ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೂಜಿಗಲ್ಲಿನಂತೆ ಜನರನ್ನು ಸೆಳೆದ ಮೈಸೂರಿನ ಕುಕ್ಕರಹಳ್ಳಿಯ ಛಾಯಾಚಿತ್ರ ಪ್ರದರ್ಶನ

|
Google Oneindia Kannada News

ಮೈಸೂರು, ಮೇ 12 : ಕುಕ್ಕರಹಳ್ಳಿ ಕೆರೆ ಎಂದರೆ ಸಾಕು ಛಾಯಾಚಿತ್ರ ಸೆರೆಹಿಡಿಯುವವರ ಜೀವ ತಾಣ. ಅಲ್ಲಿ ಫೋಟೋ ಕ್ಲಿಕ್ಕಿಸುವವರಿಗೆ ಅದೊಂದು ಪುಳಕದ ತಾಣ. ಹೌದು, ಈ ಕುಕ್ಕರಹಳ್ಳಿ ಕೆರೆ ಮೈಸೂರಿನ ಹೃದಯ ಭಾಗದಲ್ಲಿರುವ ಒಂದು ಪ್ರಶಾಂತವಾದ ಸ್ಥಳ. ವಾಯು ವಿಹಾರಿಗಳು, ಪಕ್ಷಿ ವೀಕ್ಷಕರು, ವಿದ್ಯಾರ್ಥಿಗಳು, ಪ್ರವಾಸಿಗರು ಸೇರಿದಂತೆ ನೂರಾರು ಜನ ಪ್ರತಿನಿತ್ಯ ಕೆರೆಗೆ ಭೇಟಿ ನೀಡುತ್ತಾರೆ.

ಕೆರೆಯಲ್ಲಿನ ಸುಂದರ ಪರಿಸರ, ಸ್ವಚ್ಛಂದ ಗಾಳಿ ಮತ್ತು ಜೀವ ವೈವಿಧ್ಯ ಜನರನ್ನು ಆಕರ್ಷಕವಾಗಿ ಸೆಳೆಯುತ್ತಿದೆ. ಈ ಕೆರೆಯಲ್ಲಿ 180ಕ್ಕೂ ವಿವಿಧ ಜಾತಿಯ ಪಕ್ಷಿಗಳು ಅದರಲ್ಲಿ 50ಕ್ಕೂ ಹೆಚ್ಚು ಜಾತಿಯ ವಲಸೆ ಪಕ್ಷಿಗಳು, 85ಕ್ಕೂ ಹೆಚ್ಚು ವಿವಿಧ ಜಾತಿಯ ಚಿಟ್ಟೆ, ನೂರಾರು ಬಗೆಯ ಕೀಟ, ಜೇಡ ಕಾಣಸಿಗುತ್ತದೆ. 250ಕ್ಕೂ ಹೆಚ್ಚು ಜಾತಿಯ ಸಸ್ಯಗಳು ಇಲ್ಲಿ ಕಾಣಸಿಗುತ್ತದೆ. ಈ ಕೆರೆಯಲ್ಲಿ ಗುಳ್ಳೆನರಿ ಸಂತಾನೋತ್ಪತ್ತಿ ಮಾಡುತ್ತವೆ.

'ಕುಕ್ಕರಹಳ್ಳಿ ಕೆರೆಯಲ್ಲಿ ಬದುಕು' ಛಾಯಾ ಚಿತ್ರಕ್ಕೆ ಆಹ್ವಾನ, ಮೇ 5 ಕೊನೇ ದಿನ 'ಕುಕ್ಕರಹಳ್ಳಿ ಕೆರೆಯಲ್ಲಿ ಬದುಕು' ಛಾಯಾ ಚಿತ್ರಕ್ಕೆ ಆಹ್ವಾನ, ಮೇ 5 ಕೊನೇ ದಿನ

ಕುಕ್ಕರಹಳ್ಳಿ ಕೆರೆಯಲ್ಲಿ ಹೆಜ್ಜಾರ್ಲೆ ಪಕ್ಷಿ ಸಂತಾನ ಉತ್ಪತ್ತಿ ಮಾಡುವ ಕಾರಣ ಕೆರೆಯನ್ನು ಬರ್ಡ್ ಲೈಫ್ ಇಂಪಾರ್ಟ್ಂಟ್ ಬರ್ಡ್ ಅಂಡ್ ಬಯೋಡೈವರ್ಸಿಟಿ ಏರಿಯಾ ಎಂದು ಘೋಷಿಸಿದ್ದಾರೆ.

