ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಮನ ಸೆಳೆಯುತ್ತಿದೆ ವರ್ಲಿ ಕಲೆಯಲ್ಲಿ ಅರಳಿದ ದಸರಾ ವೈಭವ

|
Google Oneindia Kannada News

ಮೈಸೂರು, ಸೆಪ್ಟೆಂಬರ್. 21 : ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೇವಲ 20 ದಿನಗಳಷ್ಟೇ ಬಾಕಿ ಉಳಿದಿವೆ. ಅರಮನೆಯ ಆವರಣ ಶುಚಿಗೊಳಿಸುವುದು, ವಿದ್ಯುತ್ ದೀಪಾಲಂಕಾರದ ದುರಸ್ತಿ, ಹೊಸ ಬಲ್ಬ್ ಗಳ ಅಳವಡಿಕೆ ಭರದಿಂದ ಸಾಗಿದೆ.

ನಗರದಲ್ಲಿ ಒಂದು ಲಕ್ಷಕ್ಕೂ ಅಧಿಕ ಬಲ್ಬ್ ಗಳನ್ನು ಹೊಂದಿರುವ ಅಂಬಾ ವಿಲಾಸ ಅರಮನೆಯ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ದುರಸ್ತಿ ಮಾಡಲಾಗುತ್ತಿದೆ. ಅರಮನೆಯ ಸೀಲಿಂಗ್ ಶುಚಿಗೊಳಿಸುವುದು, ವಿದ್ಯುತ್ ದೀಪಗಳ ಅಳವಡಿಕೆ, ಪೆಂಟಿಂಗ್ ಕಾರ್ಯಗಳು ಭರದಿಂದ ಸಾಗಿವೆ.

ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ 'ಕಾವಾ' ವಿದ್ಯಾರ್ಥಿಗಳ ಚಿತ್ರಕಲೆಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ 'ಕಾವಾ' ವಿದ್ಯಾರ್ಥಿಗಳ ಚಿತ್ರಕಲೆ

ಇದಲ್ಲದೆ ರಸ್ತೆಗಳ ಡಾಂಬರೀಕರಣ, ಗುಂಡಿಮುಚ್ಚುವುದು ಕೂಡ ಭರದಿಂದ ಸಾಗಿದೆ. ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲೂ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದ್ದು, ಆಯ್ದ ವೃತ್ತಗಳಲ್ಲಿ ಖಾಸಗಿಯವರ ಸಹಭಾಗಿತ್ವದಲ್ಲಿ ದೀಪಾಲಂಕಾರಕ್ಕೆ ಸಿದ್ಧತೆ ನಡೆಯುತ್ತಿದೆ.

Artists have painted warli art on walls in Mysuru

ಸರ್ಕಾರಿ ಕಟ್ಟಡಗಳಿಗೂ ಎಂದಿನಂತೆ ದೀಪಾಲಂಕಾರವನ್ನು ವಿಶೇಷವಾಗಿ ಮಾಡಲಾಗುತ್ತಿದೆ. ಮೈಸೂರು ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಸೆಳೆಯುವಂತಿದೆ.

 ಮಲ್ಲಿಗೆ ನಗರಿ ಹೂವಿನಹಡಗಲಿಯಲ್ಲಿ ಕಲ್ಲರಳಿ ಕಲೆಯಾಗಿ... ಮಲ್ಲಿಗೆ ನಗರಿ ಹೂವಿನಹಡಗಲಿಯಲ್ಲಿ ಕಲ್ಲರಳಿ ಕಲೆಯಾಗಿ...

ನಗರದ ಹಲವು ಕಡೆಗಳಲ್ಲಿ ಗೋಡೆಗಳ ಮೇಲೆ ವರ್ಲಿ ಚಿತ್ರಗಳು ಕಲಾವಿದರ ಕುಂಚದಿಂದ ಅರಳಿದ್ದು, ನೋಡುಗರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ. ಸ್ವಚ್ಛತೆಯಿಲ್ಲದ ಪ್ರದೇಶಗಳಲ್ಲಿ ಸ್ವಚ್ಛ ಮಾಡಿ ವರ್ಲಿ ಚಿತ್ರಗಳನ್ನು ಬಿಡಿಸಿ ದಸರಾ ವೈಭವವನ್ನು ಸಾರುತ್ತಿದ್ದಾರೆ.

Artists have painted warli art on walls in Mysuru

ದಸರಾ ಸಂದರ್ಭದಲ್ಲಿ ಮೈಸೂರಿನ ಕಾಂಪೌಂಡ್ ಗಳಲ್ಲೂ ನಾಡಿನ ಪರಂಪರೆ ಬಿಂಬಿಸಬೇಕು. ಇದರಿಂದ ನಗರದ ಸೌಂದರ್ಯ ಇಮ್ಮಡಿಯಾಗುವುದರ ಜೊತೆಗೆ ಪ್ರವಾಸಿಗರಿಗೂ ವಿಶೇಷ ಅನುಭವವಾಗುತ್ತದೆ ಎಂಬುದು ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರ ಅಭಿಪ್ರಾಯ.

ಸಮಸ್ಯೆಗಳು ಕಂಡಲ್ಲಿ ಚಿತ್ರ ಮೂಡುತ್ತದೆ: ಮೈಸೂರಿನಲ್ಲಿ ಹೀಗೊಬ್ಬ ಅಪರೂಪದ ಕಲಾವಿದಸಮಸ್ಯೆಗಳು ಕಂಡಲ್ಲಿ ಚಿತ್ರ ಮೂಡುತ್ತದೆ: ಮೈಸೂರಿನಲ್ಲಿ ಹೀಗೊಬ್ಬ ಅಪರೂಪದ ಕಲಾವಿದ

ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿದ ಅವರು, ಪ್ರಾಯೋಜಕರ ಸಹಕಾರದೊಂದಿಗೆ ಅನೇಕ ಕಡೆಗಳಲ್ಲಿ ಚಿತ್ರಕಲೆಯಲ್ಲಿ ಸಂಸ್ಕೃತಿ ಬಿಂಬಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಅನೇಕ ಉದ್ಯಮಿ ಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಕಾವಾ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಕಲಾವಿದರು ಚಿತ್ರಕಲೆಯಲ್ಲಿ ಮಗ್ನರಾಗಿದ್ದಾರೆ.

Artists have painted warli art on walls in Mysuru

ದಸರಾ ಜಂಬೂ ಸವಾರಿ, ಮೆರವಣಿಗೆಯಲ್ಲಿ ಸಾಗುವ ಕಲಾತಂಡಗಳು, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಗಾರುಡಿ ಗೊಂಬೆ, ಕಾಡು ಪ್ರಾಣಿಗಳು, ನೃತ್ಯಗಾರರು, ರೈಲು ಬಂಡಿ ಹೀಗೆ ವಿಭಿನ್ನ ಚಿತ್ರಗಳು ಕಣ್ಮನ ಸೆಳೆಯುತ್ತಿವೆ.

ಅಲ್ಲದೆ ಕೆಆರ್ಎಸ್ ರಸ್ತೆಯಲ್ಲಿ ರುವ ಗುಡಿಯಾಕಾರದ ವಾಲ್ ಛೇಂಬರ್ ಗಳು ವಿಶೇಷವಾದ ವರ್ಲಿ ಆರ್ಟ್ ಚಿತ್ರ ಕಲೆಯಿಂದ ವಿಭಿನ್ನವಾಗಿ ಕಾಣುತ್ತಿವೆ.

English summary
Mysore Dasara Mahotsva remains 20 days away. In this context, in many parts of the city artists have painted warli art on walls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X