ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗಾಯಣದ ರಂಗಶಿಕ್ಷಣ ಡಿಪ್ಲೋಮಾಗೆ ಆನ್ ಲೈನಲ್ಲೇ ಅರ್ಜಿ

By Mahesh
|
Google Oneindia Kannada News

ಮೈಸೂರು, ಮೇ.24: ಕರ್ನಾಟಕ ಸರ್ಕಾರ ಸ್ಥಾಪಿಸಿರುವ ರಂಗಾಯಣವು ರಂಗ ಶಾಲೆ ಯನ್ನು ಕಳೆದ ಐದು ವರ್ಷಗಳಿಂದ ನಡೆಸುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡಾ ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೋಮಾ ಕೋರ್ಸಿಗೆ ಅರ್ಜಿ ಅಹ್ವಾನಿಸಲಾಗಿದೆ.

ಈ ಕೋರ್ಸಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಮಾನ್ಯತೆಯನ್ನು ನೀಡಿದೆ. 2015-16ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ಕನಿಷ್ಟ ವಿದ್ಯಾರ್ಹತೆ ದ್ವಿತೀಯ ಪಿ.ಯು.ಸಿ. (10+2) ಹೊಂದಿರುವ 18 ತುಂಬಿದ 28 ವರ್ಷದೊಳಗಿನವರು ಅರ್ಜಿಯನ್ನು ಸಲ್ಲಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾಹೆಯಾನ ರೂ 2,500/- ಹಾಗೂ ಉಚಿತ ವಸತಿಯನ್ನು ನೀಡಲಾಗುವುದು.

Applications invited for Diploma Course in Theatre, Rangayana

ಒಂದು ವರ್ಷದ ರಂಗಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಯು ಮುಂದಿನ ಎರಡು ವರ್ಷಗಳು ಹೆಚ್ಚಿನ ವೃತ್ತಿಪರ ನಟನೆ, ತಾಂತ್ರಿಕತೆ ಪರಿಣತಿ ತರಬೇತಿಗಾಗಿ ರಂಗಾಯಣ ರೆಪರ್ಟರಿಯಲ್ಲಿ ಕಿರಿಯ ಕಲಾವಿದರಾಗಿ ಒಪ್ಪಂದದ ಮೇಲೆ ಎರಡು ವರ್ಷಗಳ ಕಾಲ ವೇವೆಯನ್ನು ಸಲ್ಲಿಸುವುದು. ಈ ಎರಡು ವರ್ಷದ ಅವಧಿಯಲ್ಲಿ ನಿಗದಿತ ಸಂಭಾವನೆಯನ್ನು ನೀಡಲಾಗುವುದು. ಈ ಸೇವಾವಧಿಯನ್ನು ಪೂರ್ಣಗೊ:ಳಿಸಿದ ವಿದ್ಯಾರ್ಥಿಯು ವೃತ್ತಿಪರ ಪರಿಣತಿ ಪ್ರಮಾಣ ಪತ್ರವನ್ನು ಪಡೆಯಲು ಅರ್ಹನಾಗುತ್ತಾನೆ.

ಅರ್ಜಿ ಸಲ್ಲಿಸುವ ವಿಧಾನ: ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ದಿನಾಂಕ 10/06/2015 ರೋಳಗೆ ರಂಗಾಯಣದ ವೆಬ್‌ಸೈಟ್ ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ರೂ. 50/- ಡಿ.ಡಿ. ಅಥವಾ ಮನಿಯಾರ್ಡರ್‌ನ್ನು ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು - 570 005 ಎಂಬ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಕಳುಹಿಸಬಹುದು ಅಥವಾ ರಂಗಾಯಣದ ಕಚೇರಿಯ ಅವಧಿಯಲ್ಲಿ ಖುದ್ದಾಗಿ ಬಂದು ಅರ್ಜಿಗಳನ್ನು ಪಡೆಯಬಹುದು. ಭರ್ತಿಮಾಡಿದ ಅರ್ಜಿಗಳನ್ನು ದಿನಾಂಕ 20/06/2015 ರೊಳಗೆ ತಲುಪುವಂತೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು.

Rangayana

ಆಯ್ಕೆ ವಿಧಾನ: ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿಯ ಪ್ರತಿಭೆ ಮತ್ತು ರಂಗಾಸಕ್ತಿಯನ್ನು ಪ್ರಧಾನವಾಗಿ ಪರಿಗಣಿಸಲಾಗುವುದು.

ಸರ್ಕಾರದ ನಿಯಮಾನುಸಾರ ಮೀಸಲಾತಿಯ ಕ್ರಮವನ್ನು ಅನುಸರಿಸಲಾಗುವುದು. ಅಭ್ಯರ್ಥಿಯು ತನ್ನ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನವನ್ನು ಜುಲೈ 4,2015 ರಂದು ರಂಗಾಯಣದ ಆವರಣದಲ್ಲಿ ನಡೆಸಲಾಗುವುದು. ಶಾಲೆಯ ಪ್ರಾರಂಭ ಆಗಸ್ಟ್ 1, 2015.

ಹೆಚ್ಚಿನ ವಿವರಕ್ಕಾಗಿ ರಂಗಾಯಣ ಕಚೇರಿಯನ್ನು ಸಂಪರ್ಕಿಸುವುದು. ದೂರವಾಣಿ ಸಂಖ್ಯೆ 0821-2512639. (ಒನ್ ಇಂಡಿಯಾ ಸುದ್ದಿ)

English summary
Rangayana is offering a one-year diploma course in theatre. Rangayana is the only government-run theatre repertory in India.The course, recognized by Karnataka State Open university, will commence from July. Interested can apply for the course online using Rangayana website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X