ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಖದೀಮರ ಪತ್ತೆಗೆ ಬಂದ ಬೆಲ್ಜಿಯಂ ಮಾಲಿನೋಯ್ಸ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 08; ತನ್ನ ಜಾಣ್ಮೆ, ಚಾಣಾಕ್ಷತನದಿಂದ ಖದೀಮರ ಪಾಲಿಗೆ ಸಿಂಹಸ್ವಪ್ನವಾಗುವ, ಅಪರಾಧಿಗಳ ಸುಳಿವು ಪತ್ತೆ ಹಚ್ಚುವ ಸೂಪರ್ ಹೀರೋ ಇದೀಗ ಮೈಸೂರು ಪೊಲೀಸ್ ಶ್ವನದಳ ತಂಡಕ್ಕೆ ಸೇರ್ಪಡೆಯಾಗಿದ್ದಾನೆ.

ಮೈಸೂರು ಪೊಲೀಸ್ ಶ್ವಾನದಳಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಬೆಲ್ಜಿಯಂ ಮಾಲಿನೋಯ್ಸ್ (Belgian malinois) ತಳಿಯ ನಾಯಿ ಹೊಸ ಸದಸ್ಯ. ಬಹಳ ಚಾಣಾಕ್ಷವಾದ ಈ ನಾಯಿ ಉಡುಗೊರೆ ರೂಪದಲ್ಲಿ ಪೊಲೀಸ್ ಇಲಾಖೆಗೆ ಸೇರಿದೆ.

ಅಪರಾಧ ಪತ್ತೆಗೆ ಬಾಗಲಕೋಟೆ ಪೊಲೀಸರ ಜೊತೆ ಸೇರಿದ 'ಕ್ರಿಶ್' ಅಪರಾಧ ಪತ್ತೆಗೆ ಬಾಗಲಕೋಟೆ ಪೊಲೀಸರ ಜೊತೆ ಸೇರಿದ 'ಕ್ರಿಶ್'

ಮೈಸೂರು ಪೊಲೀಸ್ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಈ ತಳಿಯ ನಾಯಿ ಸೇರ್ಪಡೆಗೊಂಡಿದೆ. ಈ ನಾಯಿಯ ಮಾರುಕಟ್ಟೆ ಮೌಲ್ಯ ಸುಮಾರು 1.50 ಲಕ್ಷ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಈ ತಳಿಯ ಎರಡು ನಾಯಿಗಳಿವೆ. ಈಗ ಮೈಸೂರಿನಲ್ಲಿ ಒಂದು ಸೇರ್ಪಡೆಯಾಗಿದೆ.

ಎನ್‌ಎಸ್‌ಜಿ ಪಡೆ ಸೇರಲಿವೆ ಬಾಗಲಕೋಟೆಯ ಮುಧೋಳ ನಾಯಿಎನ್‌ಎಸ್‌ಜಿ ಪಡೆ ಸೇರಲಿವೆ ಬಾಗಲಕೋಟೆಯ ಮುಧೋಳ ನಾಯಿ

Belgian Malinois Dog Joins Mysuru City Police Dog Squad

ಸದಾಕಾಲ ಎಚ್ಚರಿಕೆಯಿಂದ ಇರುವುದು ಈ ನಾಯಿಯ ವಿಶೇಷತೆ. ನೋಡಲು ಜರ್ಮನ್ ಶಫರ್ಡ್‌ ನಂತೆ ಕಂಡರೂ ಅದಕ್ಕಿಂತಲೂ ಅತಿ ಬುದ್ಧಿವಂತಿಕೆ ಇದಕ್ಕಿದೆ. 2 ತಿಂಗಳ ಮರಿಯನ್ನು ಪ್ರಮೋದ್ ಎಂಬುವವರು ನಗರ ಪೊಲೀಸರಿಗೆ ಉಚಿತವಾಗಿ ನೀಡಿದ್ದಾರೆ.

ವಾಯುಪಡೆಯ ಸೇವೆಗೆ ಕರ್ನಾಟಕದ ಹೆಮ್ಮೆಯ ಮುಧೋಳ ಶ್ವಾನವಾಯುಪಡೆಯ ಸೇವೆಗೆ ಕರ್ನಾಟಕದ ಹೆಮ್ಮೆಯ ಮುಧೋಳ ಶ್ವಾನ

ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರಿಗೆ ನಾಯಿಯನ್ನು ಹಸ್ತಾಂತರ ಮಾಡಲಾಯಿತು. ಸೇನೆಯಲ್ಲಿ ಈ ತಳಿಯ ನಾಯಿಯ ಬಳಕೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

Belgian Malinois Dog Joins Mysuru City Police Dog Squad

ನಾಯಿ ಮರಿ ಹಸ್ತಾಂತರದ ವೇಳೆ ಇನ್ಸ್‌ಪೆಕ್ಟರ್ ಮೂರ್ತಿ, ಸಬ್ ಇನ್ಸ್‌ಪೆಕ್ಟರ್ ಸುರೇಶ್, ಶ್ವಾನ ತರಬೇತುದಾರ ಜಿ. ಮಂಜು ಮುಂತಾದವರಿದ್ದರು.

English summary
The Belgian Malinois is a very smart and obedient dog. This now joined Mysuru city police dog squad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X