ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತಾಪ್ ಸಿಂಹ ನಾಮಪತ್ರ ಸಲ್ಲಿಕೆ: ಆರ್. ಅಶೋಕ್, ತಾರಾ ಸಾಥ್

|
Google Oneindia Kannada News

ಮೈಸೂರು, ಮಾರ್ಚ್ 25: ಮೈಸೂರು - ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಸಿಂಹ ಇಂದು ಚುನಾವಣಾಧಿಕಾರಿ ಅಭಿರಾಂ ಜಿ.ಶಂಕರ್ ಗೆ ನಾಮಪತ್ರ ಸಲ್ಲಿಸಿದರು.ಇದೇ ವೇಳೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ, ಶಾಸಕ ರಾಮ್ ದಾಸ್, ಅಪ್ಪಚ್ಚು ರಂಜನ್ ಸೇರಿದಂತೆ ಮತ್ತಿತರರು ಸಾಥ್ ನೀಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇದೇ ವೇಳೆ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್, ಕೇಂದ್ರದಲ್ಲಿ ಮೋದಿ ಅಲೆ ಇದೆ.‌ ಈ ಬಾರಿ ನಿಶ್ಚಯವಾಗಿ ಬಿಜೆಪಿ ಗೆಲ್ಲುತ್ತದೆ. ಸಿಂಹ ಒಬ್ಬ ಮಾದರಿ ಲೋಕಸಭಾ ಸದಸ್ಯ. ಜನರಿಗೆ ನೇರವಾಗಿ ಸಿಗುವ ಸದಸ್ಯ. ಅವರ ಸಾಧನೆ ಗುರುತಿಸಿ ಬಿಜೆಪಿ ಟಿಕೆಟ್ ನೀಡಿದೆ. 100ಕ್ಕೆ 100ರಷ್ಟು ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದರು.

 ಮೋದಿ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ: ರಾಮದಾಸ್‌ ಮೋದಿ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ: ರಾಮದಾಸ್‌

ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಗೊಂದಲ ಗೂಡಾಗಿದ್ದು, ಹಳ್ಳ ಹಿಡಿದಿದೆ. ದೇವೇಗೌಡ ಪ್ರಚಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ದೇವೇಗೌಡರು ಎಲ್ಲಿ ಹೋದರೂ ಅಲ್ಲಿ ವಿರೋಧ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

BJP candidate Pratap Simha filed nomination in Mysuru

ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಸಂಹಿತೆ ಜಾರಿಯಲ್ಲಿದ್ದರೂ, ತಮ್ಮ ಪಕ್ಷ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಬುಕ್ ಲೆಟ್ ಗಳಲ್ಲಿ ಅಂಚೆ ಕಚೇರಿಯ ಮೂಲಕ ವಿತರಣೆ ಮಾಡಿಸಿದ್ದಾರೆಂದು ಆರೋಪಿಸಿ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಎಸ್ ಶಿವರಾಮು ಮೈಸೂರಿನ ವಿವಿ ಪುರಂ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

BJP candidate Pratap Simha filed nomination in Mysuru

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಪ್ರತಾಪ್ ಸಿಂಹ ಅವರು ಸರ್ಕಾರಿ ಅಂಚೆ ಕಚೇರಿ ಮೂಲಕ ಬುಕ್ ಲೆಟ್ ಗಳನ್ನ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಈ ದೂರನ್ನು ಪರಿಶೀಲನೆ ನಡೆಸಿದ ಬಳಿಕ ಫ್ಲೈಯಿಂಗ್ ಸ್ಕ್ವಾಡ್ ಸಹಾಯಕ ಚುನಾವಣಾಧಿಕಾರಿ ಉಮೇಶ್ ಅವರು ದೂರು ನೀಡಿದ್ದು, ಮಾರ್ಚ್ 23 ರಂದು ಎಫ್‍ಐಆರ್ ದಾಖಲು ಮಾಡಲಾಗಿದೆ.

English summary
BJP candidate Pratap Simha filed nomination in Mysuru. Former Deputy Chief Minister R. Ashok, Tara Anuradha, MLA Ram Das, Appachu Ranjan and others were participated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X