ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಸತ್ತ ಕೋತಿಯ ತಿಥಿ ಮಾಡಿದ ಆಟೋ ಚಾಲಕರು

|
Google Oneindia Kannada News

ಮೈಸೂರು, ಜನವರಿ 18: ಸತ್ತವರಿಗೆ ತಿಥಿ ಮಾಡುವುದೇ ಈಗಿನ ಕಾಲದಲ್ಲಿ ಕಡಿಮೆಯಾಗಿದೆ. ಅಂತಹುದರಲ್ಲಿ ಸತ್ತ ಕೋತಿಗೆ ತಿಥಿ ಮಾಡುತ್ತಾರಾ ಎಂದು ಕೇಳುತ್ತೀರಾ? ಹೌದು, ನಗರದಲ್ಲಿ ಇತ್ತೀಚೆಗೆ ಮೃತಪಟ್ಟಿದ್ದ ಕೋತಿಗೆ ಆಟೋ ಚಾಲಕರೇ ಮುಂದೆ ನಿಂತು ತಿಥಿ ಕಾರ್ಯ ನೆರವೇರಿಸಿದ ಘಟನೆ ನಡೆದಿದೆ.

ಅಹ್ಮದಾಬಾದಿನಲ್ಲೊಬ್ಬ ಕೋತಿ ಪ್ರೇಮಿಯ ಮಾನವೀಯ ಸಂವೇದನೆಯ ಕತೆಅಹ್ಮದಾಬಾದಿನಲ್ಲೊಬ್ಬ ಕೋತಿ ಪ್ರೇಮಿಯ ಮಾನವೀಯ ಸಂವೇದನೆಯ ಕತೆ

ಕೆಲವು ದಿನಗಳ ಹಿಂದೆಯಷ್ಟೇ ಆಕಸ್ಮಿಕವಾಗಿ ಕೋತಿಯೊಂದು ವಯೋಸಹಜ ಖಾಯಿಲೆಯಿಂದ ಸಾವನ್ನಪ್ಪಿತ್ತು. ಆಗ ಸತ್ತ ಕೋತಿಗೆ ಮೈಸೂರಿನ ಗನ್ ಹೌಸ್ ಬಳಿಯ ಆಟೋ ಚಾಲಕರು ತಮ್ಮ ಆಟೋ ಸ್ಟಾಂಡ್ ನಲ್ಲಿ ಗುಂಡಿತೋಡಿ ಅಂತ್ಯಸಂಸ್ಕಾರ ಮಾಡಿದ್ದರು.

 ನರಳಾಡುತ್ತಿದ್ದ ಕೋತಿಗೆ ನೆರವಾಗಿ, ಆಸರೆಯಾದ ಪೊಲೀಸ್ ಅಧಿಕಾರಿ! ನರಳಾಡುತ್ತಿದ್ದ ಕೋತಿಗೆ ನೆರವಾಗಿ, ಆಸರೆಯಾದ ಪೊಲೀಸ್ ಅಧಿಕಾರಿ!

ಕೋತಿ ಮೃತಪಟ್ಟು 11 ದಿನವಾದ್ದರಿಂದ ತಿಥಿ ಹಾಗೂ ಹಾಲು ತುಪ್ಪ ಕಾರ್ಯವನ್ನು ಧಾರ್ಮಿಕ ವಿಧಿ -ವಿಧಾನದಂತೆಯೇ ನೆರವೇರಿಸಿದರು.

Auto drivers made death rituals of monkey in Mysuru

ಅಲ್ಲದೇ ತಿಥಿ ಕಾರ್ಯ ನಡೆಸುವ ವೇಳೆ ಕೋತಿಗೆ ಇಷ್ಟವಾದ ಬಾಳೆ ಹಣ್ಣು, ಕಾಯಿ, ಇನ್ನಿತರ ತಿಂಡಿ ಪದಾರ್ಥಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ತಿಥಿ ಆಚರಿಸುವ ಮೂಲಕ ಆಟೋ ಚಾಲಕರು ಮಾನವೀಯತೆ ಮೆರೆದಿದ್ದು ವಿಶೇಷ. ಈ ಕುರಿತಾಗಿ ಮಾತನಾಡಿದ ಅವರು, ಕೋತಿ ಕೂಡ ಮನುಷ್ಯರಂತೆ. ಅದಕ್ಕೂ ಕೂಡ ಪ್ರೀತಿ ತೋರಬೇಕು. ಹಾಗಾಗಿ ತಿಥಿ ಕಾರ್ಯ ಮಾಡುತ್ತಿದ್ದೇವೆ. ಈ ಕೋತಿ ನಮ್ಮೊಟ್ಟಿಗೆ ಆತ್ಮೀಯವಾಗಿತ್ತು ಎಂದು ನೆನೆಸಿಕೊಂಡರು.

English summary
Auto drivers made death rituals of monkey in Mysuru.This monkey died a few days ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X