ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 20 ಲಕ್ಷ ದೇಣಿಗೆ ನೀಡಿದ ಎಟಿ&ಎಸ್

|
Google Oneindia Kannada News

ಮೈಸೂರು, ಏಪ್ರಿಲ್ 22: ನಂಜನಗೂಡಿನಲ್ಲಿರುವ ಎಟಿ&ಎಸ್ ಇಂಡಿಯಾ ಸಂಸ್ಥೆಯು ರಾಜ್ಯದಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ವಿವಿಧ ಸ್ತರಗಳಲ್ಲಿ ಪಾಲ್ಗೊಳ್ಳುತ್ತಿದ್ದು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಪರಿಹಾರ ನಿಧಿಗೆ 20 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದೆ.

ನಂಜನಗೂಡಿನಲ್ಲಿರುವ ಎಟಿ&ಎಸ್ ಇಂಡಿಯಾ ಸಂಸ್ಥೆಯು ಉತ್ತಮ ಗುಣಮಟ್ಟದ ಪ್ರಿಂಟೆಡ್ ಸಕ್ರ್ಯೂಟ್ ಬೋರ್ಡ್‍ಗಳು ಹಾಗೂ ಇಂಟರ್ ಕನೆಕ್ಟ್ ಸಬ್‍ಸ್ಟ್ರೇಟ್ಸ್‍ಗಳ ತಯಾರಿ ಹಾಗೂ ವಿತರಣೆಯಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು ಪ್ರಸ್ತುತ ತುರ್ತು ನಿರ್ವಹಣೆಗಾಗಿ 15 ಸಾವಿರ ಪಿಸಿಬಿಗಳ ಪೂರೈಕೆಗಾಗಿ ಕರ್ನಾಟಕ ರಾಜ್ಯ ಸರಕಾರದಿಂದ ಕಾರ್ಯಾದೇಶವನ್ನು ಪಡೆದುಕೊಂಡಿದೆ. ಈ ಮೂಲಕ ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದೆ.

ಎಟಿ&ಎಸ್ ಇಂಡಿಯಾವು ದೇಶವ್ಯಾಪಿ ಲಾಕ್‍ಡೌನ್ ಸಂದರ್ಭದಲ್ಲಿ ತುರ್ತು ಆರೋಗ್ಯ ಸಂಬಂಧಿ ಯೋಜನೆಗಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಏಕೈಕ ಪಿಸಿಬಿ ತಯಾರಿಕಾ ಕಂಪೆನಿಯಾಗಿದೆ. ಈ ವೆಂಟಿಲೇಟರ್‍ಗಳು ಕೇಂದ್ರ ಸರಕಾರದ ನೇತೃತ್ವದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಗಳ ಒಗ್ಗೂಡುವಿಕೆಯಿಂದ ಕರ್ನಾಟಕ ರಾಜ್ಯದಲ್ಲಿ ತಯಾರಾಗುತ್ತಿವೆ.

AT&S India donates Rs20 Lakh Karnataka CM’s Relief Fund to combat Covid-19

ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಸುಮಾರು 1250 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಅವರಲ್ಲಿ ಶೇ. 98ರಷ್ಟು ಮಂದಿ ಕರ್ನಾಟಕ ರಾಜ್ಯದವರೇ ಆಗಿರುತ್ತಾರೆ. ಸಂಸ್ಥೆಯು 1999ರಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ಯುರೋಪ್, ಯುಎಸ್‍ಎ ಹಾಗೂ ಏಷಿಯಾ ಪೆಸಿಫಿಕ್ ಭಾಗಗಳಲ್ಲಿ ಹರಡಿರುವ ವಿಶ್ವದ ಪ್ರತಿಷ್ಠಿತ ಗ್ರಾಹಕರಿಗಾಗಿ ಭಾರತದಲ್ಲೇ ತನ್ನ ಉತ್ಪನ್ನಗಳನ್ನು ತಯಾರಿಸಿ ಪೂರೈಕೆ ಮಾಡುತ್ತಿದೆ.

English summary
AT&S India a contributed of Rs20 Lakh Karnataka CM’s Relief Fund to combat to Covid-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X