ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಜಿಲ್ಲೆಯೊಳಗಿನ ಪ್ರೇಕ್ಷಣೀಯ ಸ್ಥಳಗಳಿವು

By ಯಶಸ್ವಿನಿ ಎಂ.ಕೆ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 18: ಮೈಸೂರು ಸಂಸ್ಥಾನ 1947 ರಲ್ಲಿ ಭಾರತದ ಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯವನ್ನು ಸೇರಿ 1950 ರಲ್ಲಿ ಮೈಸೂರು ರಾಜ್ಯ ಎಂಬ ಹೆಸರು ಪಡೆಯಿತು. ನಂತರ, ಈ ರಾಜ್ಯ 1956ರ ಏಕೀಕರಣ ನಂತರ "ವಿಶಾಲ ಮೈಸೂರು ರಾಜ್ಯ" ಎಂಬ ಹೆಸರು ಪಡೆಯಿತು. ಆ ಬಳಿಕ 1973ರಲ್ಲಿ "ಕರ್ನಾಟಕ ರಾಜ್ಯ " ಎಂಬ ಹೆಸರು ಸ್ಥಿರವಾಯಿತು.

ಅಂದಿನಿಂದ ಇಂದಿನವರೆಗೂ ಮೈಸೂರು ತನ್ನನ್ನು ಪ್ರವಾಸಿಗರ ಸೆರಗಿನಲ್ಲಿಟ್ಟುಕೊಂಡೇ ತನ್ನ ಪರಂಪರೆಯನ್ನು ಕಾಪಾಡಿಕೊಳ್ಳುತ್ತಿದೆ. ಅಂತಹ ಕೆಲವು ಮೈಸೂರು ತಾಲೂಕಿನೊಳಗೆ ಅಡಕವಾಗಿರುವ ಜಾಗಗಳ ಪರಿಚಯ ನಮ್ಮ ಓದುಗರಿಗಾಗಿ ಇಲ್ಲಿದೆ.

ವಿಶ್ವವಿಖ್ಯಾತ ಮೈಸೂರು ಅರಮನೆಯ ಹಿಂದಿದೆ ಭವ್ಯ ವೈಭವ ವಿಶ್ವವಿಖ್ಯಾತ ಮೈಸೂರು ಅರಮನೆಯ ಹಿಂದಿದೆ ಭವ್ಯ ವೈಭವ

ಮೈಸೂರಿನ ಅರಮನೆ
ಮುಖ್ಯ ಅರಮನೆಯ ಪೂರ್ವ ಭಾಗದಲ್ಲಿ ಜಗನ್ಮೋಹನ ಅರಮನೆಯನ್ನು ರಾಜಕುಮಾರಿ ಮದುವೆಗಾಗಿ ಮೂರನೇ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ 1861ರಲ್ಲಿ ಕಟ್ಟಲಾಯಿತು. ಈ ಅರಮನೆಯ ಮುಖ್ಯ ದ್ವಾರದಲ್ಲಿ ಅಪೂರ್ವವಾದ ಕೆತ್ತನೆ ಮಾಡಲ್ಪಟ್ಟಿದೆ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು 1915ರಿಂದ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲ ವರ್ಣ ಚಿತ್ರಗಳನ್ನೊಳಗೊಂಡ ಈ ವಸ್ತು ಸಂಗ್ರಹಾಲಯವನ್ನು ಒಂದು ಸಮಿತಿಗೆ ವಹಿಸಲಾಯಿತು. ನಂತರ ಈ ಅರಮನೆಗೆ ೧೯೫೫ರಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಆರ್ಟ್‌ ಗ್ಯಾಲರಿ ಎಂದು ಹೆಸರು ಬಂದಿತು.

ಮೈಸೂರು ದಸರೆ ವೀಕ್ಷಣೆಗೆ ಚಾಮುಂಡಿ ಬೆಟ್ಟದಲ್ಲಿ ಬೈನಾಕ್ಯುಲರ್!ಮೈಸೂರು ದಸರೆ ವೀಕ್ಷಣೆಗೆ ಚಾಮುಂಡಿ ಬೆಟ್ಟದಲ್ಲಿ ಬೈನಾಕ್ಯುಲರ್!

