ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ಆಷಾಢ ಶುಕ್ರವಾರ: ಚಾಮುಂಡಿ ತಾಯಿಯ ದರ್ಶನಕ್ಕೆ ಭಕ್ತಸಾಗರ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 1: ಆಷಾಢ ಮಾಸದ ಮೊದಲ ಶುಕ್ರವಾರ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಮಾಡಿದರು.

ಶುಕ್ರವಾರ ಮುಂಜಾನೆ 3.30ಕ್ಕೆ ದೇವಸ್ಥಾನದಲ್ಲಿ ಆಷಾಢಮಾಸದ ಪ್ರಯುಕ್ತ ವಿಶೇಷ ಪೂಜೆ ಆರಂಭವಾಯಯಿತು. ಮಹಾನ್ಯಾಸಕ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಲಕ್ಷ್ಮೀ ಅಲಂಕಾರದ ಮೂಲಕ ಚಾಮುಂಡೇಶ್ವರಿ ದೇವಿಯನ್ನು ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡ ಸಿಂಗರಿಸಿದ್ದರು. ಬಳಿಕ 5.30ರಿಂದ ರಾತ್ರಿ 9.30 ರವರೆಗೂ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು.

ಮೈಸೂರಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಮಾತನಾಡಿದ ಉಮೇಶ್ ಕತ್ತಿ!ಮೈಸೂರಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಮಾತನಾಡಿದ ಉಮೇಶ್ ಕತ್ತಿ!

ತಿರುಪತಿ ಮಾದರಿಯಲ್ಲಿ ಭಕ್ತರಿಗೆ ಚಾಮುಂಡೇಶ್ವರಿ ದೇವಿ ದರ್ಶನ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ದೇವಿ ದರ್ಶನ ಮಾಡಿ ಪುಳಕಿತರಾಗುತ್ತಿದ್ದ ಭಕ್ತಾದಿಗಳಿಗೆ ಕಳೆದ ಎರಡು ವರ್ಷಗಳಿಂದ ಅದು ಸಾಧ್ಯವಾಗಿರಲಿಲ್ಲ. ಕೋವಿಡ್ ಕಾರಣದಿಂದ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಬಾರಿ ಕೋವಿಡ್ ಕಾರ್ಮೋಡ ಸರಿದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು.

ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಮಾರ್ಗಸೂಚಿಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶನಕ್ಕೆ ಮಾರ್ಗಸೂಚಿ

 20 ಎಲ್‌ಇಡಿ ಟಿವಿ ಅಳವಡಿಕೆ

20 ಎಲ್‌ಇಡಿ ಟಿವಿ ಅಳವಡಿಕೆ

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂರು ಸರತಿ ಸಾಲಿನಲ್ಲಿ ಪ್ರವೇಶ ಕಲ್ಪಿಸಲಾಗುತ್ತಿದೆ. 300 ರೂ., 50 ರೂ. ಮತ್ತು ಧರ್ಮ ದರ್ಶನದ ಮೂರು ಸಾಲುಗಳನ್ನು ಮಾಡಲಾಗಿದ್ದು, ದಕ್ಷಿಣ ಮತ್ತು ಉತ್ತರ ಭಾಗದಿಂದ ಪ್ರವೇಶ ಮಾಡಬಹುದಾಗಿದೆ. ಚಾಮುಂಡೇಶ್ವರಿ ಭಕ್ತಿ ಗೀತೆಗಳೊಂದಿಗೆ ದೇವಿಯ ಉತ್ಸವ, ಮೆರವಣಿಗೆ, ಪೂಜಾ ಕಾರ್ಯಕ್ರಮಗಳನ್ನು ಹೊರಗಿನಿಂದ ಭಕ್ತರು ವೀಕ್ಷಣೆ ಮಾಡಲು 20 ಎಲ್‌ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಜತೆಗೆ ದೇವಸ್ಥಾನದ ಉತ್ಸವ ಮೂರ್ತಿಯನ್ನು ನೇರವಾಗಿ ಪರದೆ ಮೂಲಕ ವೀಕ್ಷಣೆ ಮಾಡಬಹುದು.

 ಮಹಿಷಾಸುರ ಪ್ರತಿಮೆ ಎದುರು ಪ್ರಸಾದ ವಿತರಣೆ

ಮಹಿಷಾಸುರ ಪ್ರತಿಮೆ ಎದುರು ಪ್ರಸಾದ ವಿತರಣೆ

ಮಹಿಷಾಸುರ ಪ್ರತಿಮೆ ಆವರಣದಲ್ಲಿ ದಾನಿಗಳಿಂದ ಬಾಳೆಲೆ ಊಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಏಕ ಕಾಲದಲ್ಲಿ ಸಾವಿರ ಮಂದಿ ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜತೆಗೆ ಬಸ್ ನಿಲ್ದಾಣದಲ್ಲಿ 10 ಕೌಂಟರ್‌ಗಳನ್ನು ತೆರೆದು ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೆಟ್ಟಿಲು ಮಾರ್ಗದಲ್ಲಿ ಬೀದಿ ದೀಪ ಅಳವಡಿಕೆಯೊಂದಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ ನಾಲ್ಕು ಮೊಬೈಲ್ ಶೌಚಾಲಯಗಳನ್ನು ವ್ಯವಸ್ಥೆ ಕೂಡ ಮಾಡಲಾಗಿದೆ. ದೇವಸ್ಥಾನ ಪ್ರವೇಶಕ್ಕೆ ನಾಲ್ಕು ಕಡೆ ಪ್ರತ್ಯೇಕವಾಗಿ ಟಿಕೆಟ್ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.

 ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧ

ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧ

ಆಷಾಡ ಮಾಸದಲ್ಲಿ ಭಕ್ತರ ಸಂಖ್ಯೆ ಹಚ್ಚಾಗುವುದರಿಂದ ವಾಹನ ದಟ್ಟಣೆ ನಿಯಂತ್ರಿಸಲು ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಲಲಿತ ಮಹಲ್ ಬಳಿಯ ಮೈದಾನದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಬಸ್ ನಿಲ್ದಾಣದಿಂದ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ 3 ಗಂಟೆಯಿಂದ ರಾತ್ರಿ 10ರವರೆಗೆ ಬಸ್ ಸಂಚಾರ ಇರಲಿದೆ.

"ಆಷಾಢದ ಮಾಸದಲ್ಲಿ ಯಾವುದೇ ಶುಭ ಸಮಾರಂಭ ನಡೆಯುವುದಿಲ್ಲ ಈ ವೇಳೆ ಶಕ್ತಿ ದೇವತೆ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕುಟುಂಬದವರೆಲ್ಲಾ ದೇವಿಯ ದರ್ಶನ ಪಡೆಯಬಹುದು. ಉತ್ಸವ ಮೂರ್ತಿಯ ದರ್ಶನದೊಂದಿಗೆ ಮೂಲ ವಿಗ್ರಹದ ದರ್ಶನವನ್ನೂ ಭಕ್ತರು ಪಡೆಯಬಹುದು" ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದ್ದಾರೆ.

 ಸಂಚಾರ ಪೊಲೀಸರ ಸೂಚನೆಯಂತೆ ವಾಹನ ನಿಲುಗಡೆ

ಸಂಚಾರ ಪೊಲೀಸರ ಸೂಚನೆಯಂತೆ ವಾಹನ ನಿಲುಗಡೆ

ತಾವರೆಕಟ್ಟೆಯಿಂದ ಉತ್ತನಹಳ್ಳಿ ರಸ್ತೆ ಕಡೆಯಿಂದ ಮತ್ತು ಐವಾಕ್ ರಸ್ತೆ ಮೂಲಕ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ವಾಹನಗಳ ಸಂಚಾರವನ್ನು (ಸಾರಿಗೆ ಸಂಸ್ಥೆ ವಾಹನಗಳನ್ನು ಹೊರತುಪಡಿಸಿ) ನಿರ್ಬಂಧಿಸಲಾಗಿದೆ. ಲಲಿತ್ ಮೈದಾನದಲ್ಲಿ ಸಂಚಾರ ಪೊಲೀಸರ ಸೂಚನೆಯಂತೆ ಭಕ್ತರು ತಮ್ಮ ವಾಹನ ನಿಲುಗಡೆ ಮಾಡಬೇಕು.
ಲಲಿತಾದ್ರಿಪುರ, ಉತ್ತನಹಳ್ಳಿ ರಸ್ತೆ ಕಡೆಯಿಂದ ಬರುವ ಭಕ್ತರು ಕೂಡ ಲಲಿತ್ ಮಹಲ್ ಮೈದಾನಕ್ಕೆ ಬಂದು ಸಾರಿಗೆ ಬಸ್ಸಿನಲ್ಲಿಯೇ ಹೊರಡಬೇಕು. ಪ್ರಸಾದ ವಿನಿಯೋಗದ ವಾಹನಗಳಿಗೆ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ಬಸ್ ನಿಲ್ದಾಣದ ಎದುರು ಇರುವ ಪಾರ್ಕಿಂಗ್ ಜಾಗದಲ್ಲಿ ವ್ಯವಸ್ಥೆ ಮಾಡಿದ್ದು, ಜಿಲ್ಲಾಡಳಿತದಿಂದ ನೀಡುವ ಪಾಸ್ ಕಡ್ಡಾಯವಾಗಿದೆ. ಚಾಮುಂಡೇಶ್ವರಿ ವರ್ಧಂತಿ ದಿನದ ಹಿಂದಿನ ದಿನದ ರಾತ್ರಿ 10 ಗಂಟೆಗೆ ಯಾವುದೇ ವಾಹನಗಳಿಗೆ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.

Recommended Video

Ind vs Eng ODI ತಂಡ ಪ್ರಕಟ , ಯಾರಿಗೆ ಸ್ಥಾನ? | *Cricket | Oneindia Kannada


English summary
After Two years of COVID 19 break Ashada special pujas are celebrate in Chamundi hills in Mysuru. today thousands of Devotees visit to chamundeshwari temple for offered Puja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X