ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಬಳಿ ಇರುವ ಒಟ್ಟು ಆಸ್ತಿ ಮೌಲ್ಯವೆಷ್ಟು?

|
Google Oneindia Kannada News

Recommended Video

Lok Sabha Election 2019:ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಬಳಿ ಇರುವ ಒಟ್ಟು ಆಸ್ತಿ ಮೌಲ್ಯವೆಷ್ಟು

ಮೈಸೂರು, ಮಾರ್ಚ್ 26:ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರತಾಪ್ ಸಿಂಹ ಅವರು ಆಸ್ತಿ ವಿವರಗಳನ್ನು ಘೋಷಿಸಿದ್ದು, ಕಾರು, ಚಿನ್ನಾಭರಣ ಸೇರಿ ಒಟ್ಟು ಚರಾಸ್ತಿ ಮೌಲ್ಯ 11,09,697 ಲಕ್ಷ ರೂ. ಹಾಗೂ ಅವರ ಪತ್ನಿ ಅರ್ಪಿತಾ ಹೆಸರಿನಲ್ಲಿ 40,32,435 ಲಕ್ಷ ರೂ.ಘೋಷಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸ್ಥಿರಾಸ್ತಿಯಾಗಿ ಮನೆ ಸೇರಿದಂತೆ ಪ್ರತಾಪ್ ಸಿಂಹ ಅವರ ಹೆಸರಿನಲ್ಲಿ 52.05ಲಕ್ಷ ರೂ. ಮೌಲ್ಯ ಹಾಗೂ ಅರ್ಪಿತಾ ಅವರ ಹೆಸರಿನಲ್ಲಿ 81.50 ಲಕ್ಷ ರೂ.ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಅವರ ಬಳಿ ಈಗ 28 ಸಾವಿರ ನಗದು ಮಾತ್ರವಿದ್ದು, ಅವರ ಪತ್ನಿ ಅರ್ಪಿತಾ ಅವರ ಬಳಿ 25 ಸಾವಿರ ರೂ.ನಗದು ಹಣವಿರುವ ಬಗ್ಗೆ ಪ್ರಮಾಣಪತ್ರ ನೀಡಿದ್ದಾರೆ.

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು? ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?

ಪ್ರತಾಪ್ ಸಿಂಹ ಹೆಸರಿನಲ್ಲಿ 3, 25,540 ರೂ.ಮೌಲ್ಯದ ಹುಂಡೈ ಕಾರು, ಪತ್ನಿ ಹೆಸರಿನಲ್ಲಿ 24,66,995 ಲಕ್ಷ ರೂ.ಮೌಲ್ಯದ ಇನೊವಾ ಕ್ರಿಸ್ಟಾ ಕಾರು, ಅರ್ಪಿತಾ ಅವರ ಹೆಸರಿನಲ್ಲಿ 15 ಲಕ್ಷ ರೂ, ಮೌಲ್ಯದ ಚಿನ್ನಾಭರಣ, ವಿಜಯನಗರದಲ್ಲಿ 81.50 ಲಕ್ಷ ರೂ ಮೌಲ್ಯದ 2400 ಅಡಿ ನಿವೇಶನ, ಪ್ರತಾಪ್ ಸಿಂಹ ಅವರು ಬೆಂಗಳೂರಿನಲ್ಲಿ 52 ಲಕ್ಷ ರೂ.ಮೌಲ್ಯದ 1500 ಅಡಿ ನಿವೇಶನ ಹಾಗೂ ಸೋಮವಾರಪೇಟೆಯಲ್ಲಿ ಮನೆ ಹೊಂದಿರುವ ಬಗ್ಗೆ ಘೋಷಿಸಿಕೊಂಡಿದ್ದಾರೆ.

Asset and liability details of Mysuru-Kodagu BJP candidate Pratap Simha

ಉಳಿದಂತೆ ಪ್ರತಾಪ್ ಸಿಂಹ ಅವರು 2700ಷೇರುಗಳನ್ನು ಹೊಂದಿದ್ದು, ಜೀವ ವಿಮೆಗಾಗಿ 94 ಸಾವಿರ ರೂ.ಪಾವತಿ ಮಾಡಿದ್ದಾರೆ. 23.64 ಲಕ್ಷ ರೂ. ಸಾಲ ಹೊಂದಿರುವ ಅವರು ಪತ್ನಿಗೆ 2.27 ಲಕ್ಷ ರೂ.ಸಾಲವನ್ನಾಗಿ ನೀಡಿದ್ದಾರೆ.

ಹಾಸನ : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರಹಾಸನ : ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಸ್ತಿ, ಸಾಲ ವಿವರ

ಪ್ರತಾಪ್ ಸಿಂಹ ಅವರು ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಯಲ್ಲಿ ಚಿನ್ನಾಭರಣಗಳ ಮೇಲಿನ ಸಾಲವಾಗಿ 3.53ಲಕ್ಷ ರೂ.ಹಾಗೂ ಖಾಸಗಿ ವ್ಯಕ್ತಿಯಿಂದ 16.56ಲಕ್ಷ ರೂ. ಸಾಲ ಪಡೆದಿದ್ದಾರೆ. ಅರ್ಪಿತಾ ಅವರು 2.35 ಲಕ್ಷ ರೂ.ಚಿನ್ನಾಭರಣ ಮೇಲಿನ ಸಾಲ ಹಾಗೂ ಕಾರಿನ ಮೇಲೆ 14.62 ಲಕ್ಷ ರೂ.ಸಾಲ ಹೊಂದಿರುವುದಾಗಿ ಪ್ರಮಾಣಪತ್ರ ನೀಡಿದ್ದಾರೆ.

English summary
BJP candidate Pratap Simha contesting from Mysuru Lok Sabha constituency. He declared his Asset and liability details. Here's a detailed report about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X