ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈಂಗಿಕ ದೌರ್ಜನ್ಯ ಆರೋಪದ ಸುಳಿಯಲ್ಲಿ ಮೈಸೂರಿನ ಬಿಷಪ್; ತನಿಖೆಗೆ ಆಗ್ರಹ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 6: ಮೈಸೂರಿನ ಬಿಷಪ್ ಡಾ.ಕೆ.ಎಂ.ವಿಲಿಯಂ ಅವರು ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ, ಈ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅಸೋಸಿಯೇಷನ್ ಆಫ್ ಕನ್ವರ್ಟಡ್ ಕ್ಯಾಥೋಲಿಕ್ಸ್ ಸಂಘಟನೆ (ಎಒಸಿಸಿ) ಆರೋಪಿಸಿದ್ದು, ತನಿಖೆಗೆ ಒತ್ತಾಯಿಸಿದೆ. ಏನಿದು ಪ್ರಕರಣ? ಇಲ್ಲಿದೆ ವಿವರ...

ಯುವತಿ ಮೇಲೆ ದೌರ್ಜನ್ಯದ ಆರೋಪ

ಯುವತಿ ಮೇಲೆ ದೌರ್ಜನ್ಯದ ಆರೋಪ

ಚರ್ಚ್‌ನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಮೈಸೂರು ಬಿಷಪ್ ಡಾ.ಕೆ.ಎಂ.ವಿಲಿಯಂ ಅವರ ಮೇಲೆ ಬಂದಿದ್ದು, ಕಾನೂನು ಪ್ರಕಾರ ಬಿಷಪ್ ವಿಲಿಯಂ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಒಸಿಸಿ ಮುಖಂಡ ರಾಬರ್ಟ್ ರೋಸಾರಿಯೋ ಒತ್ತಾಯಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಅವರು, ಚರ್ಚ್‌ನಲ್ಲಿ ಓರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.

6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ‌ಎಸಗಿದ್ದ ಕಾಮುಕನಿಗೆ 10 ವರ್ಷ ಸಜೆ6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ‌ಎಸಗಿದ್ದ ಕಾಮುಕನಿಗೆ 10 ವರ್ಷ ಸಜೆ

 ಕೆಲಸದಿಂದ ವಜಾಗೊಂಡ ಯುವತಿ

ಕೆಲಸದಿಂದ ವಜಾಗೊಂಡ ಯುವತಿ

ಮತ್ತಷ್ಟು ಮಾಹಿತಿ ನೀಡಿದ ಅವರು, ದೈಹಿಕ ಸಂಪರ್ಕಕ್ಕೆ ಆಕೆ ಒಪ್ಪದಿದ್ದಾಗ ಆಕೆಯನ್ನು ಕೆಲಸದಿಂದ ತೆಗಿಯುವ ಪ್ಲಾನ್ ಮಾಡಿದ್ದಾರೆ. ಆ ಯುವತಿ ಇಡೀ ಘಟನೆ ಬಗ್ಗೆ ಒಂದು ವಿಡಿಯೋ ಮಾಡಿದ್ದಾಳೆ. ಆ ವಿಡಿಯೋದಲ್ಲಿ ಬಿಷಪ್ ಮಾಡಿರುವ ಎಲ್ಲ ಹಗರಣ ಹಾಗೂ ದೌರ್ಜನ್ಯದ ಮಾಹಿತಿ ನೀಡಿದ್ದಾಳೆ. ಆ ವಿಡಿಯೋದಲ್ಲಿ ಅಪಹರಣ, ಕೊಲೆ ಯತ್ನ ಹಾಗೂ ಬೆದರಿಕೆಯ ಎಲ್ಲ‌ ಮಾಹಿತಿ ನೀಡಿದ್ದಾಳೆ ಎಂದು ವಿವರಿಸಿದರು.

