ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ಪ್ರಚಾರದಲ್ಲಿ ಬ್ಯಾನರ್, ಬಂಟಿಂಗ್ಸ್ ಗಳಿಗೆ ಬೀಳಲಿದೆ ಬ್ರೇಕ್

|
Google Oneindia Kannada News

ಮೈಸೂರು, ಮಾರ್ಚ್ 27 : ಚುನಾವಣೆ ನಡೆಯಿತಿದೆ ಎಂದರೆ ಸಾಕು ಮೆರವಣಿಗೆ, ಕೈಗಳಲ್ಲಿ ಪ್ಲಾಸ್ಟಿಕ್ ಧ್ವಜ, ಬ್ಯಾನರ್ , ಬಂಟಿಗ್ಸ್ ಗಳ ಅಬ್ಬರದ ಭರಾಟೆ ಎಲ್ಲಾ ಕಡೆಯೂ ರಾರಾಜಿಸುತ್ತಿರುತ್ತದೆ.

ಅದರೊಟ್ಟಿಗೆ ಕಟೌಟ್ ಗಳು, ಕರಪತ್ರ ಸೇರಿದಂತೆ ಹಲವು ಚುನಾವಣಾ ಸಾಮಾಗ್ರಿ ಎಲ್ಲಾ ಕಡೆ ಕಾಣಸಿಗುತ್ತದೆ. ಆದರೆ ಕೆಲ ವರ್ಷಗಳಿಂದಲೂ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಾವಳಿಗಳು ಇಂತಹ ಪ್ರಚಾರದ ಅಬ್ಬರದಿಂದ ದೂರಸರಿಯುವಂತೆ ಮಾಡುತ್ತಿದೆ.

ಮೈಸೂರಲ್ಲಿ ಮತದಾನ ಅರಿವು ಮೂಡಿಸಲು ಹೋಟೆಲ್‌ ಸಿಬ್ಬಂದಿಗಳ ನೂತನ ಪ್ರಯತ್ನಮೈಸೂರಲ್ಲಿ ಮತದಾನ ಅರಿವು ಮೂಡಿಸಲು ಹೋಟೆಲ್‌ ಸಿಬ್ಬಂದಿಗಳ ನೂತನ ಪ್ರಯತ್ನ

ಇದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಚಟುವಟಿಕೆಗಳು ಗರಿಗೆದರಿದ್ದರೂ ಪೋಸ್ಟರ್, ಫ್ಲೆಕ್ಸ್, ಬಂಟಿಂಗ್ಸ್ ಬ್ಯಾನರ್ ಸೇರಿದಂತೆ ಯಾವುದೇ ಪ್ರಚಾರ ಸಾಮಗ್ರಿ ಮುದ್ರಣಕ್ಕೆ ಪ್ರಿಂಟಿಗ್ ಪ್ರೆಸ್ ಗೆ ಬೇಡಿಕೆ ಒದಗಿ ಬಂದಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಅಂಗಡಿ-ಮುಂಗಟ್ಟು, ರಸ್ತೆ-ಗಲ್ಲಿಗಳಲ್ಲಿ ಬ್ಯಾನರ್, ಪೋಸ್ಟರ್‍ಗಳಿಗೆ ಒಂದು ಕಾಲದಲ್ಲಿ ಎಲ್ಲಿಲ್ಲದ ಬೇಡಿಕೆ ಬರುತ್ತಿತ್ತು. ಆದರೆ ಈಗ ಅಂತಹ ಸನ್ನಿವೇಶ ಇಲ್ಲವಾಗಿದ್ದು, ಅವೂ ಆಯೋಗದ ಕಣ್ಗಾವಲಿನಲ್ಲೇ ಕೆಲಸ ಮಾಡಬೇಕಿದೆ. ಜೊತೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನವಾದ ಮಾ.29ರ ಬಳಿಕವಷ್ಟೇ ಮುದ್ರಣಾಲಯದತ್ತ ಪಕ್ಷದವರು ಸಾಗಲಿದ್ದಾರೆ. ಅದಾಗ್ಯೂ ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣದ ಭರಾಟೆ ಸ್ಥಳೀಯವಾಗಿ ಅಷ್ಟೇನೂ ಜೋರಾಗದು ಎಂದೇ ಅಂದಾಜಿಸಬಹುದು.

