ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು: ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಜೀಬ್ರಾ ಮರಿ ಜನನ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 25: ದಸರಾ ಉತ್ಸವದ ಸಂದರ್ಭದಲ್ಲಿಯೇ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಜೀಬ್ರಾ ಮರಿ ಜನನವಾಗಿದೆ.

ಪ್ರಾಚಿ ಹೆಸರಿನ ಜೀಬ್ರಾಗೆ ಒಂದು ಹೆಣ್ಣು ಮರಿ ಜನನವಾಗಿದ್ದು, ಪ್ರಾಚಿ ಮತ್ತು ರಿಷಿ ಜೋಡಿಯ ಜೀಬ್ರಾಗಳಿಗೆ ಜನಿಸಿರುವ ಮರಿಯಾಗಿದೆ. ಪ್ರಾಚಿ ಜೀಬ್ರಾ ಮರಿ ಅಕ್ಟೋಬರ್ 16 ರಂದು ಜನಿಸಿದೆ.

ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದ ಇತಿಹಾಸದಲ್ಲಿ ಮೂರನೇ ಬಾರಿ ಜೀಬ್ರಾ ಮರಿ ಜನಿಸಿದೆ. ಜೀಬ್ರಾ ಮರಿಯ ಜನನದಿಂದಾಗಿ ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ.

Birth Of A Zebra Cub In the Jayachamarajendra Zoo In Mysuru

ಜಯಚಾಮರಾಜೇಂದ್ರ ಮೃಗಾಲಯಕ್ಕೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿದ್ದು, ಇದೀಗ ಜನಿಸಿರುವ ಮರಿ ಸೇರಿದಂತೆ ಮೃಗಾಲಯದಲ್ಲಿರುವ ಜೀಬ್ರಾಗಳ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

ಮೂರು ಗಂಡು, ನಾಲ್ಕು ಹೆಣ್ಣು ಜೀಬ್ರಾಗಳು ಇದೀಗ ಮೃಗಾಲಯದಲ್ಲಿದ್ದು, ಇತ್ತೀಚಿಗೆ ಜನಿಸಿರುವ ಜೀಬ್ರಾ ಮರಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಯದುವೀರ್ ಒಡೆಯರ್‌ ಸರಳವಾಗಿ ಆಯುಧ ಪೂಜೆ ನೆರವೇರಿಸಿದರು. ಆನೆ ಬಾಗಿಲು ಬಳಿ‌ಬಂದ ನಿಂತ ಪಟ್ಟದ ಆನೆ, ಕುದುರೆ, ಒಂಟೆಗಳನ್ನು ಬೆಳಿಗ್ಗೆ 10.50 ರಿಂದ 11.15 ಶುಭ ಲಗ್ನದಲ್ಲಿ ಆಯುಧ ಪೂಜೆ ನೆರವೇರಿಸಲಾಯಿತು. ಯದುವೀರ್ ಒಡೆಯರ್‌ ಸಾಂಕೇತಿಕವಾಗಿ ಪುಷ್ಪಾರ್ಚನೆ ಮಾಡಿ, ನಂತರ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಿಸಿದರು.

English summary
The zebra cub was born at the Jayachamarajendra Zoo in Mysuru during the Dasara Festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X