 ಬೆದರಿಕೆಗೆ ಹೆದರಿ ಚರ್ಚ್ ಬಿಟ್ಟ ಯುವತಿ

ಬೆದರಿಕೆಗೆ ಹೆದರಿ ಚರ್ಚ್ ಬಿಟ್ಟ ಯುವತಿ

"ಚರ್ಚ್ ಕೆಲಸ ಬಿಟ್ಟು ಬೇರೆ ಕಡೆ ಆಕೆ ಕೆಲಸಕ್ಕೆ ಸೇರಿಸಿಕೊಂಡಿದ್ದಳು. ಆ ಯುವತಿ ಕೆಲಸ ಬಿಟ್ಟ ಮೇಲೆ ಆಕೆಯನ್ನು ಕಿಡ್ನಾಪ್ ಮಾಡಿದ್ದು, ಆಕೆ ಮನೆಯವರಿಗೆ ವಿಡಿಯೋ ತೋರಿಸಿ ಬೆದರಿಸಿದ್ದಾರೆ. ಚರ್ಚ್ ‌ನಲ್ಲಿ ಆದ ಘಟನೆ ಬಗ್ಗೆ ಸುಮ್ಮನೆ ಇರಬೇಕು. ಇಲ್ಲ ನಾವು ಏನು ಬೇಕಾದರೂ ಮಾಡಬಹುದು ಎಂದು ಹೆದರಿಸಿದ್ದಾರೆ. ಆಕೆ ಜೀವಭಯದಿಂದ ದೂರು ಕೊಟ್ಟಿಲ್ಲ. ನಾವು ಆಕೆಯ ಪರವಾಗಿ ಲಷ್ಕರ್ ಮೊಹಲ್ಲ ಠಾಣೆಯಲ್ಲಿ ದೂರು ನೀಡಿದ್ದೇವೆ. ಆ ದೂರಿಗೆ ಎನ್‌ಸಿಆರ್ ಮಾತ್ರ ನೀಡಿದ್ದಾರೆ. ಆ ಯುವತಿಗೆ ಬಿಷಪ್ ವಿಲಿಯಂರಿಂದ ಜೀವಭಯ ಇದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಎಲ್ಲ ದಾಖಲೆಗಳನ್ನು ಠಾಣೆಗೆ ನೀಡಿದ್ದೇವೆ. ಹೀಗಾಗಿ ಮೊದಲು ಬಿಷಪ್ ಕೆ.ಎಂ.ವಿಲಿಯಂ ಬಂಧನವಾಗಬೇಕು. ಇದು ಅತ್ಯಂತ ಗಂಭೀರ ಪ್ರಕರಣ. ನಾವು ಆರೋಪ ಮಾಡಿದ್ದೇವೆ ನಮಗೂ ಜೀವಭಯ ಇದೆ. ಹೀಗಾಗಿ ಬಿಷಪ್ ವಿಲಿಯಂ ಮೇಲೆ‌ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ, ವಿಚಾರಣೆಗೆ ಆದೇಶಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ, ವಿಚಾರಣೆಗೆ ಆದೇಶ

 ಆರೋಪ ಅಲ್ಲಗಳೆದ ಬಿಷಪ್

ಆರೋಪ ಅಲ್ಲಗಳೆದ ಬಿಷಪ್

ಈ ಕುರಿತು ಮಾತನಾಡಿರುವ ಬಿಷಪ್ ಡಾ.ಕೆ.ಎಂ.ವಿಲಿಯಂ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದು, ನನ್ನ ಏಳಿಗೆ ಸಹಿಸದವರು ಈ ರೀತಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಮೈಸೂರಿನ ಬಿಷಪ್ ಆದ ಬಳಿಕ ನಾನು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಒಂದು ಗುಂಪಿಗೆ ನನ್ನ ಕೆಲಸಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ನನ್ನ ವಿರುದ್ಧ ಆರೋಪ ಮಾಡಿದವರು ಒಮ್ಮೆಯೂ ನನ್ನನ್ನು ಭೇಟಿಯಾಗಿಲ್ಲ. ಯಾವುದೇ ಆರೋಪಗಳಿದ್ದರೆ ಧರ್ಮ ಸಭೆಯಲ್ಲಿ ಚರ್ಚಿಸಿ ಸಲಹಾ ಸಮಿತಿಗೆ ತಿಳಿಸಬೇಕು. ಅವರು ಆ ಕೆಲಸ ಮಾಡಿಲ್ಲ. ಸ್ವಾರ್ಥ ಸಾಧನೆಗಾಗಿ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ಗುರುವಾರ ಚರ್ಚ್ ನ ಸಲಹಾ ಸಮಿತಿ ಸಭೆ ಕರೆಯಲಾಗಿದ್ದು, ಆರೋಪ ಮಾಡಿರುವವರನ್ನು ಸಭೆಗೆ ಆಹ್ವಾನಿಸುತ್ತೇವೆ ಎಂದಿದ್ದಾರೆ.

English summary
Bishop of Mysuru Dr K.M. William has been accused of sexually abusing a young woman,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X