ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗನತಿಟ್ಟಿನಲ್ಲಿ ಪಕ್ಷಿಗಣತಿ: ಒಂದೇ ದಿನ 60 ಜಾತಿ ಹಕ್ಕಿಗಳು ಪತ್ತೆ

|
Google Oneindia Kannada News

ಮಂಡ್ಯ, ಜೂನ್ 10: ಮಂಡ್ಯದ ಪ್ರಸಿದ್ಧ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮದಲ್ಲಿ ಭಾನುವಾರ ನಡೆದ ಪಕ್ಷಿ ಗಣತಿ ವೇಳೆ 60 ವಿವಿಧ ಜಾತಿಯ ಮೂರು ಸಾವಿರಕ್ಕೂ ಹೆಚ್ಚು ಪಕ್ಷಿಗಳು ಪತ್ತೆಯಾಗಿವೆ.

ಭಾರೀ ಮಳೆಗೆ ರಂಗನತಿಟ್ಟು ಪಕ್ಷಿಧಾಮ ಮುಳುಗುತ್ತಿದೆಯೇ..? ಭಾರೀ ಮಳೆಗೆ ರಂಗನತಿಟ್ಟು ಪಕ್ಷಿಧಾಮ ಮುಳುಗುತ್ತಿದೆಯೇ..?

ಏಳು ತಂಡಗಳು ನಡೆಸಿದ ಪಕ್ಷಿಗಣತಿಯಲ್ಲಿ ಪ್ರತಿ ತಂಡದಲ್ಲೂ ಇಬ್ಬರು ಪಕ್ಷಿಪ್ರಿಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು. ಏಳು ದೋಣಿಗಳಲ್ಲಿ ತೆರಳಿದ ತಂಡದ ಸದಸ್ಯರು, ಪಕ್ಷಿಧಾಮದಲ್ಲಿರುವ 25 ದ್ವೀಪಗಳಲ್ಲಿ ಪಕ್ಷಿ ಗಣತಿ ಮಾಡಿದರು. ಪಕ್ಷಿಯ ಜಾತಿ, ಗೂಡುಗಳು, ಮರಿಗಳ ಸಂಖ್ಯೆ, ಸ್ಥಳೀಯ ಪಕ್ಷಿ, ವಲಸೆ ಹಕ್ಕಿಗಳ ಸಂಖ್ಯೆಯನ್ನು ಲೆಕ್ಕಾಚಾರ ಮಾಡಿದರು. ಪಕ್ಷಿಧಾಮವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಪಕ್ಷಿಧಾಮದಲ್ಲಿ ಗಣತಿಕಾರ್ಯ ಸಹಾಯಕ್ಕೆ ಬರಲಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

Bird census in Rangantittu 60 different types birds seen in one day

ರಂಗನತಿಟ್ಟು ಪಕ್ಷಿಧಾಮವನ್ನು ವೆಟ್ ‍ಲ್ಯಾಂಡ್ ಗೆ ಸೇರಿಸುವುದಕ್ಕೆ ಅರಣ್ಯ ಇಲಾಖೆ ರಾಮ್‍ಸರ್ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ವಿವಿಧ ಸೌಲಭ್ಯವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ವೆಟ್ ‍ಲ್ಯಾಂಡ್ ವ್ಯಾಪ್ತಿಗೆ ರಂಗನತಿಟ್ಟು ಪಕ್ಷಿಧಾಮ ಸೇರಿಸುವ ಮೂಲಕ ಪಕ್ಷಿಗಳ ಸಂತಾನೋತ್ಪತ್ತಿ, ಪಕ್ಷಿ ಸಂಕುಲದ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಚಿಂತಿಸಿದೆ. ಇದಕ್ಕಾಗಿ ರಾಮ್‍ಸರ್ ಸಂಸ್ಥೆ ಸೂಚನೆ ಮೇರೆಗೆ ವೈಜ್ಞಾನಿಕವಾಗಿ ಪಕ್ಷಿಗಳ ಗಣತಿ ನಡೆಸಲಾಗುತ್ತಿದೆ.

English summary
Forest Department conducted a bird census to document winged beauties at Ranganathittu Bird Sanctuary. Around 60 species of birds were recorded during one day survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X