Around 250 photos exhibition held at Life in Kukkarahalli lake photograph

ಕೆರೆಯ ವಿವಿಧ ಭಾಗಗಳಾದ ಜೊಂಡು ಪ್ರದೇಶ, ನೀರ ದಂಡೆ , ಜೋಗು ನೆಲ, ದ್ವೀಪಾ, ಕಾಡು ಹೀಗೆ ಪ್ರತಿಯೊಂದು ಪ್ರದೇಶವು ಹಲವಾರು ಬಗೆಯ ಜೀವನ ಆಹಾರ ಮತ್ತು ಆಶ್ರಯ ತಾಣ ನೀಡುತ್ತಿದೆ. ಹೀಗೆ ಕೆರೆಯನ್ನು ಜೀವ ವೈವಿಧ್ಯವನ್ನು ಪ್ರದರ್ಶಿಸುವ ಸಲುವಾಗಿ ವೈಲ್ಡ್ ಮೈಸೂರು ವತಿಯಿಂದ ಲೈಫ್ ಇನ್ ಕುಕ್ಕರಹಳ್ಳಿ ಕೆರೆ ಎಂಬ ಶೀರ್ಷಿಕೆಯಡಿಯಲ್ಲಿ ಇಂದು ಬೆಳಗಿನ ಜಾವ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

Around 250 photos exhibition held at Life in Kukkarahalli lake photograph

ವಲಸೆ ಹಕ್ಕಿಗಳು ಹೋಗುವವರೆಗೆ ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ನಡೆಸಬೇಡಿ:ಆಕ್ಷೇಪ ವಲಸೆ ಹಕ್ಕಿಗಳು ಹೋಗುವವರೆಗೆ ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಾರಿಕೆ ನಡೆಸಬೇಡಿ:ಆಕ್ಷೇಪ

49 ಛಾಯಾಗ್ರಾಹಕರಿಂದ 90 ಉತ್ತಮ ಛಾಯಾಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ಅಲ್ಲದೇ ವೈಲ್ಡ್ ಮೈಸೂರು ವತಿಯಿಂದ ಕೆಲವು ಛಾಯಾಚಿತ್ರಗಳು ಸೇರಿ ಒಟ್ಟು 185 ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಕಾರ್ಯಕ್ರಮವನ್ನು ಮೈಸೂರು ವಿವಿ ಕುಲಸಚಿವರಾದ ಪ್ರೊ. ಲಿಂಗರಾಜ ಗಾಂಧಿ ಅವರು ಮಹಾಗೊನಿ ಸಸಿಯನ್ನು ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ನೆಡುವುದರ ಮೂಲಕ ಉದ್ಘಾಟಿಸಿದರು.

Around 250 photos exhibition held at Life in Kukkarahalli lake photograph

ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ 'ಕಾವಾ' ವಿದ್ಯಾರ್ಥಿಗಳ ಚಿತ್ರಕಲೆ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ 'ಕಾವಾ' ವಿದ್ಯಾರ್ಥಿಗಳ ಚಿತ್ರಕಲೆ

ಇನ್ನು ಈ ಕಣ್ಮನ ಸೆಳೆವ ಛಾಯಾಚಿತ್ರವು ಕೆರೆಯ ವಿವಿಧ ಭಾಗಗಳನ್ನು ಪ್ರದರ್ಶಿಸುವಂತಿತ್ತು. ಪ್ರತಿಯೊಂದು ಛಾಯಾಚಿತ್ರದಲ್ಲಿಯೂ ಸೆರೆಹಿಡಿದವರ ಕರಕುಶಲತೆ ಎದ್ದು ಕಾಣುವಂತಿತ್ತು. ಅವುಗಳಲ್ಲಿ ಕೆರೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತಿದ್ದ ಅಲ್ಲದೆ ಕೆರೆಯಲ್ಲಿನ ವಿಶೇಷತೆ, ಕೆರೆಯಲ್ಲಿನ ಜೀವ ವೈವಿಧ್ಯದ ಬಗ್ಗೆ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಡುವಂತಹ ಪ್ರಯತ್ನಗಳು ನೋಡುಗನನ್ನು ಸೆರೆ ಹಿಡಿಯುವಂತಿತ್ತು.

English summary
Around 250 photos exhibition held at Life in Kukkarahalli lake photograph
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X