ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಮೊದಲ ಬಾರಿಗೆ ಆರೋಗ್ಯ ದಸರಾ ಆಯೋಜನೆ: ಡಾ.ಕೆ.ಸುಧಾಕರ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್‌, 27: ಆರೋಗ್ಯ ದಸರಾ ಐತಿಹಾಸಿಕ ಕಾರ್ಯಕ್ರಮವಾಗಿದ್ದು, ನಾವು ಇಂದು ಹೆಮ್ಮೆಯಿಂದ ಉದ್ಘಾಟನೆ ಮಾಡಿದ್ದೇವೆ. ಈ ಆಲೋಚನೆ ಇತಿಹಾಸದಲ್ಲೇ ಮೊದಲ ಬಾರಿಗೆ ಆಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮೈಸೂರಿನಲ್ಲಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಇಂದು ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಆರೋಗ್ಯ ದಸರಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ಗತವೈಭವದ ನಾಡಹಬ್ಬ ಆಚರಣೆ ಮಾಡಲಾಗುತ್ತಿದೆ. ದೇಶದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಮತ್ತು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ದಸರಾಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.

ವಿದ್ಯುದ್ದೀಪದ ಬೆಳಕಿನಲ್ಲಿ ಮೈಸೂರಿನಲ್ಲಿ 'ಅಂಬಾರಿ' ಪ್ರದಕ್ಷಿಣೆವಿದ್ಯುದ್ದೀಪದ ಬೆಳಕಿನಲ್ಲಿ ಮೈಸೂರಿನಲ್ಲಿ 'ಅಂಬಾರಿ' ಪ್ರದಕ್ಷಿಣೆ

ಆರೋಗ್ಯ ದಸರಾವೆಂಬ ಆಲೋಚನೆ ನಾವು ಕೋವಿಡ್ ದಿನಗಳಲ್ಲಿ ಎದುರಿಸಿದ ಸವಾಲುಗಳಿಂದ ಬಂದಿದೆ. ಅದರ ಅರಿವು ಮೂಡಿಸುವ ಕಾರ್ಯ ದಸರಾದಲ್ಲಿ ಆಗಬೇಕು ಎನ್ನುವ ಉದ್ದೇಶದಿಂದ ಆರೋಗ್ಯ ದಸರಾವನ್ನು ನಡೆಸಲಾಗುತ್ತಿದೆ. ಮೈಸೂರು ನಗರವನ್ನು ಯೋಗ ನಗರವೆಂದರೆ ತಪ್ಪಾಗಲಾರದು. ಜೂನ್ 21ರಂದು ವಿಶ್ವ ಯೋಗ ದಿನ ಆಚರಣೆ ಮಾಡಬೇಕು ಎಂದು ವಿಶ್ವ ಸಂಸ್ಥೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಆಗಿದೆ. ಇದು ಭಾರತೀಯರ ಹೆಮ್ಮೆಯ ವಿಷಯವಾಗಿದೆ ಎಂದರು.

 ಖಾಸಗಿ ವಲಯದಲ್ಲಿ 40,000 ಜನರಿಗೆ ಚಿಕಿತ್ಸೆ

ಖಾಸಗಿ ವಲಯದಲ್ಲಿ 40,000 ಜನರಿಗೆ ಚಿಕಿತ್ಸೆ

ಆರೋಗ್ಯ ಇಲಾಖೆಯಲ್ಲಿ ಸುಮಾರು 60 ಸಾವಿರ ಜನರಿಗೆ ಕಳೆದ ಒಂದು ವರ್ಷದಲ್ಲಿ ಉಚಿತವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಅಡಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೇ ರೀತಿ ಖಾಸಗಿ ವಲಯದಲ್ಲಿಯೂ ಸಹ 40,000 ಜನರಿಗೆ ಚಿಕಿತ್ಸೆ ನೀಡಲಾಗಿದೆ. 118 ಕೋಟಿ ರೂಪಾಯಿ ಅನ್ನು ಮೈಸೂರು ಜಿಲ್ಲೆಯ ಆರೋಗ್ಯ ಚಿಕಿತ್ಸಾ ವೆಚ್ಚಗಳಿಗೆ ಸರ್ಕಾರ ಬರಿಸಿದೆ. ಸುಮಾರು 5 ಕೋಟಿ ಸ್ಮಾರ್ಟ್ ಕಾರ್ಡ್‌ಗಳನ್ನು 100 ದಿನಗಳೊಳಗೆ ಜನರ ಮನೆಗಳಿಗೆ ತಲುಪಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. 85 ಲಕ್ಷ ಕಾರ್ಡುಗಳನ್ನು ಕಳೆದ 15 ದಿನಗಳಲ್ಲಿ ನೀಡಲಾಗಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ಸಮರ್ಪಕವಾಗಿರುವಂತಹ ಒಂದು ಆರೋಗ್ಯ ವಿಮಾ ಯೋಜನೆ ಆಗಿದೆ ಎಂದು ತಿಳಿಸಿದರು.

 ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚನೆ

ತ್ವರಿತವಾಗಿ ಕಾಮಗಾರಿ ಮುಗಿಸಲು ಸೂಚನೆ

ಅದೇ ರೀತಿ ಮೂಲಭೂತ ಸೌಕರ್ಯಗಳು ಸಹ ಮೈಸೂರು ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ದೊರೆಯುತ್ತಿವೆ. ಹಾಗೆಯೇ 89 ಕೋಟಿ ರೂಪಾಯಿಗಳನ್ನು ವಸತಿ ನಿಲಯಗಳಿಗೆ ನೀಡಲಾಗಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತದೆ. ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸಾಯುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಮಧುಮೇಹ ರಕ್ತದೊತ್ತಡ, ಕ್ಯಾನ್ಸರ್ ರೋಗಗಳಿಗೆ ತುತ್ತಾಗುತ್ತಿರುವವರನ್ನು ಹೆಚ್ಚಾಗಿ ಕಾಣಬಹುದು. ಕ್ಷಯ ನಿರ್ಮೂಲನೆ ಮಾಡಬೇಕು ಎಂಬ ಉದ್ದೇಶವಿದ್ದು ಪ್ರಧಾನಮಂತ್ರಿಗಳು ಸಹ ವಿಶೇಷ ಅಭಿಯಾನವನ್ನು ಕೈಗೊಂಡಿದ್ದಾರೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

 ಯಾವ್ಯಾವ ಕಾಮಗಾರಿಗಳಿಗೆ ಎಷ್ಟು ವೆಚ್ಚ?

ಯಾವ್ಯಾವ ಕಾಮಗಾರಿಗಳಿಗೆ ಎಷ್ಟು ವೆಚ್ಚ?

ಶಾಸಕರಾದ ಎಲ್.ನಾಗೇಂದ್ರ ಅವರು ಟ್ರಾಮಾ ಸೆಂಟರ್‌ಗೆ ಸಿಬ್ಬಂದಿ ಮತ್ತು ವೈದ್ಯರನ್ನು ನೀಡುತ್ತಿರುವುದು ಬಹಳ ಸಂತೋಷವಾಗಿದೆ. ಹಾಗೆಯೇ ನಗರದ ಸಂಶೋಧನಾ ಸಂಸ್ಥೆಯ ಕಟ್ಟಡ ಕಾಮಗಾರಿಗೆ ಸರ್ಕಾರ 32 ಕೋಟಿ ರೂಪಾಯಿ ನೀಡಿದ್ದು, ಬಾಲಕರ ವಸತಿ ನಿಲಯಕ್ಕೆ 35 ಕೋಟಿ ರೂಪಾಯಿ ನೀಡಲಾಗಿದೆ. ಹಾಗೂ ಬಾಲಕಿಯರ ವಸತಿ ನಿಲಯಗಳಿಗೆ 42 ಕೋಟಿ ರೂಪಾಯಿ ನೀಡಿದ್ದು, ಮೂರು ಕಟ್ಟಡಗಳು ಉದ್ಘಾಟನೆಯ ಹಂತದಲ್ಲಿವೆ ಎಂದು ತಿಳಿಸಿದರು.

 ಕಟ್ಟಡ ನಿರ್ಮಾಣದ ಬಗ್ಗೆ ಸಚಿವರ ಅಭಿಪ್ರಾಯ

ಕಟ್ಟಡ ನಿರ್ಮಾಣದ ಬಗ್ಗೆ ಸಚಿವರ ಅಭಿಪ್ರಾಯ

ಹಾಗೆಯೇ ಕೆ.ಆರ್.ಆಸ್ಪತ್ರೆಯ ಕಟ್ಟಡಗಳ ನವೀಕರಣಕ್ಕೆ 89 ಕೋಟಿ 95 ಲಕ್ಷ ರೂಪಾಯಿ ನೀಡಲಾಗಿದ್ದು, ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾಪೌರರಾದ ಶಿವಕುಮಾರ್, ಉಪ ಮಹಾಪೌರರಾದ ಡಾ.ರೂಪ, ನಗರಸಭೆ ಅಧ್ಯಕ್ಷರಾದ ಶ್ರೀವತ್ಸ ಸೇರಿದಂತೆ ಅನೇಕ ಗಣ್ಯರು, ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

English summary
Health Minister Dr K Sudhakar said in Mysuru, Aarogya Dasara is historic program, we are proud to inaugurate Aarogya Dasara today. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X