ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಿಪಂ ಚುನಾವಣೆ: ಕಾಂಗ್ರೆಸ್, ಜೆಡಿಎಸ್ ಮೈತ್ರಿ, ಬಿಜೆಪಿ ನಾಮಪತ್ರ

|
Google Oneindia Kannada News

ಮೈಸೂರು, ಫೆಬ್ರವರಿ 23 : ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದ್ದು ನಾಮಪತ್ರ ಸಲ್ಲಿಕೆ ಮುಕ್ತಾಯಕ್ಕೆ ಕೆಲ ನಿಮಿಷಗಳು ಬಾಕಿ ಇರುವಾಗ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಮೈಸೂರು ಜಿ.ಪಂ.ನಲ್ಲಿ ಮೈತ್ರಿ ಕಗ್ಗಂಟು:ನಾಳೆ ಸಿಗಲಿದೆಯಾ ಉತ್ತರ? ಮೈಸೂರು ಜಿ.ಪಂ.ನಲ್ಲಿ ಮೈತ್ರಿ ಕಗ್ಗಂಟು:ನಾಳೆ ಸಿಗಲಿದೆಯಾ ಉತ್ತರ?

ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಅಭ್ಯರ್ಥಿ ಪರಿಮಳ ಶಾಮ್ ಹಾಗೂ ಬಿಳಿಕೆರೆ ಜಿ.ಪಂ ಕ್ಷೇತ್ರದಿಂದ ಆಯ್ಕೆ ಆಗಿರುವ ಗೌರಮ್ಮ ಸೋಮಶೇಖರ್ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಎಂ ಜಿ ರೂಪ ಗೆ ನಾಮಪತ್ರ ಸಲ್ಲಿಸಿದರು. ಕೊನೆಯ 10 ನಿಮಿಷದಲ್ಲಿ ಬಂದು ತಮ್ಮ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

ಮೈಸೂರು ಜಿಪಂನಲ್ಲಿ ಅಧಿಕಾರಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಕಸರತ್ತು ಮೈಸೂರು ಜಿಪಂನಲ್ಲಿ ಅಧಿಕಾರಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಕಸರತ್ತು

ಬಿಜೆಪಿ ಯಿಂದ ನಾಮಪತ್ರ ಸಲ್ಲಿಸಲು ಕೊನೆಯ ಕಸರತ್ತು ನಡೆದಿದ್ದು, ಕೇವಲ ಒಂದೇ ನಿಮಿಷ ಬಾಕಿ ಇದ್ದಾಗ ದಿಢೀರ್ ನೇ ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಕಣಕ್ಕಿಳಿಸಿದೆ. ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಪಂ ಕ್ಷೇತ್ರದ ಸದಸ್ಯ ಗುರುಸ್ವಾಮಿ ನಾಮಪತ್ರ ಸಲ್ಲಿಸಿದರು..

BJP filed nomination for Mysuru Zilla panchayath election

ಜಿ.ಪಂ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಜಿಲ್ಲಾ ಪಂಚಾಯತ್ ಆವರಣದ ಸುತ್ತಲೂ ಬಿಗಿಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಆವರಣದ ಸುತ್ತ 50 ಪೋಲೀಸರ ನಿಯೋಜನೆ ಮಾಡಲಾಗಿದೆ. 40 ಪುರುಷ ಹಾಗೂ 10 ಮಹಿಳಾ ಪೋಲೀಸರ ನಿಯೋಜನೆ ಮಾಡಲಾಗಿದೆ. ಯಾವುದೇ ರೀತಿಯ ಗದ್ದಲದ ವಾತಾವರಣ ನಿರ್ಮಾಣವಾಗಬಾರದೆಂದು ಪೊಲೀಸರಿಂದ ಕಟ್ಟೆಚ್ಚರ ವಹಿಸಿದ್ದಾರೆ.

English summary
BJP filed nimination for mysuru zilla panchayath election, After so many days of drama Congress join hands with JDS alliance in the Mysuru Zilla Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X