ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು : ಗನ್ ಹೌಸ್‌ನಿಂದ ಚಾಮುಂಡಿ ಬೆಟ್ಟಕ್ಕೆ ಸುರಂಗ ಪತ್ತೆ

By Kiran B Hegde
|
Google Oneindia Kannada News

ಮೈಸೂರು, ಜ. 21: ನಗರದ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಬಳಿ ಬುಧವಾರ ಮತ್ತೊಂದು ಸುರಂಗ ಮಾರ್ಗ ಪತ್ತೆಯಾಗಿದೆ. ಅರಮನೆ ಸನಿಹದಲ್ಲಿಯೇ ಇರುವ ಗನ್ ಹೌಸ್‌ನಲ್ಲಿ ಈ ಗುಹೆ ಇದ್ದು, ಒಂದು ತುದಿ ಚಾಮುಂಡಿ ಬೆಟ್ಟಕ್ಕೆ ಹಾಗೂ ಇನ್ನೊಂದು ತುದಿ ಅಬಾವಿಲಾಸ ಅರಮನೆಯನ್ನು ಸಂಪರ್ಕಿಸುತ್ತದೆ ಎನ್ನಲಾಗಿದೆ.

ಸ್ಥಳೀಯರ ಪ್ರಕಾರ ಈ ಸುರಂಗ ಮಾರ್ಗವನ್ನು ಸುಮಾರು 150 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ರಾಜರ ಕಾಲದಲ್ಲಿ ಯುದ್ಧ ನಡೆದಾಗ ಸೋಲುವ ಸ್ಥಿತಿ ಬಂದರೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಂಬಾವಿಲಾಸ ಅರಮನೆಯಿಂದ ನಾಲ್ಕೂ ದಿಕ್ಕಿನಲ್ಲಿ ಒಂದೊಂದು ಸುರಂಗ ಮಾರ್ಗ ಕೊರೆಯಲಾಗಿತ್ತು. ಈ ಮೂಲಕ ರಾಜರು ತಪ್ಪಿಸಿಕೊಳ್ಳುವ ಉದ್ದೇಶ ಹೊಂದಿದ್ದರು.

ವಿಶ್ವಮಾನವ ಉದ್ಯನವನದ ಬಳಿ ಒಳಚರಂಡಿ ಕಾಮಗಾರಿ ನಡೆಸುತ್ತಿರುವಾಗ ಈ ಸುರಂಗ ಮಾರ್ಗ ಪತ್ತೆಯಾಗಿದೆ. ಈ ಸುರಂಗ ಸುಮಾರು 3 ಅಡಿ ಅಗಲ ಹಾಗೂ 4ರಿಂದ 5 ಅಡಿ ಎತ್ತರವಿದೆ. ಓರ್ವ ವ್ಯಕ್ತಿ ಈ ಗುಹೆ ಮೂಲಕ ಸುಲಭವಾಗಿ ನುಸುಳಿ ಹೋಗಲು ಅವಕಾಶವಿದೆ. ಗುಹೆಯನ್ನು ಇಟ್ಟಿಗೆ ಮತ್ತು ಸುಣ್ಣದ ಗಾರೆ ಉಪಯೋಗಿಸಿ ನಿರ್ಮಿಸಲಾಗಿದೆ. ಈ ಗುಹೆಯ ಕೆಲವೆಡೆ ಮೆಟ್ಟಿಲುಗಳು ಕಂಡುಬಂದಿವೆ.

ಗುಹೆಯು ಸುಮಾರು 10ರಿಂದ 15 ಅಡಿ ದೂರದವರೆಗೆ ಮುಂದುವರಿದಿದ್ದು, ನಂತರ ಕಲ್ಲು ಮಣ್ಣುಗಳು ದಾರಿಯನ್ನು ಮುಚ್ಚಿವೆ. ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಸುಮಾರು ಆರು ತಿಂಗಳುಗಳ ಹಿಂದೆಯೂ ಇದೇ ಜಾಗದಲ್ಲಿ ಎರಡು ಕಂದಕಗಳು ಪತ್ತೆಯಾಗಿದ್ದವು. ಇವು ಮ್ಯಾನ್‌ಹೋಲ್‌ಗಳು ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು.

mysuru
English summary
Another sub way found in near Mysuru palace. It contacts Gun house to Chamundi hills.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X