ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಕುಪ್ರಾಣಿಗಳನ್ನು ಪಟಾಕಿಗಳಿಂದ ದೂರವಿರಿಸಿ, ಪಶುವೈದ್ಯರ ಎಚ್ಚರಿಕೆ

|
Google Oneindia Kannada News

ಮೈಸೂರು, ಅಕ್ಟೋಬರ್.06:ಪಟಾಕಿ ಶಬ್ದಕ್ಕೆ ಹೆದರಿದ ಬೆಕ್ಕು ಬಾಲ ದಪ್ಪ ಮಾಡಿಕೊಂಡು, ಕಿಟಕಿ ಗಾಜನ್ನೇರಿ ಓಡುತ್ತದೆ. ಹೆದರಿದ ನಾಯಿಗಳು ಬೊಗಳಲೂ ಆಗದೆ, ಸುಮ್ಮನಿರಲೂ ಆಗದೆ ತಿರುಗುತ್ತಲೇ ಇರುತ್ತವೆ. ಹೀಗಾಗಿ ಪಟಾಕಿ ಹೊಡೆಯುವ ಮುಂಚೆ ಸಾಕು ಪ್ರಾಣಿಗಳಿಗೆ ತೊಂದರೆ ಆಗದಂತೆ ಒಂದಿಷ್ಟು ಕಾಳಜಿವಹಿಸುವುದು ಮುಖ್ಯ.

ದೀಪಾವಳಿ ವಿಶೇಷ ಪುರವಣಿ

ಪಟಾಕಿ ಶಬ್ದಕ್ಕೆ ಪ್ರಾಣಿಗಳು ಭಯಕ್ಕೆ ತುತ್ತಾಗಿ ಸ್ವ-ನಿಯಂತ್ರಣ ಕಳೆದುಕೊಳ್ಳುತ್ತವೆ. ಯಾಕೆಂದರೆ ಪ್ರಾಣಿಗಳಿಗೆ ಮನುಷ್ಯರಿಗಿಂತ ಐದು ಪಟ್ಟು ಹೆಚ್ಚು ಶಬ್ದವನ್ನು ಗ್ರಹಿಸುವ ಸಾಮರ್ಥ್ಯ ಇರುತ್ತದೆ. ಬಹು ದೂರದ ಶಬ್ದವನ್ನು ಅವು ಬೇಗನೆ ಅರಿಯಬಲ್ಲವು. ಹಾಗಾಗಿ ಪಟಾಕಿಯ ಶಬ್ದ ಅವುಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ಮತ್ತೆ ಹೆಚ್ಚು ಒತ್ತಡಕ್ಕೆ ಒಳಗಾಗುತ್ತವೆ.

 ದೀಪಾವಳಿ ಹಬ್ಬ: ಮಾರುಕಟ್ಟೆಯಲ್ಲಿ ದೀಪಗಳ ಖರೀದಿ ಬಲು ಜೋರು ದೀಪಾವಳಿ ಹಬ್ಬ: ಮಾರುಕಟ್ಟೆಯಲ್ಲಿ ದೀಪಗಳ ಖರೀದಿ ಬಲು ಜೋರು

ಅವುಗಳಿಗೆ ತಲೆನೋವು ಸಹ ಉಂಟಾಗುತ್ತದೆ. ಒಂದು ವೇಳೆ ನಾಯಿ ಗರ್ಭ ಧರಿಸಿದ್ದರೆ ಗರ್ಭಪಾತವಾಗುವ ಸಂಭವವೂ ಇರುತ್ತದೆ. ಪಟಾಕಿ ಸೂಸುವ ಹೊಗೆಯಿಂದ ಮನುಷ್ಯ ಹೇಗೆ ಉಸಿರಾಟದ ತೊಂದರೆ ಮತ್ತು ಕಣ್ಣಿನ ಸಮಸ್ಯೆಗಳನ್ನು ಅಭವಿಸುತ್ತಾನೋ ಅದೇ ರೀತಿ ಪ್ರಾಣಿಗಳು ಕೂಡ ಉಸಿರಾಟದ ಸಮಸ್ಯೆ ಎದುರಿಸುತ್ತವೆ. ಕಣ್ಣಿನಲ್ಲಿ ನೀರು ಸೋರುತ್ತದೆ, ಕಣ್ಣು ಕೆಂಪಗಾಗುತ್ತದೆ' ಎನ್ನುತ್ತಾರೆ ಪಶುವೈದ್ಯರು.