Banner, buntings banned for this lok sabha elections

ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಸಭಾ ಚುನಾವಣೆಯಷ್ಟು ಕಾವು ಈ ಚುನಾವಣೆಯಲ್ಲಿ ಕಂಡು ಬಾರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪ್ರಚಾರ ಸಾಮಗ್ರಿಗಳನ್ನು ಮಾಡಿಸಲು ಮುಂದಾಗುತ್ತವೆ. ಹೀಗಾಗಿ ಸ್ಥಳೀಯ ಮುದ್ರಕರಿಗೆ ಅಂತಹ ಲಾಭವಾಗುವ ಸನ್ನಿವೇಶ ಕಡಿಮೆ ಇದೆ.

ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ದೀರ್ಘ ಪಟ್ಟಿಗೆ ರಾಹುಲ್ ಒಪ್ಪಿಗೆ ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ದೀರ್ಘ ಪಟ್ಟಿಗೆ ರಾಹುಲ್ ಒಪ್ಪಿಗೆ

ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಅಭಿರಾಮ್ ಜಿ.ಶಂಕರ್ ಈಗಾಗಲೇ ಜಿಲ್ಲೆಯ ಮುದ್ರಣಾಲಯ ಮಾಲೀಕರ ಸಭೆ ನಡೆಸಿ ಪಬ್ಲಿಷರ್, ಪ್ರಿಂಟರ್ ಹಾಗೂ ಬ್ಯಾನರ್ ಏಜೆನ್ಸಿಯ ಹೆಸರು ಕಡ್ಡಾಯವಾಗಿ ಪ್ರಕಟಿಸಲು ಸೂಚನೆ ನೀಡಿದ್ದಾರೆ.
ಅಲ್ಲದೆ, ಚುನಾವಣಾ ಪ್ರಚಾರದ ಎಲ್ಲಾ ರೀತಿ ಮುದ್ರಣಗಳಿಗೆ ಸಂಬಂಧಿಸಿದಂತೆ ಅವುಗಳ ಸಮಗ್ರ ವಿವರಗಳನ್ನು ಬಿ-ಫಾರಂ'ನಲ್ಲಿ ಭರ್ತಿ ಮಾಡಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿದ್ದು, ಮುದ್ರಣಕಾರರಿಗೆ ಮಾಹಿತಿ ನೀಡಲು ಹೊಸ ಇ-ಮೇಲ್ ಖಾತೆ' ತೆರೆ ಯಲು ಕ್ರಮ ವಹಿಸಲಾಗಿದೆ. ಈ ಇ-ಮೇಲ್ ಖಾತೆಗೆ ಪ್ರತಿ ದಿನವೂ ಚುನಾವಣಾ ಸಾಮಗ್ರಿಗಳ ಮುದ್ರಣಾ ವಿವರಗಳ ಮಾಹಿತಿ ಒದಗಿಸಬೇಕಿದೆ.

ಪ್ರಧಾನಿ ಮೋದಿ ಇನ್ನು ಮುಂದೆ ವಿದೇಶ ಪ್ರವಾಸ ಮಾಡೊಲ್ಲ! ಪ್ರಧಾನಿ ಮೋದಿ ಇನ್ನು ಮುಂದೆ ವಿದೇಶ ಪ್ರವಾಸ ಮಾಡೊಲ್ಲ!

ಚುನಾವಣಾ ಪ್ರಚಾರದ ಬ್ಯಾನರ್, ಕರಪತ್ರಗಳು ಹಾಗೂ ಇನ್ನಿತರ ಮುದ್ರಣಗಳಲ್ಲಿ ಆದಷ್ಟು ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಿಲ್ಲೆಯ ಮುದ್ರಣಕಾರರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‍ಗೆ ಕಡಿವಾಣ ಬೀಳಲಿದ್ದು, ಇದರ ಜೊತೆಗೆ ಮೈಸೂರು ನಗರ ಪಾಲಿಕೆಯೂ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಿದ್ದು ಇದು ಕೂಡ ಪರಿಸರ ಕಾಳಜಿಯನ್ನು ಮಾರ್ದನಿಸುವಂತೆ ಮಾಡಿದೆ.

English summary
Plastic, banner and buntings banned for this lokasabha elections. Mysuru DC Ordered that don’t use plastics in election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X