ಈ ಗ್ಯಾಲರಿಯಲ್ಲಿ ಟ್ರಾವೆಂಕೂರಿನ ರಾಜ ರವಿ ವರ್ಮರವರಿಂದ ರಚಿತವಾದ ತೈಲವರ್ಣ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಚೀನಾ, ಜಪಾನ್‌ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮೊಗಲ್‌, ರಜಪೂತ ಶೈಲಿಯ ಕಲಾತ್ಮಕ ವಸ್ತುಗಳು, ವಿವಿಧ ರೀತಿಯ ಗಡಿಯಾರಗಳ ಉತ್ತಮ ಸಂಗ್ರಹಗಳು, ಆಟಿಕೆಯ ಸಂಗ್ರಹಗಳು, ವಿವಿಧ ವಿವರಣೆಯನ್ನು ನೀಡುವ ವಸ್ತು ಸಂಗ್ರಹ, ಕಲಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ.(ಚಿತ್ರಕೃಪೆ: ಮೈಸೂರು ಜಿಲ್ಲಾ ವೆಬ್ ಸೈಟ್)

ಸೆಂಟ್ ಫಿಲೋಮಿನಾಸ್ ಚರ್ಚ್

ಸೆಂಟ್ ಫಿಲೋಮಿನಾಸ್ ಚರ್ಚ್

1804 ರಲ್ಲಿ ಗಾಥಿಕ್ ಶೈಲಿಯಲ್ಲಿ ಕಟ್ಟಲಾದ ಈ ಚರ್ಚು ದೇಶದ ಅತ್ಯಂತ ಪುರಾತನ ಮತ್ತು ಅತ್ಯಂತ ಆಕರ್ಷಕ ಚರ್ಚುಗಳಲ್ಲಿ ಒಂದಾಗಿದೆ. ಒಳಗಿನ ಮುಖ್ಯ ಒಳಾಂಗಣದಲ್ಲಿ ಸಂತ ಫಿಲೋಮಿನಾರ ಮೂರ್ತಿಯಿದೆ. ಬಹಳ ಆಕರ್ಷಕವಾದ ಹೊರಗಿನ ಸೂಕ್ಷ್ಮ ಕೆತ್ತನೆಗಳು, ಎತ್ತರದ ಅವಳಿ ಶೃಂಗಗಳು (ಗೋಪುರಗಳು), ಹಲವಾರು ಕಡೆ ಬಳಸಲಾಗಿರುವ ಬಣ್ಣದ ಗಾಜುಗಳು ಈ ಚರ್ಚನ್ನು ಒಂದು ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿಸಿವೆ.

ಚಾಮುಂಡಿ ಬೆಟ್ಟ

ಚಾಮುಂಡಿ ಬೆಟ್ಟ

ಬೆಟ್ಟದ ಮೇಲ್ಭಾಗವನ್ನು ಹತ್ತನೆಯ ಶತಮಾನದ ಹೊತ್ತಿಗಾಗಲೇ ಪುಣ್ಯ ಕ್ಶೇತ್ರವೆಂದು ಪರಿಗಣಿಸಲಾಗಿತ್ತು. ಇಲ್ಲಿರುವ ಆ ಕಾಲದ ಶಾಸನಗಳಲ್ಲಿ ಇದನ್ನು ಮಬ್ಬೆಲದ ತೀರ್ಥ ಅಥವಾ ಮರ್ಬ್ಬಳದ ತೀರ್ಥ ಎಂದು ಕರೆದಿದೆ. ಇಲ್ಲಿ ಹಲವರು ಸಿದ್ಧಿ ಪಡೆದರೆಂದು ಶಾಸನಗಳು ತಿಳಿಸುತ್ತವೆ. ಈಗ ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ, ಹೊಯ್ಸಳ ವಿಷ್ಣುವರ್ಧನನ ಕಾಲಕ್ಕಿಂತ ಮುಂಚೆಯೇ ನಿರ್ಮಿತವಾಗಿತ್ತು. ವಿಷ್ಣುವರ್ಧನನ ಕಾಲದಲ್ಲಿ ೧೧೨೮ರಲ್ಲಿ ಈ ಮರ್ಬ್ಬಳದ ತೀರ್ಥಕ್ಕೆ ದತ್ತಿ ಬಿಟ್ಟಿದ್ದ ಬಗ್ಗೆ ಶಾಸನವಿದೆ.

ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದ್ದ ಮಹಿಷಾಸುರ ಮರ್ಧಿನಿಯನ್ನು ಮೈಸೂರು ಅರಸರು ಬೆಟ್ಟದ ತಾಯಿ ಚಾಮುಂಡೇಶ್ವರಿ ಎಂದು ಕರೆದು, ತಮ್ಮ ಕುಲದೇವತೆಯಾಗಿ ಪೂಜಿಸಿದರು ಎನ್ನುತ್ತದೆ ಇತಿಹಾಸ. ಅಂದಿನಿಂದ ಮರ್ಬಳ ತೀರ್ಥಕ್ಕೆ ಚಾಮುಂಡಿ ಬೆಟ್ಟ ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಇತಿಹಾಸ ತಜ್ಞರು.ದ್ರಾವಿಡ ಶೈಲಿಯ ದೇವಾಲಯಗಳಂತೆ ಈ ದೇವಾಲಯದಲ್ಲೂ ಸುಕನಾಸಿ ಮತ್ತು ನವರಂಗಗಳಿವೆ. ನವರಂಗಗಳಿಗೆ ಹಾಕಿಸಿರುವ ಹಿತ್ತಾಳೆ ತಗಡುಗಳು, ಸಿಂಹವಾಸನ, ಹಲವು ವಾಹನಗಳು, ದೇವಿಯ ಸ್ತೋತ್ರವನ್ನೊಳಗೊಂಡ ನಕ್ಷತ್ರಮಾಲಿಕೆ ಮತ್ತು ಇತರ ಆಭರಣಗಳನ್ನು ರಾಜಮನೆತವರು ದೇವಿಗೆ ಸಮರ್ಪಿಸಿದ್ದಾರೆ.
ಶ್ರೀ ಚಾಮರಾಜೇಂದ್ರ ಮೃಗಾಲಯ

ಶ್ರೀ ಚಾಮರಾಜೇಂದ್ರ ಮೃಗಾಲಯ

ಇದು ದಕ್ಷಿಣ ಭಾರತದಲ್ಲೇ ಹಳೆಯ ಹಾಗೂ ಪ್ರಸಿದ್ದಿ ಪಡೆದಿರುವ ಮೃಗಾಲಯಗಳಲ್ಲಿ ಒಂದು. 1892 ನಲ್ಲಿ ಉದ್ಘಾಟನೆಯಾದ ಈ ಮೃಗಾಲಯ 245 ಚದರ ಅಡಿ ಇದ್ದು ಸಾವಿರಕ್ಕೂ ಹೆಚ್ಚು ಪ್ರಾಣಿಗಳನ್ನು ಹೊಂದಿದೆ. ಈ ಮೃಗಾಲಯ 1892 ರಲ್ಲಿ ಉದ್ಘಾಟನೆಗೊಂಡರೂ, ಸಾರ್ವಜನಿಕರಿಗೆ ಲಭ್ಯವಾದದ್ದು 1902 ರಲ್ಲಿ . ಮೃಗಾಲಯದಲ್ಲಿ ನಾನಾ ರೀತಿಯ ನಾನಾ ದೇಶದ ಪ್ರಾಣಿಗಳಿದ್ದು ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಹಿಡಿಸುತ್ತದೆ.

