ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮಸ್ಯೆಗಳು ಕಂಡಲ್ಲಿ ಚಿತ್ರ ಮೂಡುತ್ತದೆ: ಮೈಸೂರಿನಲ್ಲಿ ಹೀಗೊಬ್ಬ ಅಪರೂಪದ ಕಲಾವಿದ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 17: ಚಿತ್ರಕಲೆ ಟ್ರೆಂಡಿಂಗ್ ಆಗುತ್ತಿರುವುದು ಬಾದಲ್ ನಂಜುಂಡಸ್ವಾಮಿಯವರಂತಹ ಚಿತ್ರಕಾರರು ಹೊಸ ಶೈಲಿಯಲ್ಲಿ ಚಿತ್ರಗಳನ್ನು ಬಿಡಿಸಿ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಮೂಲಕ.

ಈಗ ಅದೇ ತರಹ ಮೈಸೂರಿನಲ್ಲಿ ಓರ್ವ ಯುವಕ ಕಳೆದ ಕೆಲವು ತಿಂಗಳಿನಿಂದ ವಿನೂತನ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

ಹೌದು, ಮಂಡ್ಯ ಜಿಲ್ಲೆಯ ಹಲ್ಗೂರಿನ ಕಲಾವಿದ ಶಿವರಂಜನ್ ಕಾವಾದಲ್ಲಿ ಲಲಿತಕಲೆಯ ಕುರಿತು ಅಭ್ಯಸಿಸುತ್ತಿದ್ದಾರೆ. ಇವರು ನಗರದ ವಿವಿಧೆಡೆ ಬಾಯಿ ತೆರೆದ ಮ್ಯಾನ್ ಹೋಲ್ ಗಳು, ದೊಡ್ಡ ರಸ್ತೆ ಗುಂಡಿಗಳು ಕಂಡರೆ ಕುಂಚ ಬಳಸಿ ಬಣ್ಣ ಬಳಿದು ಅಧಿಕಾರಿಗಳ ಗಮನ ಸೆಳೆಯುವ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ.

ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ 'ಕಾವಾ' ವಿದ್ಯಾರ್ಥಿಗಳ ಚಿತ್ರಕಲೆಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ 'ಕಾವಾ' ವಿದ್ಯಾರ್ಥಿಗಳ ಚಿತ್ರಕಲೆ

ಶಿವರಂಜನ್ ತಮ್ಮ ಶಾಲಾ ದಿನಗಳಿಂದಲೇ 3 ಡಿ ಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಅಂದು ಚಿತ್ರಕಲಾ ಸ್ಪರ್ಧೆಗಳಲ್ಲಿ ರಸ್ತೆಯ ಚಿತ್ರಗಳನ್ನೇ ಹೆಚ್ಚಾಗಿ ಬಿಡಿಸುತ್ತಿದ್ದುದು ವಿಶೇಷವಾಗಿತ್ತು.

ನಂತರ ಅದನ್ನು ಕಲಿಕೆಯಲ್ಲಿಯೂ ತೊಡಗಿಸಿಕೊಂಡು ಚಿತ್ರಕಲೆಯಲ್ಲಿ ಮತ್ತಷ್ಟು ಆಸಕ್ತಿ ರೂಢಿಸಿಕೊಂಡರು. 2 ವರ್ಷಗಳ ಹಿಂದೆ ನಗರದ ಕಾವಾ ಕಾಲೇಜಿಗೆ ಸೇರಿದ ಶಿವರಂಜನ್, ಮೊದಲ ಬಾರಿಗೆ ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿದ್ದ ಒಳಚರಂಡಿ ಮ್ಯಾನ್ ಹೋಲ್ ಗೆ ಶಾರ್ಕ್ ಚಿತ್ರ ಬಿಡಿಸಿ ಗಮನ ಸೆಳೆದಿದ್ದರು.

ಆ ಬಳಿಕ ರಸ್ತೆಯಲ್ಲಿ ಸಮಸ್ಯೆಗಳು ಕಂಡಲೆಲ್ಲಾ ಚಿತ್ರಕಲೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆಸಿದ್ದಾರೆ. ಈ ಕುರಿತ ಚಿತ್ರ ಸಹಿತ ಪುಟ್ಟ ಲೇಖನ ಇಲ್ಲಿದೆ...

