ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಹಿಂದುಳಿದ ವರ್ಗದವರಿಗೆ ಲೋಕಸಭಾ ಟಿಕೆಟ್ ಕೊಟ್ಟಿಲ್ಲ:ವಿಜಯ್ ಶಂಕರ್

|
Google Oneindia Kannada News

Recommended Video

Lok Sabha Election 2019 : ಮೈಸೂರು ಕೊಡಗು ಕ್ಷೇತ್ರಕ್ಕೆ ಸಿ.ಎಚ್.ವಿಜಯಶಂಕರ್ ಕಾಂಗ್ರೆಸ್ ಅಭ್ಯರ್ಥಿ

ಮೈಸೂರು, ಮಾರ್ಚ್ 25: ನಾಡ ಅಧಿದೇವತೆ ಎಂದೇ ಹೆಸರಾದ ಚಾಮುಂಡಿ ತಾಯಿಯ ಆಶೀರ್ವಾದ ಪಡೆದುಕೊಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮತ್ತು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯ್ ಶಂಕರ್ ಇಂದು ಲೋಕಸಭಾ ಅಖಾಡಕ್ಕೆ ಹುರಿಯಾಳುಗಳಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಂದು ಬೆಳಗಿನ ಜಾವವೇ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಸಿಎಚ್ ವಿಜಯ್ ಶಂಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ದುಷ್ಟ ಶಕ್ತಿಗಳ ನಾಶ ಮಾಡುವ ಅಧಿದೇವತೆಯ ದರ್ಶನ ಪಡೆದಿದ್ದೇನೆ. ಇಂದು ನಾಮಪತ್ರ ಸಲ್ಲಿಸಲಿದ್ದೇನೆ. ಅದಕ್ಕೂ ಮೊದಲು ಕುಟುಂಬ ಸಮೇತ ದೇವಿಯ ದರ್ಶನಕ್ಕೆ ನಾನು ಬಂದಿದ್ದೇನೆ ಎಂದರು.

 ಮೈತ್ರಿ ಅಭ್ಯರ್ಥಿಯಾಗಿ ಮೈಸೂರಿನಲ್ಲಿ ಮಾ.25 ರಂದು ನಾಮಪತ್ರ ಸಲ್ಲಿಸಲಿರುವ ವಿಜಯಶಂಕರ್‌ ಮೈತ್ರಿ ಅಭ್ಯರ್ಥಿಯಾಗಿ ಮೈಸೂರಿನಲ್ಲಿ ಮಾ.25 ರಂದು ನಾಮಪತ್ರ ಸಲ್ಲಿಸಲಿರುವ ವಿಜಯಶಂಕರ್‌

ಬಿಜೆಪಿಯವರು ಹಿಂದುಳಿದ ವರ್ಗದವರಿಗೆ ಲೋಕಸಭಾ ಟಿಕೆಟ್ ಕೊಟ್ಟಿಲ್ಲ. ಅವರ ಬಗ್ಗೆ ಕಾಳಜಿ ಇಲ್ಲ, ಆದರೆ ಅವರಿಗೆ ದಲಿತರು, ಅಲ್ಪಸಂಖ್ಯಾತರ ಮತ ಬೇಕು ಎಂದು ಟೀಕಿಸಿದರು.

BJP has not given Lok Sabha tickets to backward classes: CH Vijayashankar

ಈವರೆಗೂ ಜೆಡಿಎಸ್ ನಾಯಕರು ಭಾಗಿಯಾಗದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಧಿಕೃತವಾಗಿ ಈವರೆಗೆ ಮೈತ್ರಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಿರಲಿಲ್ಲ. ರಾಜಕೀಯದಲ್ಲಿ ಕೊನೆಯ ಕ್ಷಣದವರೆಗೂ ಯಾವುದೇ ಬದಲಾವಣೆ ಆಗಬಹುದು. ಮುಂದಿನ ದಿನಗಳಲ್ಲಿ ಜೆಡಿಎಸ್ ನಾಯಕರ ಜೊತೆ ಸಭೆ ನಡೆಸುತ್ತೇನೆ. ಅವರ ಸಹಕಾರ ಪಡೆಯುತ್ತೇನೆ. ಇಂದು ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದೇನೆ ಎಂದರು.

BJP has not given Lok Sabha tickets to backward classes: CH Vijayashankar

 ಚಿತ್ರದುರ್ಗದಲ್ಲಿ ಬಿ.ಎನ್. ಚಂದ್ರಪ್ಪ ಸ್ಪರ್ಧೆ:ಮಾ.25 ರಂದು ನಾಮಪತ್ರ ಸಲ್ಲಿಕೆ ಚಿತ್ರದುರ್ಗದಲ್ಲಿ ಬಿ.ಎನ್. ಚಂದ್ರಪ್ಪ ಸ್ಪರ್ಧೆ:ಮಾ.25 ರಂದು ನಾಮಪತ್ರ ಸಲ್ಲಿಕೆ

ಇದಕ್ಕೂ ಮುನ್ನ ವಿಜಯ್ ಶಂಕರ್ ಸುತ್ತೂರು ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

English summary
Congress candidate CH Vijayashankar said that BJP has not given Lok Sabha tickets to backward classes. No concern for them,But they need votes from dalits and minorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X