ರೈಲ್ವೆ ಮ್ಯೂಸಿಯಂ

ರೈಲ್ವೆ ಮ್ಯೂಸಿಯಂ

1979 ರಲ್ಲಿ ಪಿ.ಎಂ. ಜೋಸೆಫ್ ಅವರ ಶ್ರಮದಿಂದ ಈ ಮೈಸೂರಿನ ರೈಲು ಮ್ಯೂಸಿಯಂ ಪ್ರಾರಂಭವಾಯಿತು. ಇಲ್ಲಿ ಗ್ರಾಫಿಕ್ಸ್ ಉಪಯೋಗಿಸಿಕೊಂಡು ಭಾರತೀಯ ರೈಲಿನ ಬೆಳವಣಿಗೆ, ಮತ್ತು ಹಲವಾರು ಫೋಟೋ ಮತ್ತು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಇವಲ್ಲದೆ ಇಲ್ಲಿನ ಮುಖ್ಯ ಆಕರ್ಷಣೆಗಳಾದ ರಾಜವಂಶಸ್ಥರು ಬಳಸುತ್ತಿದ್ದ ರೈಲ್ವೆ ಎಂಜಿನ್, ಹಳೆಯ ಬೋಗಿಗಳು, ವಿವಿಧ ಮಾದರಿ ಸಿಗ್ನಲ್ ಗಳು ಇಲ್ಲಿವೆ. ಹಲವಾರು ಹಳೆಯ ರೈಲು ಇಂಜಿನ್ ಗಳು, ಬೋಗಿಗಳು, ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಇತರೆ ರೈಲು ಸಾಮಗ್ರಿಗಳು ಇಲ್ಲಿವೆ.

ಲಲಿತ ಮಹಲ್

ಲಲಿತ ಮಹಲ್

ಮೈಸೂರು ನಗರದಿಂದ ತುಸು ಹೊರಭಾಗದಲ್ಲಿರುವ ಈ ಲಲಿತಮಹಲ್‌ ಅರಮನೆ ಎಂತಹವರನ್ನೂ ಅಯಸ್ಕಾಂತದಂತೆ ಸೆಳೆವ ಚೆಲುವಿನ ಗಣಿ. ಇದು 1921ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಂದ ನಿರ್ಮಾಣಗೊಂಡಿರುವ ಎರಡು ಅಂತಸ್ತಿನ ಭವ್ಯ ಕಟ್ಟಡವಾಗಿದ್ದು ಯೂರೋಪ್‌ ಮಾದರಿಯಲ್ಲಿದೆ.

ಮಾನಸ ಗಂಗೋತ್ರಿ

ಮಾನಸ ಗಂಗೋತ್ರಿ

ಮೈಸೂರಿನ ಆಕರ್ಷಣೆಗಳಲ್ಲಿ ಇನ್ನೊಂದು ಮಾನಸಗಂಗೋತ್ರಿ., ನೈಸರ್ಗಿಕ ಚರಿತ್ರೆ ವಸ್ತುಸಂಗ್ರಹಾಲಯ, ಕಲಾ ಮಂದಿರ, ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಮೈಸೂರು ರೇಷ್ಮೆ ಕಾರ್ಖಾನೆ , ರಾಜೇಂದ್ರ ವಿಲಾಸ ಅರಮನೆ, ಜಯಲಕ್ಷ್ಮಿ ವಿಲಾಸ ಅರಮನೆ
ಮುಂತಾದವು ಈ ಪಟ್ಟಿಗೆ ಸೇರಿದ್ದು, ದಸರೆಗೆ ತೆರಳುವಾಗ ಇಲ್ಲಿಗೆ ತೆರಳುವುದನ್ನು ಮಾತ್ರೆ ಮರೆಯದಿರಿ.

English summary
Mysore used to be the the capital city of the Kingdom of Mysore from 1399 until 1947. Such a history has left behind some brilliant architectural structures and a rich cultural heritage in this city that attracts tourists in large numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X