ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಪ್ರತಾಪ್ ಸಿಂಹಗೆ ಸಿಕ್ಕಿದ ಭರ್ಜರಿ ಲೀಡ್

|
Google Oneindia Kannada News

ಮೈಸೂರು, ಮೇ 26: ಮೊದಲು ಗೆಲುವು/ಸೋಲು, ಅದಾದ ನಂತರ ಸೋಲು ಗೆಲುವಿಗೆ ಕಾರಣವಾದ ಅಂಶಗಳು, ಕ್ಷೇತ್ರಾವಾರು ಯಾರಿಗೆ ಲೀಡ್ ಎನ್ನುವ ಲೆಕ್ಕಾಚಾರದಲ್ಲಿ ಗೆದ್ದ ಮತ್ತು ಸೋತ ಪಕ್ಷಗಳು ತೊಡಗಿರುತ್ತವೆ.

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಸಿ ಎಚ್ ವಿಜಯಶಂಕರ್ ಅವರನ್ನು 138,647 ಮತಗಳ ಅಂತರದಿಂದ ಸೋಲಿಸಿ, ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಜೊತೆಗಿದ್ದವರೇ ಸೋಲಿಗೆ ಕಾರಣರಾದರು: ವಿಜಯ್ ಶಂಕರ್ಜೊತೆಗಿದ್ದವರೇ ಸೋಲಿಗೆ ಕಾರಣರಾದರು: ವಿಜಯ್ ಶಂಕರ್

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಾಣುವಲ್ಲಿ ವಿಫಲವಾಗಿದೆ. ಇದರೆ ಜೊತೆಗೆ, ಕ್ಷೇತ್ರದ ಚುನಾವಣೆಯ ಫಲಿತಾಂಶವನ್ನು ಅವಲೋಕಿಸುವುದಾದರೆ, ಚಾಮುಂಡೇಶ್ವರಿಯಲ್ಲಿ ಎರಡು ಅಭ್ಯರ್ಥಿಗಳಿಗೆ ಬಿದ್ದ ಮತಗಳು.

BJP candidate Pratap Simha got good lead in Chamundeshwari Assembly segment of Mysuru LS seat

ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, ಯಾವ ಕ್ಷೇತ್ರದಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಜಿ ಟಿ ದೇವೇಗೌಡರ ವಿರುದ್ದ ಸೋತಿದ್ದರೋ, ಅಲ್ಲಿ ಬಿಜೆಪಿ ಭರ್ಜರಿ ಲೀಡ್ ಪಡೆದುಕೊಂಡಿದೆ.

ಚುನಾವಣಾ ಫಲಿತಾಂಶ: ಗೆದ್ದ ಪ್ರತಾಪ್ ಸಿಂಹ, ಸೋತ ವಿಜಯ್ ಶಂಕರ್ ಹೇಳಿದ್ದೇನು? ಚುನಾವಣಾ ಫಲಿತಾಂಶ: ಗೆದ್ದ ಪ್ರತಾಪ್ ಸಿಂಹ, ಸೋತ ವಿಜಯ್ ಶಂಕರ್ ಹೇಳಿದ್ದೇನು?

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗೆ 111,365 ಮತಗಳು ಬಿದ್ದರೆ, ವಿಜಯ್ ಶಂಕರ್ ಗೆ 89,215 ಮತಗಳು ಬಿದ್ದಿವೆ. ಆ ಮೂಲಕ, ಸಿದ್ದು ಸ್ವಕ್ಷೇತ್ರದಲ್ಲಿ ಬಿಜೆಪಿ 22,150 ಮತಗಳ ಲೀಡ್ ಅನ್ನು ಪಡೆದುಕೊಂಡಿದೆ.

ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆಂದು ಖುದ್ದು ಜಿ ಟಿ ದೇವೇಗೌಡ್ರು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

English summary
BJP candidate Pratap Simha got good 22 thousand lead in Chamundeshwari Assembly segment of Mysuru Lok sabha seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X