ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾಗೆ ಬೆಂಗಳೂರು– ಮೈಸೂರು ನಡುವೆ ವಿಶೇಷ ರೈಲು ಸಂಚಾರ

|
Google Oneindia Kannada News

ಮೈಸೂರು, ಅಕ್ಟೋಬರ್.07 : ನಾಡಹಬ್ಬ ದಸರಾ ಅಂಗವಾಗಿ ಜನದಟ್ಟಣೆ ತಪ್ಪಿಸಲು ಅಕ್ಟೋಬರ್ 9ರಿಂದ 22ರ ವರೆಗೆ ಬೆಂಗಳೂರು- ಮೈಸೂರು ನಡುವೆ ವಿಶೇಷ ರೈಲು ಸಂಚರಿಸಲಿದೆ.

'ಜನಸಾಧಾರಣ ವಿಶೇಷ ರೈಲ'ನ್ನು ನೈರುತ್ಯ ರೈಲ್ವೆ ಪರಿಚಯಿಸಿದೆ. ಬೆಂಗಳೂರು ನಗರ-ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ (06557) ರೈಲು ಅ.9ರಿಂದ 21ರವರೆಗೆ ಪ್ರತಿದಿನ ಬೆಳಗ್ಗೆ 8:45ಕ್ಕೆ ಬೆಂಗಳೂರು ನಗರದಿಂದ ಹೊರಟು ಬೆಳಗ್ಗೆ 11:35ಕ್ಕೆ ಮೈಸೂರು ತಲುಪಲಿದೆ.

ಬೆಂಗಳೂರು-ಮೈಸೂರು ಮೆಮು ರೈಲು ಸಂಚಾರಕ್ಕಿದ್ದ ಅಡೆತಡೆ ನಿವಾರಣೆಬೆಂಗಳೂರು-ಮೈಸೂರು ಮೆಮು ರೈಲು ಸಂಚಾರಕ್ಕಿದ್ದ ಅಡೆತಡೆ ನಿವಾರಣೆ

ಅದೇ ರೀತಿ ಅ.10ರಿಂದ 22ರವರೆಗೆ ಮೈಸೂರಿನಿಂದ ಮಧ್ಯಾಹ್ನ 12:50ಕ್ಕೆ ಹೊರಡುವ ರೈಲು (06558) ಮಧ್ಯಾಹ್ನ 3:45ಕ್ಕೆ ಬೆಂಗಳೂರು ನಗರ ನಿಲ್ದಾಣಕ್ಕೆ ಬಂದು ಸೇರಲಿದೆ. ಒಟ್ಟು 13 ಟ್ರಿಪ್‌ ರೈಲು ಸಂಚರಿಸಲಿದೆ.

Bangalore-Mysore special train will run from October 9

ಶಿವಮೊಗ್ಗ ಟೌನ್‌-ಶ್ರವಣಬೆಳಗೊಳ ವಾರದಲ್ಲಿ ಮೂರು ದಿನ ಸಂಚಾರದ ವಿಶೇಷ ಎಕ್ಸ್‌ಪ್ರೆಸ್‌ (06223) ರೈಲು ಅ.9ರಿಂದ 25ರವರೆಗೆ ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಬೆಳಗ್ಗೆ 6:25ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 11:25ಕ್ಕೆ ಶ್ರವಣಬೆಳಗೊಳಕ್ಕೆ ತಲುಪಲಿದೆ.

ಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತುಅಬ್ಬಬ್ಬಾ! ನಮ್ಮ ರೈಲ್ವೆ ಪ್ರಯಾಣಿಕರು ಕದ್ದಿದ್ದು 2.5 ಕೋಟಿ ರೂ ಮೌಲ್ಯದ ವಸ್ತು

ಅ.9ರಿಂದ 25ರವರೆಗೆ ಶ್ರವಣಬೆಳಗೊಳ-ಶಿವಮೊಗ್ಗ ಟೌನ್‌ ವಿಶೇಷ ಎಕ್ಸ್‌ಪ್ರೆಸ್‌ (06224) ರೈಲು ಪ್ರತಿ ಭಾನುವಾರ, ಮಂಗಳವಾರ ಹಾಗೂ ಗುರುವಾರ ಮಧ್ಯಾಹ್ನ 1:35ಕ್ಕೆ ಶ್ರವಣಬೆಳಗೊಳದಿಂದ ಪ್ರಯಾಣ ಬೆಳೆಸಿ ಸಂಜೆ 7:10ಕ್ಕೆ ಶಿವಮೊಗ್ಗ ಟೌನ್‌ ಸೇರಲಿದೆ.

ನೈಋತ್ಯ ರೈಲ್ವೆ: 116 ರೈಲುಗಳ ಪರಿಷ್ಕೃತ ವೇಳಾಪಟ್ಟಿ ಸಿದ್ಧ ನೈಋತ್ಯ ರೈಲ್ವೆ: 116 ರೈಲುಗಳ ಪರಿಷ್ಕೃತ ವೇಳಾಪಟ್ಟಿ ಸಿದ್ಧ

ನೈಋತ್ಯ ರೈಲ್ವೆ ಕೆಲವು ಹಾಲ್ಟ್ ಸ್ಟೇಶನ್ ಗಳನ್ನು 3 ತಿಂಗಳ ಅವಧಿಗೆ ಬಂದ್‌ ಮಾಡಿದೆ. ಆದಿಚುಂಚನಗಿರಿ, ಸಿದ್ದಾಪುರ, ಪಾಲಹಳ್ಳಿ, ದೊಡ್ಡನಟ್ಟ, ಗಣ್ಣಘಟ್ಟ, ಗೊಟ್ಟಿಹಳ್ಳಿ, ಗಿಡ್ನಹಳ್ಳಿ ಹಾಲ್ಟ್ ನಿಲ್ದಾಣಗಳನ್ನು ಅ.7ರಿಂದ ಮೂರು ತಿಂಗಳ ಅವಧಿಗೆ ಬಂದ್‌ ಮಾಡಲಾಗುವುದು.

ಮೈಸೂರು ದಸರಾ ಉತ್ಸವವನ್ನು ಮೊಬೈಲ್‌ನಿಂದಲೇ ಲೈವ್‌ ಆಗಿ ನೋಡಿಮೈಸೂರು ದಸರಾ ಉತ್ಸವವನ್ನು ಮೊಬೈಲ್‌ನಿಂದಲೇ ಲೈವ್‌ ಆಗಿ ನೋಡಿ

ಯಶವಂತಪುರ-ಮೈಸೂರು ಪ್ಯಾಸೆಂಜರ್ (56215) ರೈಲು ಆದಿಚುಂಚನಗಿರಿ ಹಾಗೂ ಸಿದ್ದಾಪುರ, ಬೆಂಗಳೂರು ನಗರ-ಕೋಲಾರ ಪ್ಯಾಸೆಂಜರ್ (76551) ರೈಲು ದೊಡ್ಡನಟ್ಟ, ಜನ್ನಘಟ್ಟ, ಗಿಡ್ನಳ್ಳಿ ನಿಲ್ದಾಣದಲ್ಲಿ ಚನ್ನಪಟ್ಟಣ-ಕೋಲಾರ (76525) ದೊಡ್ಡನಟ್ಟ, ಗೊಟ್ಟಿಹಳ್ಳಿ, ಜನ್ನಘಟ್ಟ ಹಾಗೂ ಗಿಡ್ನಳ್ಳಿ ನಿಲ್ದಾಣದಲ್ಲಿ 3 ತಿಂಗಳು ನಿಲುಗಡೆಗೊಳ್ಳುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

English summary
Bangalore-Mysore special train will run between October 9 and 22. Announcement was announced by the South Western Railway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X