• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಕಳೆಗಟ್ಟಿದ 'ಬಹುರೂಪಿ' ನಾಟಕೋತ್ಸವದ ರಂಗು!

By ಯಶಸ್ವಿನಿ ಎಂ.ಕೆ
|

ಮೈಸೂರು, ಜನವರಿ 12 : ರಂಗಾಯಣದ ಆವರಣದಲ್ಲಿ ಬಹುರೂಪಿ ಅಂತರಾರಾಷ್ಟ್ರೀಯ ಬಹುಭಾಷಾ ನಾಟಕೋತ್ಸವಕ್ಕೆ ಸಿದ್ದತೆಗಳು ಪೂರ್ಣಗೊಂಡಿದ್ದು ಪ್ರದರ್ಶನಕ್ಕೆ ಮುದುವಣಗಿತ್ತಿಯಂತೆ ಸಜ್ಜಾಗಿದೆ. ನಾಳೆಯಿಂದ(ಜ 13) 18ರವರೆಗೆ 6 ದಿನಗಳ ಕಾಲ ನಡೆಯಲಿರುವ ನಾಟಕೋತ್ಸವಕ್ಕೆ ರಂಗಾಯಣ ಹಾಗು ಕಲಾಮಂದಿರದ ಸುತ್ತ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.[ಜ.13ರಿಂದ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವ]

ಬಹುರೂಪಿ ಹತ್ತಿರುವಾಗುತ್ತಿದ್ದಂತೆ ರಂಗಾಯಣದ ಆವರಣ ಸ್ವರೂಪವೇ ಬದಲಾಗಿ ವಿವಿಧ ಆಕ‍ರ್ಷಣೀಯ ಬಣ್ಣಗಳಿಂದ ಸಿಂಗಾರಗೊಂಡಿದೆ. ರಂಗಸಂಗೀತ, ದೇಶ, ವಿದೇಶದ ನಾಟಕಗಳು, ಚಲನಚಿತ್ರೋತ್ಸವ, ಬಿತ್ತಿ ಚಿತ್ರ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳು ಬಹುರೂಪಿಗೆ ಮೆರಗು ನೀಡಲಿವೆ.[ಮೈಸೂರು ಬಹುರೂಪಿ ರಂಗೋತ್ಸವಕ್ಕೆ ಓಂ ಪುರಿ ಬರಬೇಕಿತ್ತಾ?]

ನಾಟಕ ನಡೆಯುವ ಭೂಮಿಗೀತ, ವನರಂಗ, ಕಿರುರಂಗಮಂದಿರ ಹಾಗೂ ಕಲಾಮಂದಿರಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ. ಭೂಮಿಗೀತದಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 9 ರವರೆಗೂ ನಾಟಕಗಳ ತಾಲೀಮು ಶುರುವಿಟ್ಟುಕೊಂಡಿದೆ. ದೇಶವಿದೇಶಗಳಿಂದ ಬರುವ ಕಲಾವಿದರು ವಾಸ್ತವ್ಯ ಹೂಡಲು ಮುಕ್ತ ವಿವಿ, ಮೈಸೂರು ವಿವಿ ಅತಿಥಿ ಗೃಹ ಸೇರಿದಂತೆ ಹಲವು ಕಡೆ ಕೊಠಡಿಗಳನ್ನು ಕಾಯ್ದಿಸಲಾಗಿದೆ. ದಿನಕ್ಕೆ 150 ರಿಂದ 200 ಮಂದಿ ಕಲಾವಿದರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗಮನ ಸೆಳೆವ ಮಳಿಗೆಗಳು ಸಜ್ಜು

