ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಕೆಂಡ್ ವಿತ್ ರಮೇಶ್: ಜಗ್ಗೇಶ್ ಎಪಿಸೋಡಿಗೆ ನಿರ್ಬಂಧ?

ಉಪಚುನಾವಣೆಯ ಮತದಾರರ ಮೇಲೆ ಜಗ್ಗೇಶ್ ಭಾಗವಹಿಸಲಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ವಾರದ ಕಾರ್ಯಕ್ರಮ ನಿರ್ಬಂಧಿಸಲು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು , ಮಾರ್ಚ್ 30 : ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ನಟ ಜಗ್ಗೇಶ್ ಅವರು ಭಾಗವಹಿಸಲಿರುವ ಈ ವಾರದ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋವನ್ನು ನಿರ್ಬಂಧಿಸುವಂತೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಬಿಜೆಪಿ ಮುಖಂಡರಾಗಿರುವ ಜಗ್ಗೇಶ್ ಉಪ ಚುನಾವಣೆಯ ಪ್ರಚಾರದಲ್ಲೂ ಭಾಗವಹಿಸಿದ್ದಾರೆ. ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಮತದಾರರ ಮೇಲೆ ಜಗ್ಗೇಶ್ ಕಾರ್ಯಕ್ರಮ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಬೆಂಬಲಿಗರು ಹೇಳಿದ್ದಾರೆ.['ವೀಕೆಂಡ್... ಸೀಸನ್- 3'ನಲ್ಲಿ ಮತ್ತಷ್ಟು ವಿಶೇಷ: ರಮೇಶ್ ಅರವಿಂದ್]

Ban weekend with Ramesh's this week episode: Congress leaders

ಜೀ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಜಗ್ಗೇಶ್ ಎಪಿಸೋಡ್ ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ವೀಕೆಂಡ್ ಶೋ ರದ್ದು ಮಾಡುವಂತೆ ಕಾಂಗ್ರೆಸ್ ಮನವಿ ಮಾಡಿದ್ದು, ಆಯೋಗಕ್ಕೆ ಈ ಕುರಿತು ದೂರು ನೀಡಲಾಗಿದೆ.

Ban weekend with Ramesh's this week episode: Congress leaders

ರಮೇಶ್ ಪ್ರತಿಕ್ರಿಯೆ
ಈ ಬಗ್ಗೆ ಒನ್ ಇಂಡಿಯಾ ಪ್ರತಿನಿಧಿಯೊಂದಿಗೆ ಮಾತನಾಡಿದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಿರೂಪಕ ರಮೇಶ್ ಅರವಿಂದ್, "ಮನವಿ ಚುನಾವಣಾ ಆಯೋಗದ ಮೆಟ್ಟಿಲೇರಿರುವುದರಿಂದ ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆಯೋಗದ ತೀರ್ಮಾನದ ನಂತರ ಜಗ್ಗೇಶ್ ಎಪಿಸೋಡ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.

English summary
One of the highest rating programmes in Kannada weekend with Ramesh is in controversy now. Some congress leaders demanded ban on this week episode, which will be telecasted on 1st and 2nd April in Zee Kannada Channel. BJP leader and actor Jaggesh will be the guest in that episode.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X