ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಬ್ಯೂಟಿಪಾರ್ಲರ್ ಗಳನ್ನು ತಕ್ಷಣವೇ ಮುಚ್ಚಿಸಿ ಎಂದ ಬ್ಯೂಟಿಶಿಯನ್ಸ್

By Yashaswini
|
Google Oneindia Kannada News

ಮೈಸೂರು, ಆಗಸ್ಟ್. 2: ನಗರದಲ್ಲಿ ಅಕ್ರಮವಾಗಿ ನಡೆಯುತ್ತಿರುವ 250ಕ್ಕೂ ಅಧಿಕ ಬ್ಯೂಟಿಪಾರ್ಲರ್ ಗಳನ್ನು ತಕ್ಷಣವೇ ಮುಚ್ಚಿಸಬೇಕು. ಆ ಮೂಲಕ ಅನೈತಿಕ ಚಟುವಟಿಕೆಗಳಿಗೆ ತಡೆಯೊಡ್ಡಬೇಕು ಎಂದು ಮೈಸೂರು ಜಿಲ್ಲಾ ಬ್ಯೂಟಿ ಪಾರ್ಲರ್ ಮಾಲೀಕರ ಸಂಘ ಆಗ್ರಹಿಸಿದೆ.

ಬ್ಯೂಟಿಪಾರ್ಲರ್ ಹೆಸರಿನಲ್ಲಿ ಅಕ್ರಮ ದಂಧೆ ನಡೆಸುವವರಿಂದಾಗಿ ಈ ವೃತ್ತಿಯನ್ನೇ ನಂಬಿ ಗೌರವಯುತ ಜೀವನ ಸಾಗಿಸುತ್ತಿರುವ ನಾವುಗಳು ಸಾರ್ವಜನಿಕರೆದುರು ತಲೆ ತಗ್ಗಿಸುವಂತಾಗಿದೆ. ಪೊಲೀಸರು ಮತ್ತು ನಗರ ಪಾಲಿಕೆ ಅಧಿಕಾರಿಗಳು ಕಾಲಕಾಲಕ್ಕೆ ಪಾರ್ಲರ್ ಗಳ ತಪಾಸಣೆ ನಡೆಸಿದ್ದರೆ ಈ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ ಎಂದು ಸಂಘದ ಪದಾಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಮೈಸೂರು : ಮತ್ತೆ ಬ್ಯೂಟಿ ಪಾರ್ಲರ್ ಮೇಲೆ ದಾಳಿ, ಯುವತಿಯರ ರಕ್ಷಣೆಮೈಸೂರು : ಮತ್ತೆ ಬ್ಯೂಟಿ ಪಾರ್ಲರ್ ಮೇಲೆ ದಾಳಿ, ಯುವತಿಯರ ರಕ್ಷಣೆ

ಇದೇ ವೇಳೆ ಮಾತನಾಡಿದ ಸಂಘದ ಅಧ್ಯಕ್ಷೆ ಸುಜಾತಾ, ಕೆಲ ದಿನಗಳ ಹಿಂದೆ ನಗರದ ಹಲವು ಬ್ಯೂಟಿಪಾರ್ಲರ್ ಗಳ ಮೇಲೆ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ದಾಳಿ ನಡೆಸಿದಾಗ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಪತ್ತೆಯಾಗಿದ್ದು, ಆ ಬಳಿಕ ಜನರು ಲೈಸೆನ್ಸ್ ಪಡೆದು ಸಕ್ರಮವಾಗಿ ನಡೆಸುತ್ತಿರುವ ಬ್ಯೂಟಿಪಾರ್ಲರ್ ಗಳ ಬಗ್ಗೆಯೂ ಶಂಕೆಯಿಂದ ನೋಡಲಾರಂಭಿಸಿದ್ದಾರೆ.

