ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಪ್ರಚಾರ:ಮೈಸೂರಲ್ಲಿ ಓಪನ್ ಜೀಪ್ ಪ್ರಚಾರಕ್ಕೆ ಭಾರೀ ಡಿಮ್ಯಾಂಡ್

|
Google Oneindia Kannada News

ಮೈಸೂರು, ಏಪ್ರಿಲ್ 12: ಚುನಾವಣೆ ಎಂದರೆ ಸಾಕು ಮತದಾನ ಎನ್ನುವುದಕ್ಕಿಂತ ಅದೊಂದು ಪ್ರಚಾರದ ಜಾತ್ರೆ ಎನ್ನಬಹುದು. ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರೆ, ಅಭ್ಯರ್ಥಿಗಳು ತಮ್ಮ ವಾಹನವನ್ನೇರಿ, ಅದರಲ್ಲೂ ಓಪನ್ ಜೀಪ್ ಮೇಲೇರಿ ಭಾಷಣ ಮಾಡುವುದು ಸರ್ವೇ ಸಾಮಾನ್ಯ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತಮ್ಮ ರೋಡ್ ಶೋಗಳನ್ನು ನಡೆಸಲು ಇದೊಂದು ಸೂಕ್ತ ವೇದಿಕೆ ಕೂಡ. ಅದಕ್ಕೆ ತಕ್ಕಂತೆ ಮೈಸೂರಿನಲ್ಲಿ ಅಭ್ಯರ್ಥಿಗಳ ಪರ ಪ್ರಚಾರದ ಅನುಕೂಲಕ್ಕಾಗಿ ಜಿಪ್ಸಿ ಜೀಪ್ ಗಳನ್ನು ರೋಡಿಗಿಳಿಸಲಾಗಿದೆ.

ವಿಶೇಷವಾಗಿ ಚುನಾವಣಾ ಪ್ರಚಾರಕ್ಕೆಂದು ರೆಡಿ ಮಾಡಿಸಿರುವ ಇಂತಹ ವಾಹನಗಳಿಗೆ ಸಖತ್ ಬೇಡಿಕೆಯೂ ಇದೆ. ಇವುಗಳನ್ನು ಪಕ್ಷಗಳಿಗೆ ಓಪನ್ ಜೀಪ್ ತಂಡ ಬಾಡಿಗೆಗೆ ನೀಡಿದೆ.

Big Demand for open Jeep Campaign in Mysuru

ಈಗಾಗಲೇ ಬಿಜೆಪಿ, ಜೆಡಿಎಸ್ ಪಕ್ಷಗಳು ಈ ಜೀಪುಗಳನ್ನು ಬಾಡಿಗೆಗೆ ಪಡೆದು ಪಕ್ಷದ ಬಾವುಟ, ಅಭ್ಯರ್ಥಿ, ಚಿಹ್ನೆ, ಪಕ್ಷದ ನಾಯಕರ ಚಿತ್ರಗಳನ್ನು ಅಲಂಕರಿಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಜೀಪಿನಲ್ಲಿ ಭಾಷಣಕ್ಕೆ ಮೈಕ್ ವ್ಯವಸ್ಥೆ, ಕಾರ್ಪೆಟ್, ವೈಫೈ ಅಳವಡಿಸಲ್ಪಟ್ಟಿದೆ. ಬಾಡಿಗೆ ಆಧಾರದಲ್ಲಿ ಪಡೆದವರಿಗೆ ಚಾಲಕನನ್ನು ಸಂಸ್ಥೆಯೇ ಕಳುಹಿಸಿಕೊಡುತ್ತದೆ.

ಜೀಪು ಎಲ್ಲಿದೆ ಎಂದು ತಿಳಿಯಲು ಅನುಕೂಲವಾಗುವಂತೆ ಜಿಪಿಎಸ್ ಸಹ ಅಳವಡಿಸಲಾಗಿರುತ್ತದೆ. ಸಣ್ಣ ಹಳ್ಳಿಗಳಲ್ಲೂ ಕಿರಿದಾದ ರಸ್ತೆಯಲ್ಲೂ ಸಂಚರಿಸಬಹುದಾದ ರೀತಿಯಲ್ಲಿ ಜೀಪ್ ಸಿದ್ಧಪಡಿಸಲಾಗಿದೆ. ಈ ಜೀಪಿನಲ್ಲಿ ಅಭ್ಯರ್ಥಿ ಮತ್ತು ನಾಯಕರು ಸೇರಿದಂತೆ 7 ಮಂದಿಗೆ ಮಾತ್ರ ಅವಕಾಶವಿದೆ. ಹೆಚ್ಚು ಜನ ಹತ್ತಲು ಅವಕಾಶವಿಲ್ಲ.

Big Demand for open Jeep Campaign in Mysuru

ಇನ್ನು ಈ ಕುರಿತಾಗಿ ಮಾತನಾಡಿದ ಓಪನ್ ಜೀಪ್ ಸಂಸ್ಥೆ ಸಂಚಾಲಕ ಪ್ರಶಾಂತ್ , ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಮ್ಮ ಸಂಸ್ಥೆಯ ತೆರೆದ ಜೀಪ್ ನಲ್ಲಿಯೇ ರೋಡ್ ಶೋ ಮೂಲಕ ಪ್ರಚಾರ ಕೈಗೊಂಡಿದ್ದಾರೆ. ಅಲ್ಲದೇ ಜೆಡಿಎಸ್ ಸಹ ಮಂಡ್ಯದಲ್ಲಿ ಅಭ್ಯರ್ಥಿ ಪರ ಪ್ರಚಾರಕ್ಕೆ ನಮ್ಮ ಜೀಪು ಬಳಸುತ್ತಿದೆ. ಅಲ್ಲದೇ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಸಹ ಇದೇ ಜೀಪನ್ನು ಪ್ರಚಾರಕ್ಕೆ ಬಳಸುತ್ತಿದ್ದಾರೆ ಎನ್ನುತ್ತಾರೆ.

ಈ ಜೀಪ್ ಗಳನ್ನು ರೋಡ್ ಶೋ ಸಂದರ್ಭದಲ್ಲಿ ಬೆಂಬಲಿಗರು, ಅಭಿಮಾನಿಗಳು ಹಾರ ಹಾಕಲು, ಕೈ ಕುಲುಕಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಈಗಾಗಲೇ ಇಂತಹ 6 ಜೀಪ್ ಗಳು ಚುನಾವಣಾ ಪ್ರಚಾರಕ್ಕೆ ಸಿದ್ಧವಾಗಿದ್ದು, ಈ ಪೈಕಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಗಳು ಚುನಾವಣಾ ಪ್ರಚಾರಕ್ಕೆ ತಲಾ ಒಂದೊಂದು ಜೀಪ್ ಗಳನ್ನು ಬಾಡಿಗೆಗೆ ಪಡೆದುಕೊಂಡು ಪ್ರಚಾರದಲ್ಲಿ ನಿರತವಾಗಿವೆ.

English summary
Lok Sabha Elections 2019:Big Demand for open jeep campaign in Mysuru, Gypsy jeeps have been deployed for the purpose of campaigning for candidates.Such vehicles, which have been prepared for election campaigns, have also been so much of demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X