ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಗ್ರಾಮವೊಂದರಲ್ಲಿ 25 ಕೋಳಿಗಳ ಸಾವು; ಹೆಚ್ಚಾದ ಹಕ್ಕಿ ಜ್ವರ ಭೀತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 26: ಇಲ್ಲಿಗೆ ಸಮೀಪದ ಹನಸೋಗೆ ಪಕ್ಕದ ತಂದ್ರೆ ಗ್ರಾಮದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಈ ಪುಟ್ಟ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿರುವುದು ಭೀತಿ ಹೆಚ್ಚಲು ಕಾರಣವಾಗಿದೆ.

ಆರೋಗ್ಯವಾಗಿದ್ದ ಕೋಳಿಗಳು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಸಾವನ್ನಪ್ಪಿವೆ ಎಂದು ಗ್ರಾಮದ ಮಹಿಳೆ ಪುಟ್ಟ ನಂಜಮ್ಮ ತಿಳಿಸಿದರು. ಈ ಕುರಿತು ಕೆ.ಆರ್‌. ಪೇಟೆಯ ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದೇವೆ. ಇನ್ನೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

Bird Flu 25 Chickens Death In Tandre Village

 ಮೈಸೂರಿನಲ್ಲಿ ಹಕ್ಕಿಜ್ವರ; ಎಷ್ಟು ಹಕ್ಕಿ, ಕೋಳಿಗಳನ್ನು ಕೊಲ್ಲಲಾಗುತ್ತಿದೆ? ಮೈಸೂರಿನಲ್ಲಿ ಹಕ್ಕಿಜ್ವರ; ಎಷ್ಟು ಹಕ್ಕಿ, ಕೋಳಿಗಳನ್ನು ಕೊಲ್ಲಲಾಗುತ್ತಿದೆ?

ಈ ರೀತಿ ಕೊಳಿ ಸತ್ತುಬಿದ್ದಿರುವುದು ಆತಂಕ ತಂದಿದೆ. ಕನಿಷ್ಠ ಪಕ್ಷ ಪಶು ವೈದ್ಯರನ್ನೂ ಕಳಿಸಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ಮೊದಲೇ ಕೊರೊನಾ ಭೀತಿಯಿಂದಾಗಿ ಇಡೀ ದೇಶವೇ ತತ್ತರಿಸುತ್ತಿರುವಾಗ ಹಕ್ಕಿ ಜ್ವರದ ಭೀತಿಯೂ ಅವರಿಸಿದೆ. ಹೀಗಾಗಿ ಗ್ರಾಮಸ್ಥರು ಕೋಳಿಗಳನ್ನು ತಾವೇ ಕೊಲ್ಲುತ್ತಿದ್ದಾರೆ.

English summary
25 Chickens died near hanasoge of tandre village in mysuru. It has created anxiety of bird flu in villagers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X