ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ ಮೈಸೂರಿಗೆ ಸೇರ್ಪಡೆಯಾಗಲಿದೆ ಮತ್ತೊಂದು ಆಕರ್ಷಣೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜನವರಿ 01: ರೈಲ್ವೇ ಇಲಾಖೆಯು 'ಮೈಸೂರು ರೈಲ್ವೆ ಮ್ಯೂಸಿಯಂ' ಅನ್ನು ಅಂತರರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸುತ್ತಿದ್ದು, ಶೀಘ್ರದಲ್ಲೇ ಮೈಸೂರಿಗೆ ಇನ್ನೊಂದು ಆಕರ್ಷಣೆ ಸೇರ್ಪಡೆಗೊಳ್ಳಲಿದೆ.

ಈಗ ಅಂತಿಮ ಹಂತದಲ್ಲಿರುವ ಕಾಮಗಾರಿಗಳು ಭರದಿಂದ ಸಾಗಿದ್ದು, ಫೆಬ್ರುವರಿಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ. ರೈಲು ವಸ್ತು ಸಂಗ್ರಹಾಲಯವನ್ನು ಮೇಲ್ದರ್ಜೆಗೇರಿಸುವ ಸಂಬಂಧ ಕಳೆದ ಮಾರ್ಚ್ 7 ರಿಂದಲೇ ರಜೆ ಘೋಷಿಸಲಾಗಿದ್ದು, ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಜೂನ್ ಹೊತ್ತಿಗೆ ಕೆಲಸ ಮುಗಿಯಬೇಕಿತ್ತು. ಆದರೆ, ವಿವಿಧ ಕಾರಣದಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿರುವುದು ಪ್ರವಾಸಿಗರಲ್ಲಿ ಬೇಸರ ಮೂಡಿಸಿದೆ.

ಮೈಸೂರು ರೈಲ್ವೆ ಮ್ಯೂಸಿಯಂ ವೀಕ್ಷಣೆ ಇನ್ನೂ ವಿಳಂಬಮೈಸೂರು ರೈಲ್ವೆ ಮ್ಯೂಸಿಯಂ ವೀಕ್ಷಣೆ ಇನ್ನೂ ವಿಳಂಬ

1979ರಲ್ಲಿ ಭಾರತೀಯ ರೈಲ್ವೆ, ನಗರದ ಕೆ.ಆರ್.ರಸ್ತೆಯಲ್ಲಿರುವ ಸಿಎಫ್ ‌ಟಿಆರ್ ‌ಐ ಮುಂಭಾಗದಲ್ಲಿ ಮ್ಯೂಸಿಯಂ ಸ್ಥಾಪನೆ ಮಾಡಿತು. ದೇಶದಲ್ಲಿ ಇರುವ ಎರಡು ರೈಲ್ವೆ ವಸ್ತು ಸಂಗ್ರಹಾಲಯಗಳಲ್ಲಿ ಇದು ಕೂಡ ಒಂದು. ವಿಂಟೇಜ್ ಲೋಕೋಮೋಟರ್ ‌ಗಳನ್ನು ಹೊರಗಡೆ ಪ್ರದರ್ಶನಕ್ಕಿಟ್ಟಿರುವ ಏಕೈಕ ವಸ್ತುಸಂಗ್ರಹಾಲಯ ಎಂಬ ಹಿರಿಮೆಗೂ ಮೈಸೂರು ಮ್ಯೂಸಿಯಂ ಪಾತ್ರವಾಗಿದೆ. ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ಮತ್ತು ಚಿಣ್ಣರ ಆಟೋಟಕ್ಕೆ ಇನ್ನಷ್ಟು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಉನ್ನತೀಕರಣ ಮಾಡಲಾಗುತ್ತಿದೆ. ಫೆಬ್ರವರಿ ಮೊದಲ ವಾರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಡಿಆರ್ ಎಂ ಅಪರ್ಣಾ ಗರ್ಗ್ ತಿಳಿಸಿದ್ದಾರೆ.

Another Attraction Railway Museum Soon Be Added To Mysuru

ಪ್ರವಾಸಿಗರು ವಿಶ್ರಾಂತಿ ಪಡೆಯಲು, ಮಕ್ಕಳು ಓಡಾಡಲು ವಿಶಾಲವಾದ ಪ್ರಾಂಗಣ ಅಭಿವೃದ್ಧಿ, ಸುಂದರ ಫುಟ್‌ಪಾತ್, ಚಿಣ್ಣರು ಆಟವಾಡಲು ಪ್ರತ್ಯೇಕ ಸ್ಥಳ ಅಭಿವೃದ್ಧಿ, ಆಟಿಕೆಗಳು, ಕ್ಲಾಕ್ ಟವರ್ ನಿರ್ಮಾಣ, ಶ್ರೀರಂಗ ಪೆವಿಲಿಯನ್ ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲದೆ ಮುಖ್ಯವಾಗಿ ಪ್ರವೇಶ ದ್ವಾರವನ್ನು ಆಕರ್ಷಕವಾಗಿಸುವ ಕಾಮಗಾರಿಯೂ ಸಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗುತ್ತಿದೆ.

Another Attraction Railway Museum Soon Be Added To Mysuru

ಮೊದಲ ರೈಲಿನ ಎಂಜಿನ್, ಸ್ಟೀಮ್ ರೈಲು, ಕಲ್ಲಿದ್ದಲು ಇಂಜಿನ್ ಸೇರಿದಂತೆ ಹಳೆ ಕಾಲದ ನಾನಾ ಬಗೆಯ ಇಂಜಿನ್ ‌ಗಳು ಇಲ್ಲಿವೆ. ಇಎಸ್ 506 4-6-2 ಮೊದಲ ಲೋಕೋಮೋಟರ್ ಇಂಜಿನ್, ಆಟ್ಸಿನ್ ರೈಲ್ ಮೋಟಾರ್ ಕಾರ್, ಹಳೆ ಕಾಲದಲ್ಲಿ ರೈಲು ದುರಸ್ತಿಗೊಳಿಸಲು ಪರಿಶೀಲಿಸುತ್ತಿದ್ದ ವಾಹನಗಳು ಮತ್ತೆ ನೋಡಲು ದೊರೆಯಲಿವೆ. ವಿವಿಧ ರೈಲು ಇಂಜಿನ್ ಗಳು ಮತ್ತು ಬೋಗಿಗಳು ವೀಕ್ಷಣೆಗೆ ಸಿಗಲಿವೆ. ಹಳೆ ಕಾಲದ ಟೆಲಿಫೋನ್‌ಗಳು, ಛಾಯಾಚಿತ್ರಗಳು, ಆರಂಭಿಕ ಕಾಲದ ರೈಲ್ವೆ ಟಿಕೆಟ್ ‌ಗಳು ಅಚ್ಚರಿ ಮೂಡಿಸಲಿವೆ.
English summary
The Railways Department is upgrading the Mysuru Railway Museum to international standards and soon another attraction will be added to Mysuru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X