ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಗಜಪಡೆಯ ಆಗಮನಕ್ಕೆ ದಿನಾಂಕ ನಿಗದಿ

|
Google Oneindia Kannada News

ಮೈಸೂರು, ಆಗಸ್ಟ್ 15: ಮೈಸೂರಿನ ಪರಂಪರೆ ಹಾಗೂ ಸಂಸ್ಕೃತಿ, ಇತಿಹಾಸವನ್ನು ಬಿಂಬಿಸುವ ವಿಶ್ವವಿಖ್ಯಾತ ದಸರಾ ಮಹೋತ್ಸವದ ಆಕರ್ಷಣೆ ಜಂಬೂಸವಾರಿ. ಇಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗೆ ತನ್ನದೇ ಇತಿಹಾಸವಿದೆ. ಈ ಆನೆಗಳೇ ದಸರಾದ ಕೇಂದ್ರಬಿಂದು.

ದಸರಾ ಉದ್ಘಾಟನೆಗೆ ಆರಿಸಿದ್ದು ಖುಷಿ ತಂದಿದೆ: ಸಾಹಿತಿ ಎಸ್.ಎಲ್. ಭೈರಪ್ಪ
ದಸರಾಕ್ಕೆ ಮುನ್ನುಡಿ ಎಂಬಂತೆ ಆರಂಭವಾಗಿರುವ ಮೊದಲ ತಂಡದ ಗಜಪಡೆಯನ್ನು ಕರೆತರಲು ಆಗಸ್ಟ್ 22ಕ್ಕೆ ದಿನಾಂಕ ನಿಗದಿಪಡಿಸಲಾಗಿದೆ.

ಆ.22ರಂದು ಬೆಳಗ್ಗೆ 10.30ಕ್ಕೆ ಹುಣಸೂರಿನ ವೀರನ ಹೊಸಹಳ್ಳಿ ಗೇಟ್ ಬಳಿ ಗಜಪಡೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಈ ಬಾರಿ ಹೆಚ್ಚುವರಿಯಾಗಿ ಎರಡು ಆನೆ ಸೇರ್ಪಡೆಯಾಗಿ 14 ಆನೆಗಳು ದಸರಾದಲ್ಲಿ ಪಾಲ್ಗೊಳ್ಳಲಿವೆ. ಗಜಪಡೆಯು ಎರಡು ಹಂತಗಳಲ್ಲಿ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಅರಣ್ಯ ಇಲಾಖೆ ಸಹ ದಸರಾ ಮೆರವಣಿಗೆಗೆ ಅಣಿಗೊಳಿಸಲು ಸದ್ದಿಲ್ಲದೆ ಪೂರ್ವತಯಾರಿ ಮಾಡಿಕೊಂಡಿದೆ.

August 22nd fist batch of Dassara Gajapade will come Mysuru

ನವರಾತ್ರಿ ಆರಂಭಕ್ಕೆ 38 ದಿನವಷ್ಟೇ ಬಾಕಿಯಿದೆ. ಜಂಬೂ ಸವಾರಿಗೆ 47 ದಿನ ಬಾಕಿ ಇದೆ. ದಸರಾ ಗಜಪಡೆಯ ಮೊದಲ ತಂಡವನ್ನು ಬರಮಾಡಿಕೊಳ್ಳಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಪ್ರತಿವರ್ಷ ಜಂಬೂ ಸವಾರಿಗೆ 2 ತಿಂಗಳ ಮುಂಚಿತವಾಗಿ ಗಜಪಡೆಯನ್ನು ಕರೆತರುವ ವಾಡಿಕೆ ಇತ್ತು. ಆದರೆ ಹಲವು ಸಮಸ್ಯೆಗಳ ನಡುವೆಯೇ ಗಜಪಯಣಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಅಂದು ಸಲ್ಲುವ ಶುಭ ಅಮೃತ ಲಗ್ನದಲ್ಲಿ ಜಿಲ್ಲಾಡಳಿತದ ವತಿಯಿಂದ ಪೂಜೆ ಸಲ್ಲಿಸಿದ ಬಳಿಕ ಗಜಪಯಣ ಆರಂಭವಾಗಲಿದೆ.

ಈ ಬಾರಿ ಸಾಹಿತಿ ಎಸ್ ಎಲ್ ಭೈರಪ್ಪ ಅವರಿಂದ ದಸರಾ ಉದ್ಘಾಟನೆ
ಮೊದಲ ಹಂತದಲ್ಲಿ ಆರು ಆನೆಗಳು ಬರಬಹುದೆಂಬ ನಿರೀಕ್ಷೆಯಿದೆ. ನಂತರ ಸೆಪ್ಟೆಂಬರ್ ಮೊದಲ ವಾರದ ಬಳಿಕ ಎರಡನೇ ಹಂತದ ಆನೆಗಳು ಮೈಸೂರಿಗೆ ಬರಲಿವೆ. ಈ ಆನೆಗಳಿಗೆ ಮೈಸೂರು ಅರಮನೆಯ ಬಳಿ ವಿಶೇಷವಾಗಿ ತರಬೇತಿಯನ್ನು ಸಹ ನೀಡಲಾಗುತ್ತದೆ.
ಸಂಪುಟ ವಿಸ್ತರಣೆಯಾಗದ ಹಿನ್ನೆಲೆ ದಸರಾ ಆಚರಣೆಯಲ್ಲಿ ಕೆಲ ಗೊಂದಲವಿದೆ.

August 22nd fist batch of Dassara Gajapade will come Mysuru

ಈ ಸಮಸ್ಯೆ ಬಗೆಹರಿದರೆ ದಸರಾ ಉಪಸಮಿತಿಗಳ ಆಯ್ಕೆಯಲ್ಲಿ ಗೊಂದಲವಾಗದು. ಪ್ರತಿ ಬಾರಿಯೂ ದಸರೆಗೆ 16 ಉಪ ಸಮಿತಿ ರಚಿಸಲಾಗುತ್ತದೆ. ಸ್ವಾಗತ, ಮೆರವಣಿಗೆ, ಪಂಜಿನ ಕವಾಯತು, ರೈತ, ಚಲನಚಿತ್ರ, ಯುವ, ಮಹಿಳಾ, ಕವಿಗೋಷ್ಠಿ, ಆಹಾರ, ಕುಸ್ತಿ ಹೀಗೆ ವಿವಿಧ ಸಮಿತಿಗಳಿರುತ್ತವೆ. ಇವೆಲ್ಲಕ್ಕೂ ಉಸ್ತುವರಿ ಸಚಿವರ ಆದ್ಯತೆಯನ್ನು ಪರಿಗಣಿಸಲಾಗುತ್ತಿತ್ತು. ಆದರೆ ಈ ಬಾರಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ.

English summary
Mysuru Dassara Gajapade will come to Mysuru at August 22nd. District administration are getting ready for welcome Elephant team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X