ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾವೇರಿ ಸಂಗಮದಲ್ಲಿ ಸಿಂಘಾಲ್ ಅಸ್ಥಿ ವಿಸರ್ಜನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 30 : ಇತ್ತೀಚೆಗೆ ನಿಧನರಾದ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಭಾನುವಾರ ವಿಸರ್ಜಿಸಲಾಗಿದೆ. ಸಿಂಘಾಲ್ ಅವರ ಮರಣದಿಂದಾಗಿ ಹಿಂದೂ ರಾಷ್ಟ್ರ ಬಡವಾದಂತೆ ಕಾಣುತ್ತಿದೆ ಎಂದು ವಿಎಚ್‌ಪಿ ನಾಯಕರು ಈ ಸಂದರ್ಭದಲ್ಲಿ ಹೇಳಿದರು.

ವಿಎಚ್‍ಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಅವರು ತಂದಿದ್ದ ಸಿಂಘಾಲ್ ಅವರ ಅಸ್ಥಿ ಇದ್ದ ಮಡಿಕೆಗೆ ಭಾನುಪ್ರಕಾಶ್ ಶರ್ಮ ಅವರು ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜೆ ನೆರವೇರಿಸಿದರು. ನಂತರ ಕಾವೇರಿ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಯಿತು. [ಅಶೋಕ್ ಸಿಂಘಾಲ್ ಇನ್ನಿಲ್ಲ]

Srirangapatna

ಜ್ಯೋತಿಷಿ ಡಾ. ಭಾನುಪ್ರಕಾಶ್ ಶರ್ಮ ಅವರು ಅಸ್ಥಿ ವಿಸರ್ಜನೆಯ ಕಾರ್ಯವನ್ನು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು. ವಿಶ್ವ ಹಿಂದೂ ಪರಿಷತ್‍ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಸೇರಿದಂತೆ ಹಲವಾರು ನಾಯಕರು ಈ ಸಂರ್ಭದಲ್ಲಿ ಉಪಸ್ಥಿತರಿದ್ದರು. [ಅಶೋಕ್ ಸಿಂಘಾಲ್ : ಹಿಂದೂತ್ವ ಯೋಧ ಎಂದ ಟ್ವೀಟ್ ಲೋಕ]

ಅಸ್ಥಿ ವಿಸರ್ಜನೆ ಮಾಡಿದ ಬಳಿಕ ಮಾತನಾಡಿದ ರಾಜೇಂದ್ರ ಅವರು, 'ಹಿಂದುತ್ವವನ್ನು ಕಾಪಾಡುವ ದೂರದೃಷ್ಟಿ ಸಿಂಘಾಲ್ ಅವರಲ್ಲಿ ಹೆಚ್ಚಾಗಿತ್ತು. ರಾಮಮಂದಿರ ಸಂಸ್ಥಾಪನೆ ಮಾಡಲು ಹಲವು ಹೋರಾಟ ಮಾಡಿ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಅವರ ಮರಣದಿಂದ ಹಿಂದೂ ರಾಷ್ಟ್ರ ಬಡವಾದಂತೆ ಕಾಣುತ್ತಿದೆ' ಎಂದು ಹೇಳಿದರು.

vishwa hindu parishad

ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು : ಅಶೋಕ್ ಸಿಂಘಾಲ್ (89) ಅವರು ನವೆಂಬರ್ 17ರಂದು ಗುರ್ ಗಾಂವ್‌ನ ಮೇಧಾಂತ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕೆಲವು ತಿಂಗಳುಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.

ashok singhal
English summary
Karnataka unit Vishwa Hindu Parishat (VHP) leaders immersed VHP chief Ashok Singhal ashes at Cauvery sangama in Srirangapatna (Paschimavahini), Mandya district on Sunday, November 29th, 2015. Singhal passed away on November 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X