ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಳಿ ಮರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ವಿವಿಧ ಸಂಘಟನೆಗಳು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮಾರ್ಚ್ 2: ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆಗೆ ಸರ್ಕಾರ, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರೂ ಶ್ರಮಿಸುತ್ತಿದ್ದಾರೆ. ಪರಿಸರ ಉಳಿಸುವ ಆಂದೋಲನಕ್ಕಾಗಿಯೇ ಸರ್ಕಾರ ವಾರ್ಷಿಕ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳುಮರಗಳನ್ನು ಕಡಿಯಬೇಡಿ, ಸಸಿಗಳನ್ನು ನೆಡಿ' ಎಂಬ ಜಾಗೃತಿ ಕಾರ್ಯಕ್ರಮಕ್ಕೆ ಕೋಟ್ಯಾಂತರ ರುಪಾಯಿ ವೆಚ್ಚ ಮಾಡುತ್ತಿದೆ. ಈ ನಡುವೆ ಅಲ್ಲಲ್ಲಿ ಸರ್ಕಾರದ ಅಧಿಕಾರಿಗಳು ಮತ್ತು ಜನರೇ ಮರಗಳನ್ನು ಕಡಿದಿರುವ ಪ್ರಕರಣಗಳೂ ವರದಿ ಆಗುತ್ತಿವೆ.

ಮೈಸೂರು: ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪಿಸಲು ಸಿಎಂಗೆ ಮನವಿಮೈಸೂರು: ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಸ್ಥಾಪಿಸಲು ಸಿಎಂಗೆ ಮನವಿ

ಮೈಸೂರು ನಗರದ ಶ್ರೀರಾಂಪುರದ ಬೆಮೆಲ್ ಲೇಔಟ್‌ನ ಗಣಪತಿ ದೇವಾಲಯದ ಬಳಿ ಬೃಹತ್ ಅರಳಿ ಮರವೊಂದನ್ನು ಎರಡು ದಿನಗಳ ಹಿಂದೆ ಕಡಿದು ಹಾಕಲಾಗಿದೆ. ಈ ಕುರಿತು ಮಾತನಾಡಿದ ಪರಿಸರವಾದಿ, ಸ್ಥಳೀಯರಾದ ಭಾಮಿ ಶೆಣೈ ಅವರು, ""ಅರಣ್ಯ ಇಲಾಖೆಯೇ ಹಿಂದೆ ಮುಂದೆ ನೋಡದೆ ಮರ ಕಡಿಯಲು ಅನುಮತಿ ನೀಡಿದೆ'' ಎಂದು ಆರೋಪಿಸಿದರು.

Mysuru: Awareness programme By Various Organizations To Avoid Tree Cutting

"ಸುಮಾರು 35 ವರ್ಷಗಳ ಬೃಹತ್‌ ಮರ ಇಷ್ಟು ವರ್ಷ ಗಾಳಿ, ನೆರಳು ನೀಡುತ್ತಿತ್ತು. ಆದರೆ ಎದುರು ಮನೆಯವರು ಬೇರು ಬರುತ್ತದೆ ಎಂದು ಹೇಳಿ ಕಡಿಸಿ ಹಾಕಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು, ಇಲಾಖೆ ಅನುಮತಿ ಕೊಟ್ಟಿದ್ದೇ ತಪ್ಪು'' ಎಂದರು.

Mysuru: Awareness programme By Various Organizations To Avoid Tree Cutting

"ಮರ ಕಡಿದಿರುವುದನ್ನು ಖಂಡಿಸಿ ಇಂದು ಕದಂಬ ಸೇನೆ, ಪರಿಸರ ಹಿತರಕ್ಷಣಾ ವೇದಿಕೆ, ಕನ್ನಡ ಸ್ವಾಭಿಮಾನ ಬಳಗದವರು ಶ್ರದ್ಧಾಂಜಲಿ ಸಲ್ಲಿಸಿ ಮರಗಳನ್ನು ಕಡಿಯದಂತೆ ಮನವಿ ಮಾಡಿದರು. ಇದಲ್ಲದೆ ಬೆಮೆಲ್ ಲೇಔಟಿನಲ್ಲಿ ಮನೆಗಳ ಮುಂದೆ ಬೆಳೆದಿದ್ದ 4-5 ಮರಗಳನ್ನೂ ಕಡಿದಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ'' ಸರ್ಕಾರ ಮತ್ತು ಅರಣ್ಯ ಇಲಾಖೆಯನ್ನು ಒತ್ತಾಯಿಸಿದರು.

English summary
Local resident Bhami Shenoy alleged that the forest department had given permission to cut down trees in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X