 ಮೊದಲಿಗೆ ಮನವಿ

ಮೊದಲಿಗೆ ಮನವಿ

ಮೊದಲಿಗೆ ತೆರೆದ ಗುಂಡಿ ಕಂಡಾಗ ಅಲ್ಲಿನ ಸ್ಥಳೀಯರೊಂದಿಗೆ ಸಮಸ್ಯೆ ಬಗೆಹರಿಸಲು ಮುಂದಾಗುವ ಇವರು, ನಂತರ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೂ ಸಮಸ್ಯೆಯನ್ನು ತಂದು ಬಗೆಹರಿಸುವಂತೆ ಮನವಿ ಮಾಡುತ್ತಾರೆ.

ಮಹಿಳೆಯರ ಕಲಾಕುಂಚದಿಂದ ಅರಳಿದ ಚಿತ್ರಕಲಾ ಪ್ರದರ್ಶನಮಹಿಳೆಯರ ಕಲಾಕುಂಚದಿಂದ ಅರಳಿದ ಚಿತ್ರಕಲಾ ಪ್ರದರ್ಶನ

 ಚಿತ್ತಹರಿಸುವಂತೆ ಚಿತ್ರ

ಚಿತ್ತಹರಿಸುವಂತೆ ಚಿತ್ರ

ಮನವಿ ಮಾಡಿಕೊಂಡರೂ ಸಮಸ್ಯೆ ಬಗೆಹರಿಯದಿದ್ದರೆ, ಜನಪ್ರತಿನಿಧಿಗಳ ನಿರಾಸಕ್ತಿ ಹಾಗೂ ಅಧಿಕಾರಿಗಳ ಅಸಡ್ಡೆಯನ್ನು ಅಣಕಿಸಿ ರಸ್ತೆ ಗುಂಡಿ, ಯಮರೂಪಿ ಮ್ಯಾನ್ ಹೋಲ್ ಬಳಿ ಕುಂಚ- ಬಣ್ಣ ಬಳಸಿ ಗಮನ ಸೆಳೆವ ಚಿತ್ರಗಳನ್ನು ರಚಿಸುತ್ತಾರೆ. ಸಮಸ್ಯೆಯ ಬಗ್ಗೆ ದಾರಿಹೋಕರಾದರೂ ಚಿತ್ತಹರಿಸುವಂತೆ ಮಾಡುತ್ತಾರೆ.

 ಸಂದರ್ಶನ: ನೂರು ದೇಶ ಸುತ್ತುವಾಸೆ ಉಜಿರೆಯ ಈ ಕಲಾವಿಲಾಸಿಗೆ.... ಸಂದರ್ಶನ: ನೂರು ದೇಶ ಸುತ್ತುವಾಸೆ ಉಜಿರೆಯ ಈ ಕಲಾವಿಲಾಸಿಗೆ....

 ಯಶಸ್ಸು ಸಿಕ್ಕಿದೆ

ಯಶಸ್ಸು ಸಿಕ್ಕಿದೆ

ಹೀಗೆ ನಗರದಲ್ಲಿ ಇದುವರೆಗೂ 30ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿ ಜನರ ಗಮನ ಸೆಳೆದಿರುವ ಶಿವರಂಜನ್, 22 ಸಮಸ್ಯೆಗಳಿಗೆ ಜನಪತಿನಿಧಿಗಳ ಸ್ಪಂದನೆಯೊಂದಿಗೆ ಪರಿಹಾರ ಕಂಡುಕೊಡುವಲ್ಲಿ ಯಶಸ್ಸು ಕಂಡಿದ್ದಾರೆ.

 ನಿರ್ಲಕ್ಷ್ಯವನ್ನು ಅಣಕಿಸುವ ಪ್ರಯತ್ನ

ನಿರ್ಲಕ್ಷ್ಯವನ್ನು ಅಣಕಿಸುವ ಪ್ರಯತ್ನ

ನಗರದ ಬಿಗ್ ಬಜಾರ್ ಬಳಿ ಹಾಡ್ರ್ವಿಕ್ ಶಾಲೆಯ ಕ್ಯಾಂಟೀನ್ ಎದುರಿನ ಒಳ ಚರಂಡಿಯ ಮ್ಯಾನ್ ಹೋಲ್ ಮುಚ್ಚಳವಿಲ್ಲದೇ ಬಾಯಿ ತೆರೆದುಕೊಂಡು ಅಪಾಯಕ್ಕೆ ಆಹ್ವಾನ ನೀಡುವಂತಿತ್ತು. ಅಲ್ಲಿ ಚಿತ್ರ ರಚಿಸಿ ಜನಪ್ರನಿಧಿಗಳ, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಅಣಕಿಸುವ ಪ್ರಯತ್ನ ಮಾಡಿದ್ದಾರೆ.

English summary
In Mysuru Artist Shivarajan draws pictures where he find problems in the road. Through this he solve the local people problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X