ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ಬಂದ್: ಮೈಸೂರಿನಲ್ಲಿ ನೈತಿಕ ಬೆಂಬಲವೇ ಜಾಸ್ತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂಬರ್ 8: ಕೇಂದ್ರ ಸರ್ಕಾರದ ನೂತನ ಕೃಷಿ ನೀತಿ ಕಾಯ್ದೆ ವಿರೋಧಿಸಿ ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ಸಾಧ್ಯತೆ ಇದೆ. ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು ವಿವಿಧ ಕಾರ್ಮಿಕ ಒಕ್ಕೂಟ, ರಸ್ತೆ ಬದಿ ತರಕಾರಿ ವ್ಯಾಪಾರಿಗಳ ಸಂಘ ಸೇರಿ ಹಲವು ಪ್ರಮುಖ ಸಂಘಟನೆಗಳಿಂದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಹೋಟೆಲ್ ಮಾಲೀಕರು, ವರ್ತಕರು, ಟ್ಯಾಕ್ಸಿ, ಕ್ಯಾಬ್, ಆಟೋ ಚಾಲಕರಿಂದ ಬಂದ್‌ ಮಾಡದೇ‌ ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದಾರೆ. 8 ಗಂಟೆಗೆ ಗನ್ ಹೌಸ್ ವೃತ್ತದಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಯಲಿದೆ.

ಮಂಗಳವಾರ ಬೆಳಿಗ್ಗೆ 6.30ಕ್ಕೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ರೈತರು ಪ್ರತಿಭಟನೆ ನಡೆಸಿದರು. ನಂತರ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಬೆಂಗಳೂರು-ಮೈಸೂರು ರಸ್ತೆಯನ್ನು ತಡೆದರು.

Bharat Bandh: Moral Support In Mysuru

ಮೈಸೂರಿನಲ್ಲಿ ಜನಜೀವನ ಎಂದಿನಂತಿದ್ದು, ಕೇಂದ್ರಿಯ ಬಸ್‌ ನಿಲ್ದಾಣದಿಂದ ಬಸ್ ಗಳು ಸಂಚಾರ ಮಾಡುತ್ತಿವೆ. ಮೈಸೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಬಸ್ ಸಂಚಾರ ಆರಂಭವಾಗಿದೆ.

ಭಾರತ ಬಂದ್: ವಿವಿಧ ಸಂಘಟನೆಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆಭಾರತ ಬಂದ್: ವಿವಿಧ ಸಂಘಟನೆಗಳಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಮೈಸೂರು ಹಾಗೂ ಬೆಂಗಳೂರು ನಡುವಿನ ಬಸ್‌ಗ ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲ. ಅದೇ ರೀತಿ ಮೈಸೂರು ನಗರದಲ್ಲಿ ಆಟೋಗಳು, ಟ್ಯಾಕ್ಸಿಗಳು ಓಡಾಡುತ್ತಿವೆ. ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

Bharat Bandh: Moral Support In Mysuru

ಬಂದ್ ಹಿನ್ನೆಲೆ ಇದ್ದರೂ, ಮೈಸೂರಿನಲ್ಲಿ ಹಾಲು, ಪೇಪರ್‌ಗೆ ಯಾವುದೇ ಸಮಸ್ಯೆ ಇಲ್ಲದಾಗಿದೆ. ಮೈಸೂರಿನಲ್ಲಿ ಸದ್ಯಕ್ಕೆ ಎಂದಿನಂತೆ ಜನಜೀವನ ಆರಂಭವಾಗಿದೆ.

ಹೂವು, ಹಣ್ಣು, ತರಕಾರಿ, ದಿನಸಿ ಸೇರಿದಂತೆ ಬಹುತೇಕ ಅಂಗಡಿಗಳು ಓಪನ್ ಆಗಿದ್ದು, ಎಂದಿನಂತೆ ವಾಣಿಜ್ಯ ಚಟುವಟಿಕೆಗಳು ಬಿರುಸುಗೊಂಡಿವೆ. ಬಂದ್‌ಗೆ ದೇವರಾಜ ಮಾರುಕಟ್ಟೆ, ಸಂತಪೇಟೆ ವ್ಯಾಪಾರಿಗಳ ಸಂಘ ನೈತಿಕ ಬೆಂಬಲ ನೀಡಿವೆ. ಕಿತ್ತಳೆ, ಬಾಳೆ, ಅನಾನಸ್, ಸೀಬೆ, ಪರಂಗಿ ಹಣ್ಣು ಖರೀದಿಯಲ್ಲಿ ವ್ಯಾಪಾರಿಗಳು ನಿರತವಾಗಿದ್ದಾರೆ.

English summary
Several major organizations in Mysuru have staged protests against the central government's new Agriculture policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X