ಗಮನ ಸೆಳೆವ ಮಳಿಗೆಗಳು ಸಜ್ಜು

ಬಹುರೂಪಿ ನಾಟಕೋತ್ಸವದಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ ಸಾಹಿತ್ಯ ಹಾಗೂ ಭೋಜನ ಪ್ರಿಯರಿಗೂ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 60 ಮಳಿಗೆಗಳನ್ನು ಪ್ರತ್ಯೇಕವಾಗಿ ತೆರೆಯಲಾಗಿದೆ. ನಾಟಕ, ಜಾನಪದ ಹಾಡು ಕುಣಿತಗಳನ್ನು ನೋಡಿ ಆನಂದಿಸಿದವರಿಗೆ ಕಲಾಮಂದಿರದ ಬಿದಿರು ಮೆಳೆಯ ಸಮೀಪದಲ್ಲಿ ಬೇಕೆನಿಸುವಷ್ಟು ತಿನ್ನಲು ವಿಶೇಷ ಖಾದ್ಯಗಳನ್ನು ತಯಾರಿಸಲಾಗುವ ಕ್ಯಾಂಟಿನನ್ನು ತೆರೆಯಲಾಗಿದೆ. ಪುಸ್ತಕ, ಕಲಾಕೃತಿಗಳು, ಬಟ್ಟೆ ಅಂಗಡಿಗಳು, ಅಲಂಕಾರಿಕ ವಸ್ತುಗಳು ಹಾಗೂ ಸಾವಯವ ಪದಾರ್ಥಗಳ ಮಾರಾಟವನ್ನು ಮಾತ್ರ ರಂಗಾಯಣದ ಮುಂಭಾಗದಲ್ಲಿ ಆಯೋಜಿಸಲಾಗಿದೆ.

ನಾಟಕೋತ್ಸವದಲ್ಲಿ ಬಹುಭಾಷಾ ವಿಶೇಷ

ನಾಟಕೋತ್ಸವದಲ್ಲಿ ಬಹುಭಾಷಾ ವಿಶೇಷ

ಬಹುರೂಪಿ ಅಂತರಾಷ್ಟ್ರೀಯ ನಾಟಕೋತ್ಸವಕ್ಕೆ ತಕ್ಕಂತೆ ಈ ಬಾರಿ ರಾಜ್ಯ ಅಂತಾರಾಜ್ಯ ಹಾಗೂ ವಿದೇಶಿ ನಾಟಕಗಳ ಸದ್ದು ಮೇಳೈಸಲಿದೆ. ಲಂಡನ್, ಬಾಂಗ್ಲಾ, ಶ್ರೀಲಂಕಾ ಹಾಗೂ ಪೋಲೆಂಡ್ ಕಲಾವಚಿದರು ಸದ್ಯ ರಂಗಾಸಕ್ತರ ಗಮನ ಸೆಳೆಯಲು ಲಗ್ಗೆ ಇಡುತ್ತಿದ್ದಾರೆ. ದೇಶದ ಕೆಲವು ರಾಜ್ಯಗಳ ಹೆಸರಾಂತ ತಂಡಗಳು ಹಾಗೂ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಮುಂಬೈ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ರಿಸ್ಸಾ, ಸಿಕ್ಕಿಂ, ತಿರುವನಂತಪುರಂ, ಪಾಟ್ನಾ, ಕೇರಳ ಅಲ್ಲದೆ ಬೆಂಗಳೂರಿನ ತಂಡಗಳು, ರಂಗಾಯಣದ ಕಲಾವಿದರ ನಾಟಕಗಳು ಈ ಬಾರಿ ವಿಶೇಷವನ್ನು ಉಣಬಡಿಲಿದೆ.

