿ ಕೇಳಿ ಕಣ್ಣೀರಿಟ್ಟ ಬೆಂಬಲಿಗರುತನ್ವೀರ್ ಸೇಠ್ ಧ್ವನಿ ಕೇಳಿ ಕಣ್ಣೀರಿಟ್ಟ ಬೆಂಬಲಿಗರು

ಬಿಜೆಪಿ ಪಕ್ಷ ಮೈಸೂರು ಪಾಲಿಕೆಯಲ್ಲಿ ವಿರೋಧ ಪಕ್ಷವಾಗಿಯೇ ಕೆಲಸ ಮಾಡುತ್ತದೆ, ಸಕರಾತ್ಮಕ ಆಡಳಿತಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ಮುಂದಿನ ನಡೆ ಯಾವ ರೀತಿ ಇರಬೇಕೆಂಬುದನ್ನ ನಿರ್ಧರಿಸಲು ಜನವರಿ 17 ರಂದು ಸಭೆ ಕರೆದಿದ್ದೇವೆ, ಸಭೆಯಲ್ಲಿ ಜವಾಬ್ದಾರಿ ನೀಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡುತ್ತೇವೆ ಎಂದು ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ ನೀಡಿದರು.

ಅಧಿಕಾರಕ್ಕಿಂತ ಬಿಜೆಪಿಗೆ ಪಕ್ಷ ಮುಖ್ಯ

ಅಧಿಕಾರಕ್ಕಿಂತ ಬಿಜೆಪಿಗೆ ಪಕ್ಷ ಮುಖ್ಯ

ಸಚಿವ ಸಂಪುಟ ರಚನೆಗೆ ಮಾಜಿ ಸಚಿವ ಎಚ್.ವಿಶ್ವನಾಥ್ ಎಚ್ಚರಿಕೆ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ರಾಮದಾಸ್, ವಿಶ್ವನಾಥ್ ನಮ್ಮ ತಂದೆಯ ಸ್ಥಾನದಲ್ಲಿ ಇದ್ದಾರೆ. ಅವರು ಎಲ್ಲಾ ಪಕ್ಷದಲ್ಲಿಯೂ ಆಡಳಿತ ವ್ಯವಸ್ಥೆಗಳನ್ನು ತಿಳಿದುಕೊಂಡಿದ್ದಾರೆ. ಅವರು ಯಾವ ದೃಷ್ಟಿಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದರು.

ಬಿಜೆಪಿ ಕೇಡರ್ ಯಿಂದ ಬಂದ ಪಕ್ಷ. ಸರ್ಕಾರಕ್ಕಿಂತ ಪಕ್ಷ ಮುಖ್ಯ ಪಕ್ಷಕ್ಕಿಂತ ದೇಶ ಮುಖ್ಯ ಎಂದುಕೊಂಡವರು ನಾವು. ನಾವು ಪಕ್ಷವನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚಿಸುತ್ತೇವೆ ಹೊರತು, ಹಿರಿಯರ ಕಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಬಿಜೆಪಿಯಂತಹ ಹಾಲಿನ ವಾತಾವರಣದಲ್ಲಿ, ಎಚ್.ವಿಶ್ವನಾಥ್ ಸಕ್ಕರೆಯಂತೆ ಕರಗಿ ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ಹೇಳಿದರು.

ಯಡಿಯೂರಪ್ಪನವರ ನಿರ್ಧಾರಕ್ಕೆ ನಾವೆಲ್ಲ ಬದ್ಧ

ಯಡಿಯೂರಪ್ಪನವರ ನಿರ್ಧಾರಕ್ಕೆ ನಾವೆಲ್ಲ ಬದ್ಧ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಕಗ್ಗಂಟು ಇಲ್ಲ. ಇದೊಂದು ಸ್ಪರ್ಧೆ ಇರುವಂತಹ ಜಾಗ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ , ಎಲ್ಲಿ ಸೈಲೆಂಟ್ ಆಗಿ ಕೆಲಸ ಮಾಡುತ್ತಾರೋ ಅಲ್ಲಿ ಸಾಮರಸ್ಯ ಕಾಣಬಹುದಾಗಿದೆ ಎಂದು ಪಕ್ಷವನ್ನು ಸಮರ್ಥಿಸಿಕೊಂಡರು.

