ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಲೆ ಶುರುವಾಗಿ 5 ತಿಂಗಳಾಯ್ತು...ಮಕ್ಕಳಿಗೆ ಇನ್ನು ಸಿಕ್ಕಿಲ್ಲ ಸೈಕಲ್

|
Google Oneindia Kannada News

ಮೈಸೂರು, ಅಕ್ಟೋಬರ್. 25: ದಸರೆ ರಜೆಯೂ ಮುಗಿಯಿತು, ಶಾಲೆ ಶುರುವಾಯ್ತು. ಸಮವಸ್ತ್ರ, ಪಠ್ಯಪುಸ್ತಕ, ಬ್ಯಾಗ್, ಶೂ ಎಲ್ಲವೂ ನೀಡಿದ್ದಾಯಿತು. ಆದರೆ ಮಕ್ಕಳಿಗೆ ಅವಶ್ಯಕವಾದ ಸೈಕಲ್ ಗಳನ್ನೇ ಇದುವರೆಗೆ ನೀಡಿಲ್ಲ.

ಹೌದು, ಪ್ರೌಢ ಶಾಲೆಗಳು ಆರಂಭವಾಗಿ ಆರು ತಿಂಗಳು ಕಳೆಯುತ್ತಿದ್ದರೂ ಮಕ್ಕಳಿಗೆ ಸೈಕಲ್ ಭಾಗ್ಯ ಲಭ್ಯವಾಗಿಲ್ಲ. ಇಲ್ಲಿಯವರೆಗೂ ಮೈಸೂರು ಜಿಲ್ಲೆಯಾದ್ಯಂತ ಒಂದು ಸೈಕಲ್ ವಿತರಣೆಯಾಗಿಲ್ಲ.

ಶಾಲೆ ಆರಂಭವಾದ ಆರು ತಿಂಗಳ ಬಳಿಕ ಮಕ್ಕಳಿಗೆ ಸೈಕಲ್ ಭಾಗ್ಯಶಾಲೆ ಆರಂಭವಾದ ಆರು ತಿಂಗಳ ಬಳಿಕ ಮಕ್ಕಳಿಗೆ ಸೈಕಲ್ ಭಾಗ್ಯ

ಶಾಲೆಯ ಆರಂಭದಲ್ಲಿಯೇ ಬೈಸಿಕಲ್ ವಿತರಣೆಯಾಗಬೇಕಾಗಿದ್ದರೂ ಆಗ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಟೆಂಡರ್ ಪ್ರಕ್ರಿಯೆ ನಡೆಸುವ ವೇಳೆಗೆ ಪುರಸಭೆ, ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆಯ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಿದ್ದರಿಂದ ಮತ್ತಷ್ಟು ವಿಳಂಬವಾಯಿತು.

Bicycles were not given to children yet in Mysuru

ಈ ವೇಳೆಗೆ ಶಾಲೆಯ ಅರ್ಧ ಶೈಕ್ಷಣಿಕ ವರ್ಷವೇ ಮುಗಿದಿದ್ದು, ವಿದ್ಯಾರ್ಥಿಗಳು ಬೈಸಿಕಲ್ ಆಸೆಯನ್ನೇ ಮರೆತಿದ್ದರು. ಅಂತಿಮವಾಗಿ ಸರ್ಕಾರ, ಟೆಂಡರ್ ಗೆ ಮುಕ್ತಿ ನೀಡಿ ಬೈಸಿಕಲ್ ವಿತರಣೆಗೆ ಚಾಲನೆ ನೀಡಿತು. ಅಕ್ಟೋಬರ್ ಮೊದಲ ವಾರದಲ್ಲಿ ಜಿಲ್ಲಾ ಕೇಂದ್ರಗಳಿಗೆ ಬೈಸಿಕಲ್ ವಿತರಣೆಯಾಗಿ, ಅವುಗಳ ಜೋಡಣೆ ಕಾರ್ಯಾರಂಭಗೊಂಡಿತು.

ಅಲ್ಲದೆ, ಕೆಲ ಶಾಲೆಗಳಲ್ಲಿ ವಿತರಣೆ ಕಾರ್ಯವೂ ನಡೆದಿತ್ತು. ಆದರೆ, ಈ ವೇಳೆಗೆ ರಾಜ್ಯದ ಮೂರು ಲೋಕಸಭೆ, ಎರಡು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದರಿಂದ ಮತ್ತೆ ಬೈಸಿಕಲ್ ವಿತರಣೆ ಕಾರ್ಯ ನನೆಗುದಿಗೆ ಬಿದ್ದಿದೆ.

 ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಸೈಕಲ್‌ಗೆ ವಿಶೇಷ ಪಥ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಸೈಕಲ್‌ಗೆ ವಿಶೇಷ ಪಥ

ಮಂಡ್ಯ ಲೋಕಸಭಾ ವ್ಯಾಪ್ತಿಗೆ ಕೆ.ಆರ್.ನಗರ ತಾಲೂಕು ಸೇರ್ಪಡೆಗೊಂಡಿರುವುದರಿಂದ ಮೈಸೂರು ಜಿಲ್ಲೆಯಲ್ಲಿಯೂ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದಾಗಿ ಈ ಯೋಜನೆ ಮತ್ತಷ್ಟು ದಿನ ಮುಂದೂಡಲಾಗಿದೆ.

ಪ್ರಸಕ್ತ ಸಾಲಿನಲ್ಲಿರುವ ಸರ್ಕಾರಿ ಶಾಲಾ ಮಕ್ಕಳ ಸಂಖ್ಯೆ 18,966. ಒಟ್ಟು ಮಂಜೂರಾಗಿರುವ ಸೈಕಲ್ ಗಳು 18,517. ಆದರೆ ಒಬ್ಬರಿಗೂ ಸಹ ಸೈಕಲ್ ಕೊಟ್ಟಿಲ್ಲ. ಇದರಿಂದಾಗಿ ಹಳ್ಳಿಗಳಿಂದ ಬರುವ ಮಕ್ಕಳು ನಡೆದೇ ಬರುವಂತಾಗಿದೆ.

 ಬೆಂಗಳೂರಿನಲ್ಲೂ ಬಾಡಿಗೆ ಸೈಕಲ್ ಪ್ರತಿ ಗಂಟೆಗೆ 5 ರೂ. ಬೆಂಗಳೂರಿನಲ್ಲೂ ಬಾಡಿಗೆ ಸೈಕಲ್ ಪ್ರತಿ ಗಂಟೆಗೆ 5 ರೂ.

ಕೂಡಲೇ ಮಕ್ಕಳಿಗೆ ಸೈಕಲ್ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಕ್ಕಳು ದಿನಾ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

English summary
Bicycles were not given to children yet in Mysuru. So children are experiencing a lot of trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X