ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಡೀಪುರ ಸಫಾರಿ, ಪ್ರವೇಶ ಶುಲ್ಕ ಏರಿಕೆ

|
Google Oneindia Kannada News

ಮೈಸೂರು, ಏಪ್ರಿಲ್ 4; ಬಂಡೀಪುರ ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರು ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಿದೆ. ಅರಣ್ಯ ಇಲಾಖೆ ಪ್ರವೇಶ ಮತ್ತು ಸಫಾರಿ ಶುಲ್ಕವನ್ನು ಏರಿಕೆ ಮಾಡಿದೆ.

ಕೋವಿಡ್ ಸಂಕಷ್ಟದ ನಡುವೆ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ಅರಣ್ಯ ಇಲಾಖೆ ಶುಲ್ಕದಲ್ಲಿ ಭಾರೀ ಏರಿಕೆ ಮಾಡಿದೆ.

ಬಂಡೀಪುರ ಅರಣ್ಯದಲ್ಲಿ ಜಿಂಕೆಗಳ ಬೇಟೆ: ಆರು ಜನರ ಬಂಧನಬಂಡೀಪುರ ಅರಣ್ಯದಲ್ಲಿ ಜಿಂಕೆಗಳ ಬೇಟೆ: ಆರು ಜನರ ಬಂಧನ

ಬಂಡೀಪುರದಲ್ಲಿ ಪ್ರವೇಶ ಶುಲ್ಕ ಹಿಂದೆ 250 ರೂ. ಇತ್ತು. ಇದನ್ನು 300 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಸಫಾರಿಗೆ 100 ರೂ. ಶುಲ್ಕವಿತ್ತು. ಇದನ್ನು 300 ರೂ.ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

ಬಂಡೀಪುರ ಕಾಡಂಚಿನ ಮದ್ದೂರು ಜನರ ಮುಗಿಯದ ಬವಣೆಬಂಡೀಪುರ ಕಾಡಂಚಿನ ಮದ್ದೂರು ಜನರ ಮುಗಿಯದ ಬವಣೆ

 Bandipur Safari And Entry Fee Hiked

ವನ್ಯ ಸಂಪತ್ತು ವೀಕ್ಷಿಸಲು ಬರುವ ಪ್ರವಾಸಿಗರು 250 ರೂ. ಪಾವತಿ ಮಾಡಬೇಕಿತ್ತು. ಅದನ್ನು 600 ರೂ.ಗಳಿಗೆ ಏರಿಕೆ ಮಾಡಲಾಗಿದೆ. ವಿದೇಶಿಯರಿಗೆ 500 ರೂ. ಇದ್ದ ಪ್ರವೇಶ ಶುಲ್ಕವನ್ನು 1000 ರೂ.ಗೆ ಏರಿಸಲಾಗಿದೆ.

 ಬಂಡೀಪುರ ಸಫಾರಿಗೆ ಹೋಗುವವರು ಇನ್ನು ಮೊಬೈಲ್ ಬಳಸುವಂತಿಲ್ಲ ಬಂಡೀಪುರ ಸಫಾರಿಗೆ ಹೋಗುವವರು ಇನ್ನು ಮೊಬೈಲ್ ಬಳಸುವಂತಿಲ್ಲ

ಸಫಾರಿ ಹೋಗುವವರು ಜಿಪ್ಸಿ ಬಾಡಿಗೆಯಾಗಿ 3 ಸಾವಿರ ರೂ. ನೀಡಬೇಕಿತ್ತು. ಅದನ್ನು 3,500 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಕ್ಯಾಂಟರ್ 5000 ಇದ್ದ ದರವನ್ನು 7 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಬಂಡೀಪುರದಲ್ಲಿ ಛಾಯಾಚಿತ್ರ ತೆಗೆಯಲು ಅನೇಕ ಹವ್ಯಾಸಿ ಛಾಯಾಗ್ರಾಹಕರು ಹೋಗುತ್ತಾರೆ. ಕ್ಯಾಮರಾಗಳ ಮೇಲಿನ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ.

English summary
Forest department hiked Bandipur national park entry fee and safari fare. Now tourist should pay 300 Rs for safari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X