"ನನ್ನದೇನಿದ್ದರೂ ಸೈಲೆಂಟ್ ರಾಜಕಾರಣ" ಎಂದು ಎಚ್ ಡಿಕೆಗೆ ತಿವಿದ ಜಿಟಿಡಿ

ಸಂಪುಟದಲ್ಲಿ ಅಪೇಕ್ಷೆ ಪಡುವವರು ಹೇಳಿಕೆ ನೀಡೋದರಲ್ಲಿ ತಪ್ಪೆನಿಲ್ಲ. ಬಿ.ಎಸ್.ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿ, ನಮ್ಮ ತಂದೆ ಸಮಾನರು. ಅವರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಸದಕ್ಕೆ ಬದ್ಧರಾಗಿರುತ್ತೇವೆ ಎಂದು ರಾಮದಾಸ್ ತಿಳಿಸಿದರು.

ಶ್ರೀಗಳಿಗೆ ಮೈಸೂರೆಂದರೆ ಅಚ್ಚುಮೆಚ್ಚು

ಶ್ರೀಗಳಿಗೆ ಮೈಸೂರೆಂದರೆ ಅಚ್ಚುಮೆಚ್ಚು

ಪೇಜಾವರ ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಜನವರಿ 19 ರಂದು ಭಾವ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯ ವ್ಯಕ್ತಿಗಳು ಬರುತ್ತಿದ್ದಾರೆ. ಶ್ರೀಗಳ ಹಗಲಿಕೆಯಿಂದ ಭಕ್ತರು ನೋವಿನಿಂದ ಇನ್ನೂ ಹೊರ ಬಂದಿಲ್ಲ‌. ಎಲ್ಲಾ ಸಮಾಜದವರನ್ನ ಸಮಾನವಾಗಿ ಕಾಣಿತ್ತಿದ್ರು. ಶ್ರೀಗಳಿಗೆ ಪೇಜಾಮರ ಮಠ‌ ಬಿಟ್ರೆ, ಅವರಿಗೆ ಇಷ್ಟವಾದ ಸ್ಥಳ ಅಂದ್ರೆ ಅದು ಮೈಸೂರು.

ಜೈಲು ಖೈದಿಗಳಿಗೂ ಊಟ ಹಾಕಿಸಿದ್ದಾರೆ

ಜೈಲು ಖೈದಿಗಳಿಗೂ ಊಟ ಹಾಕಿಸಿದ್ದಾರೆ

ಮೈಸೂರಿನಲ್ಲಿ ನಡೆದ ಚಾತುರ್ಮಾಸದಲ್ಲಿ ಪೌರ ಕಾರ್ಮಿಕರಿಗೆ ಅವರು ಊಟದ ವ್ಯವಸ್ಥೆ ಮಾಡಿದ್ರು. ಅಷ್ಟೆ ಅಲ್ಲದೇ ಅವರು ಸಹ ಎಲ್ಲರ ಜೊತೆ ಸೇರಿ ಊಟ ಮಾಡಿದ್ದರು.

ಜೈಲಿಗೂ ಹೋಗಿ ಖೈದಿಗಳ ವಾಸ್ತವತೆ ಅರಿತಿದ್ದರು. ಜೈಲು ಖೈದಿಗಳಿಗೆ ಊಟದ ವ್ಯವಸ್ಥೆ ಮಾಡಿಸಿದ್ದರು. ಶ್ರೀಗಳ ಸಂಪೂರ್ಣ ಚಿತ್ರಣವನ್ನ ಜನರಿಗೆ ತಿಳಿಸಬೇಕಿದೆ ಎಂದು ಮೈಸೂರಿನ ಖಾಸಗಿ ಹೋಟೆಲ್‌ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೃಷ್ಣರಾಜಶಾಸಕ ಎಸ್.ಎ.ರಾಮದಾಸ್ ಹೇಳಿಕೆ.

English summary
We are not trying to catch the mayor of Mysuru Corporation, Krishnaraja BJP MLA SA Ramadas said That.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X