ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಯಾತ್ರೆಯನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲ'; ಮಳೆ ನಡುವೆ ರಾಹುಲ್ ಭಾಷಣ

|
Google Oneindia Kannada News

ಮೈಸೂರು, ಅ.03: ರಾಜ್ಯದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಭಾನುವಾರ ಭಾರೀ ಮಳೆಯ ನಡುವೆಯೂ ನಡೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಳೆಯ ನಡುವೆಯೇ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

"ಬಿಜೆಪಿ-ಆರ್‌ಎಸ್‌ಎಸ್ ಹರಡುವ ದ್ವೇಷ ಮತ್ತು ಹಿಂಸಾಚಾರವನ್ನು ತಡೆಯುವ ಉದ್ದೇಶದಿಂದ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಭಾನುವಾರದ ಪಾದಯಾತ್ರೆ ಬಳಿಕ ರಾಹುಲ್ ಗಾಂಧಿ ಸಾರ್ವಜನಿಕ ಸಭೆಗೆ ಆಗಮಿಸಿದ ತಕ್ಷಣ, ತುಂತುರು ಮಳೆ ಪ್ರಾರಂಭವಾಯಿತು. ಆದರೆ, ರಾಹುಲ್ ಗಾಂಧಿ ತಮ್ಮ ಭಾಷಣವನ್ನು ಮುಂದುವರಿಸಲು ನಿರ್ಧರಿಸಿದ್ದರು.

Bharat Jodo Yatra; Rahul Gandhi Addressed A Public Meeting In Heavy Rain

"ಈ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮುಂದುವರಿಯುತ್ತದೆ. ಇದು ನಿಲ್ಲುವುದಿಲ್ಲ, ನೀವು ನೋಡುತ್ತಿರುವಂತೆ ಮಳೆಯಾಗುತ್ತಿದೆ, ಆದರೆ, ಮಳೆಯು ಕೂಡ ಈ ಯಾತ್ರೆಯನ್ನು ನಿಲ್ಲಿಸಿಲ್ಲ" ಎಂದು ಹೇಳಿದ್ದಾರೆ.

ಭಾರತ್‌ ಜೋಡೋ ಯಾತ್ರೆ: ನಂಜನಗೂಡಿನ ಬದನವಾಳುಗೆ ಬಂದ ರಾಹುಲ್ ಗಾಂಧಿ ಪಾದಯಾತ್ರೆಭಾರತ್‌ ಜೋಡೋ ಯಾತ್ರೆ: ನಂಜನಗೂಡಿನ ಬದನವಾಳುಗೆ ಬಂದ ರಾಹುಲ್ ಗಾಂಧಿ ಪಾದಯಾತ್ರೆ

"ಬಿಸಿಲು, ಚಂಡಮಾರುತ ಅಥವಾ ಚಳಿ ಈ ಯಾತ್ರೆಯನ್ನು ತಡೆಯಲು ಸಾಧ್ಯವಿಲ್ಲ. ಈ ನದಿಯಂತಹ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಗುತ್ತದೆ ಮತ್ತು ಈ ನದಿಯಲ್ಲಿ ನೀವು ದ್ವೇಷ ಅಥವಾ ಹಿಂಸೆಯಂತಹ ವಿಷಯಗಳನ್ನು ನೋಡುವುದಿಲ್ಲ. ಇದು ಭಾರತದ್ದಾಗಿರುವುದರಿಂದ ಅದರ ಇತಿಹಾಸ ಮತ್ತು DNA ಹೇಳುವಂತೆ ಪ್ರೀತಿ ಮತ್ತು ಸಹೋದರತ್ವ ಮಾತ್ರ ಇರುತ್ತದೆ" ಎಂದು ತಿಳಿಸಿದ್ದಾರೆ.

ಬಿಜೆಪಿ ಯಾವುದೇ ದ್ವೇಷ ಮತ್ತು ಹಿಂಸಾಚಾರವನ್ನು ಹರಡಲಿ, ಈ ಯಾತ್ರೆ ಅದನ್ನು ನಿಲ್ಲಿಸುತ್ತದೆ ಮತ್ತು ಜನರನ್ನು ಒಗ್ಗೂಡಿಸಲು ಸಹಾಯ ಮಾಡುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ವೇಳೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Bharat Jodo Yatra; Rahul Gandhi Addressed A Public Meeting In Heavy Rain

ಇನ್ನು, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್ ಮತ್ತು ರಣದೀಪ್ ಸುರ್ಜೆವಾಲಾ ಸೇರಿದಂತೆ ಪಕ್ಷದ ಹಲವಾರು ನಾಯಕರು ರಾಹುಲ್ ಗಾಂಧಿಯವರ ಭಾಷಣವನ್ನು ಟ್ವೀಟ್ ಮಾಡಿದ್ದಾರೆ. ಅವರು ಮಳೆಯಿಂದ ವಿಚಲಿತರಾಗಲಿಲ್ಲ ಮತ್ತು ದೇಶಕ್ಕಾಗಿ ಹೋರಾಡುವ ತಮ್ಮ ದೃಢ ಸಂಕಲ್ಪವನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, "ಭಾರತವನ್ನು ಒಗ್ಗೂಡಿಸಲು ಎದೆಗುಂದದೆ ಮುನ್ನುಗುತ್ತಿರುವ ರಾಹುಲ್ ಗಾಂಧಿಯವರ ಈ ಪರಿಶ್ರಮ, ಈ ಸದೃಡ ಸಂಕಲ್ಪ, ಈ ಸರಿಸಾಟಿಯಿಲ್ಲದ ಇಚ್ಛಾಶಕ್ತಿ, ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ದ್ವೇಷ ಮುಕ್ತ ಸಮಾಜಕ್ಕಾಗಿ & ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ ಮಾತ್ರವೇ. ಇದು ಜನಪರ ಕಾಳಜಿಯ ರಾಜಕಾರಣದ ಅತ್ಯದ್ಭುತ ಅಧ್ಯಾಯ" ಎಂದಿದೆ.

English summary
Congress leader Rahul Gandhi addressed a public meeting in heavy rain, he said nothing can Stop the Bharat Jodo Yatra. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X