ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಉಘೆ –ಉಘೆ ಎಂಬ ಝೇಂಕಾರ

By Yashaswini
|
Google Oneindia Kannada News

Recommended Video

Chamundi Temple, Mysore : ತಾಯಿ ಚಾಮುಂಡೇಶ್ವರಿಗೆ ಆಷಾಡ ಶುಕ್ರವಾರ ಹಾಗು ವರ್ಧಂತಿ ವಿಶೇಷ ಪೂಜೆ

ಮೈಸೂರು, ಆಗಸ್ಟ್ 3 : ಇಂದು ಮೂರನೇ ಆಷಾಢ ಶುಕ್ರವಾರ ಹಿನ್ನೆಲೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಮೊದಲ ಆ‍ಷಾಢ ಶುಕ್ರವಾರ:ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆಮೊದಲ ಆ‍ಷಾಢ ಶುಕ್ರವಾರ:ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ

ಮುಂಜಾನೆಯಿಂದಲೇ ವಿಶೇಷ ಪೂಜೆ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಇತ್ತ ವಿವಿಧ ಬಗೆಯ ಹೂವುಗಳಿಂದ ನಾಡ ಅಧಿದೇವತೆ ಚಾಮುಂಡಿ ಕಂಗೊಳಿಸುತ್ತುದ್ದಾಳೆ. ಬೆಂಗಳೂರಿನ ಎಸ್ ಎಫ್ ಎಸ್ ಸತ್ಯನಾರಾಯಣ ಫ್ಲವರ್ ಡೆಕೋರೇಟರ್ ವತಿಯಿಂದ ತಾಯಿಗೆ ಹೂವಿನ ಅಲಂಕಾರ ಸೇವೆ ನಡೆದಿದೆ.. ಇನ್ನು ಬೆಟ್ಟಕ್ಕೆ ಖಾಸಗಿ ವಾಹನಗಳ ನಿರ್ಬಂಧ ಹೇರಲಾಗಿದ್ದು, ಸುಗಮ ಸಂಚಾರಕ್ಕೆ ಭಕ್ತಾಧಿಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನು ಲಲಿತಮಹಲ್ ಹೆಲಿಪ್ಯಾಡ್ ನಿಂದ ಮಾಡಲಾಗಿದೆ.

Ashada shukravara puja in Mysuru Chamundeshwari temple

ದೇವಸ್ಥಾನಕ್ಕೆ ಬಂದಂತಹ ಭಕ್ತಾಧಿಗಳಿಗೆ ಸೇವಾ ಸಂಸ್ಥೆಗಳಿಂದ ಉಚಿತ ಊಟದ ವ್ಯವಸ್ಥೆಯನ್ನು ಸಹ ಹಮ್ಮಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿದೆ.

Ashada shukravara puja in Mysuru Chamundeshwari temple

ಈ ಬಾರಿ ಮೂರನೇ ಆಷಾಢ ಶುಕ್ರವಾರದ ಜೊತೆಗೆ ವರ್ಧಂತಿ ಒಟ್ಟಿಗೆ ಬಂದಿರೋದು ವಿಶೇಷವಾಗಿದ್ದು, ಸದ್ಯ ಮಹಾಮಂಗಳಾರತಿ ನೆರವೇರಿದೆ. 10:30 ಕ್ಕೆ ಜರುಗುವ ಚಿನ್ನದ ಪಲ್ಲಕ್ಕಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಾತುರದಿಂದ ಕಾದು ಕುಳಿತಿದ್ದಾರೆ.

English summary
Thousands of devotees from across the state thronged chamundi hill on first shada friday this morning to offer puja to Goddess Chamundeshwari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X