Beauticians demanded illegal beauty parlour should be closed immediately

ಇದರಿಂದ ನಾವೆಲ್ಲರೂ ನಮ್ಮ ಬದುಕಿಗೆ ಆಧಾರವಾದ ಪಾರ್ಲರ್ ವೃತ್ತಿ ನಡೆಸುವುದೇ ಕಷ್ಟವಾಗಿಬಿಟ್ಟಿದೆ ಎಂದು ಸಮಸ್ಯೆಯ ಚಿತ್ರಣ ನೀಡಿದರು. ನಗರದಲ್ಲಿ ಸುಮಾರು 600 ಬ್ಯೂಟಿಪಾರ್ಲರ್ ಗಳಿವೆ. ಇವುಗಳಲ್ಲಿ ಅರ್ಧದಷ್ಟು ಪಾರ್ಲರ್ ಗಳು ಪರವಾನಗಿಯನ್ನೇ ಪಡೆದಿಲ್ಲ.

ನಮ್ಮ ಸಂಘದ ಸದಸ್ಯತ್ವ ಪಡೆದಿರುವ ಎಲ್ಲ ಬ್ಯೂಟಿಪಾರ್ಲರ್ ಗಳ ಮೇಲೆ ನಾವು ನಿಗಾ ಇರಿಸಿದ್ದೇವೆ. ನಗರದಲ್ಲಿ ಪರವಾನಗಿ ಪಡೆಯದೇ ಇರುವ 250ಕ್ಕೂ ಅಧಿಕ ಬ್ಯೂಟಿ ಪಾರ್ಲರ್ ಗಳ ಬಗ್ಗೆ ನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಗೆ ಈಗಾಗಲೇ ದೂರು ನೀಡಿದ್ದೇವೆ.

ಆದರೆ, ಈವರೆಗೂ ಒಂದು ಪಾರ್ಲರನ್ನೂ ಅಧಿಕಾರಿಗಳು ತಪಾಸಣೆಗೊಳಪಡಿಸಿ ಮುಚ್ಚಿಸುವ ಗೋಜಿಗೆ ಹೋಗಿಲ್ಲ. ಏಕೆ ಮಾಡಿಲ್ಲ ಎಂಬ ಬಗ್ಗೆ ಅಧಿಕಾರಿಗಳೇ ಉತ್ತರಿಸಬೇಕು. ಅಧಿಕಾರಿಗಳ ಈ ನಿರಾಸಕ್ತಿಯ ಕಾರಣ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ' ಎಂಬಂತಹ ಸ್ಥಿತಿ ನಮ್ಮದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ವಿವಿಧೆಡೆ ಅನೇಕ ಸರ್ಕಾರೇತರ ಸಂಸ್ಥೆಗಳು ಸಹ ಬ್ಯೂಟಿ ಪಾರ್ಲರ್ ವೃತ್ತಿ ತರಬೇತಿ ನೀಡುತ್ತಿವೆ. ಅವುಗಳೂ ಇವು ಕ್ರಮ ಬದ್ಧವಾಗಿಲ್ಲ. ಅಂತಹ ಸಂಸ್ಥೆಗಳು ಕೇವಲ 3 ವಾರಗಳ ಅವಧಿಗೆ ನೀಡುವ ತರಬೇತಿಯಿಂದ ಎಲ್ಲವನ್ನೂ ಕಲಿಯಲು ಸಾಧ್ಯವೇ ಇಲ್ಲ.

ಹೀಗಾಗಿ ಅಂತಹ ಸಂಸ್ಥೆಗಳು ನೀಡುವ ಪ್ರಮಾಣಪತ್ರ ಪಡೆದು ದಿಢೀರ್ ಎಂದು ಬ್ಯೂಟಿಪಾರ್ಲರ್ ತೆರೆಯುವವರಿಂದಲೂ ಬ್ಯೂಟಿಪಾರ್ಲರ್ ಉದ್ಯಮಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ಇಂತಹ ದಿಢೀರ್ ಸಂಸ್ಥೆ ಗಳನ್ನೂ ಮುಚ್ಚಿಸಬೇಕು ಎಂದು ಸುಜಾತಾ ಒತ್ತಾಯಿಸಿದರು.

English summary
Mysore District Beauty Parlor Owners Association has demanded more than 250 illegal beauty parlour should be closed immediately.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X