ಪ್ರತಿದಿನವೂ ವಿಶೇಷ ನಾಟಕಗಳು

ಪ್ರತಿದಿನವೂ ವಿಶೇಷ ನಾಟಕಗಳು

ಜ.13ರ ನಾಳೆ ಚಿತ್ರಲೇಖೆ,

ಜ.14 ರಂದು ದಿ ಬಾಯ್ ಹು ಸ್ಟಾಪ್ಡ್ ಸ್ಲೈಲಿಂಗ್, ಮಧ್ಯಮ ವ್ಯಾಯೋಗಂ, ಸೆಕ್ಕುವಾ, ಹರಿಶ್ಚಂದ್ರ ಕಾವ್ಯ,

ಜ.15 ರಂದು ತುಮ್ಹಾರ ವಿನ್ಸೆಂಟ್, ಮಜ್ನು ಮ್ಯಾಡ್ ಇನ್ ಲವ್, ಅಬ್ ಔರ್ ನಹೀ, ಧಮ೵ಪುರಿಯ ದೇವದಾಸಿ,

ಜ.16 ರಂದು ಇಷ್ಕ್ ಮಲಂಗಿ, ಹರ್ ಸಿಂಗಾರ್, ಸಚ್ ಈಸ್ ಲೈಫ್

ಜ.17 ರಂದು ಘಿನುವ, ಚಂದ್ರ ಗಿರಿಯ ತೀರದಲ್ಲಿ ಅಮೀನ ಸುಂದೋರಿ,

ಜ.18 ರಂದು ರಸ್ತೆ ನಕ್ಷತ್ರಗಳು, ಚರಿತ್ರ ಪುಸ್ತಕತ್ತಿಲ್ಲೆಕ್ಕು ಒರೆಡು, ಬೀದಿಯೊಳಗಂದು ಮನೆಯ ಮಾಡಿ ಎಂಬ ನಾಟಕಗಳು ಒಂದೇ ಸೂರಿನಡಿ ಪ್ರದರ್ಶನವಾಗಲಿದೆ.

ಟಿಕೇಟ್ ಗಳಿಗಾಗಿ ಡಿಮ್ಯಾಂಡೋ ಡಿಮ್ಯಾಂಡು

ಟಿಕೇಟ್ ಗಳಿಗಾಗಿ ಡಿಮ್ಯಾಂಡೋ ಡಿಮ್ಯಾಂಡು

ಬಹುರೂಪಿ ನಾಟಕೋತ್ಸವದ ವಿವಿಧ ಪ್ರದರ್ಶನಗಳಿಗಾಗಿ ಟಿಕೆಟ್ ಖರೀದಿಗಾಗಿ ರಂಗಾಸಕ್ತರು ಮುಗಿಬಿದ್ದಿದ್ದಾರೆ. ಅಲ್ಲದೆ ಅಂತರ್ಜಾಲದಲ್ಲಿಯೂ ರಂಗಪ್ರೇಮಿಗಳು ಟಿಕೆಟ್ ಬುಕು ಮಾಡಿಕೊಳ್ಳುತ್ತಿದ್ದಾರೆ. ಇನ್ನು ಉದ್ಘಾಟನೆಯ ದಿನವಾದ ನಾಳೆ ಪ್ರದರ್ಶನಗೊಳ್ಳಲಿರುವ ಮೈಸೂರು ರಂಗಾಯಣದ ಚಿತ್ರಲೇಖೆ ನಾಟಕದ ಟಿಕೆಟ್ಗಳು ಮೊದಲನೆಯ ದಿನವೇ ಸೋಲ್ಡ್ ಓಟ್ ಆಗಿವೆ.

ಜನವರಿ 10ರಿಂದಲೇ ಟಿಕೆಟ್ ಮಾರಾಟ ಆರಂಭವಾಗಿದೆ. ಆನ್ಲೈನಲ್ಲಿ ಮೂಲಕವೂ ಖರೀದಿಸಬಹುದಾಗಿದ್ದು, ಈಗಾಗಲೇ 6 ದಿನ ನಡೆಯುವ ನಾಟಕಗಳ ಶೇ.50ರಷ್ಟು ಮಾರಾಟವಾಗಿರುವುದು ಈ ಬಾರಿಯ ವಿಶೇಷ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
International multilingual Bhahurupi drama Festival prepared to complete premises in Rangayana in mysuru. Tomorrow(Jan 13) the demonstration will start.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more