 ಮನೆಯೊಳಗೆ ಇರುವಂತೆ ನೋಡಿಕೊಳ್ಳಿ

ಮನೆಯೊಳಗೆ ಇರುವಂತೆ ನೋಡಿಕೊಳ್ಳಿ

ಪಟಾಕಿ ಶಬ್ದ, ಹೊಗೆಯಿಂದ ಪ್ರಾಣಿಗಳಿಗೆ ಆಗುವ ತೊಂದರೆಯನ್ನು ಪೂರ್ಣ ಪ್ರಮಾಣದಲ್ಲಿ ತಪ್ಪಿಸಲು ಸಾಧ್ಯವಾಗದಿದ್ದರೂ, ಅವು ಎದುರಿಸುವ ಮಾನಸಿಕ ಹಿಂಸೆಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಅದಕ್ಕೆ ಮುಖ್ಯವಾಗಿ ಬೇಕಾಗುವುದು ನಿಮ್ಮ ಪ್ರೀತಿ. ಪಟಾಕಿ ಸುಡುವಾಗ ಬೆಕ್ಕು, ನಾಯಿ, ಗಿಣಿ, ಮೊಲ ಇತ್ಯಾದಿ ಸಾಕುಪ್ರಾಣಿಗಳನ್ನು ಮನೆಯೊಳಗೆ ಇರುವಂತೆ ನೋಡಿಕೊಳ್ಳಿ.

 ಬೆಂಗಳೂರಲ್ಲಿ ಪಟಾಕಿ ವ್ಯಾಪಾರ ಶೇ 50ರಷ್ಟು ಕುಸಿತ ಬೆಂಗಳೂರಲ್ಲಿ ಪಟಾಕಿ ವ್ಯಾಪಾರ ಶೇ 50ರಷ್ಟು ಕುಸಿತ

 ಕಡಿಮೆ ಶಬ್ದ ಬರುವ ಪಟಾಕಿ ಹಚ್ಚಿ

ಕಡಿಮೆ ಶಬ್ದ ಬರುವ ಪಟಾಕಿ ಹಚ್ಚಿ

ನಾಯಿ ಇರುವ ಮನೆಯಲ್ಲಿ ಕಡಿಮೆ ಶಬ್ದ ಬರುವ ಪಟಾಕಿಯನ್ನು ಹಚ್ಚಿ. ಅವುಗಳ ಕಿವಿಗೆ ಹತ್ತಿ ಇರಿಸಿ, ಮಫ್ಲರ್ ಸುತ್ತಿ. ಹೀಗೆ ಮಾಡುವುದರಿಂದ ಶಬ್ದದ ತೀವ್ರತೆ ಕಡಿಮೆಯಾಗುತ್ತದೆ.

ಕ್ಯಾಂಡಲ್, ಬೆಂಕಿ ಕಡ್ಡಿ, ಹಣತೆ ಇತ್ಯಾದಿ ಸುಡುವ ಮತ್ತು ಅಪಾಯಕಾರಿ ವಸ್ತುಗಳನ್ನು ಪ್ರಾಣಿಗಳು ಕುತೂಹಲದಿಂದ ಮೂಸಿ ನೋಡಲು ಹೋಗಬಹುದು. ಇದನ್ನು ತಡೆಯುವುದು ಅವಶ್ಯ.
 ಭಯ ಮತ್ತು ಆತಂಕ

ಭಯ ಮತ್ತು ಆತಂಕ

ಉದ್ದದ ಕೂದಲಿರುವ ನಾಯಿಗಳಾದರೆ ಮತ್ತಷ್ಟು ಕಾಳಜಿ ವಹಿಸಬೇಕು. ಕೂದಲಿಗೆ ಬೆಂಕಿ ಹತ್ತಿಕೊಳ್ಳುವ ಸಂಭವ ಇರುತ್ತದೆ. ನಮ್ಮ ಶ್ರವಣ ಧಾರಣಾ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರಮಾಣದ ಶಬ್ದಗಳನ್ನು ನಾಯಿ, ಬೆಕ್ಕುಗಳು ಸಹಿಸಿಕೊಳ್ಳಬಲ್ಲವು. ಆದರೆ ಅವು ಬಹಳ ಬೇಗನೆ ಭಯ ಮತ್ತು ಆತಂಕಗೊಳ್ಳುತ್ತವೆ.

 ಶೇ.2ರಷ್ಟು ನಾಯಿಗಳು ಶಬ್ದಕ್ಕೆ ಒಗ್ಗಿಕೊಂಡಿರುತ್ತವೆ

ಶೇ.2ರಷ್ಟು ನಾಯಿಗಳು ಶಬ್ದಕ್ಕೆ ಒಗ್ಗಿಕೊಂಡಿರುತ್ತವೆ

ಪಟಾಕಿ ಶಬ್ದಕ್ಕೆ ಹೆದರಿದ ಪ್ರಾಣಿಗಳು ಮನೆಯ ಒಳಗೆ ಮುದುರಿಕೊಂಡು ಕೂತಿರುತ್ತವೆ. ಹೆಚ್ಚು ಒತ್ತಡಕ್ಕೆ ಒಳಗಾಗುತ್ತವೆ. ನಮ್ಮ ಮನೆಯಲ್ಲಿ ಲ್ಯಾಬ್ರಡಾರ್ ನಾಯಿ ಇದೆ. ಅದರ ಎದುರು ಪಟಾಕಿ ಹೊಡೆದರೂ, ಹೆದರುವುದಿಲ್ಲ. ಶೇ 2ರಷ್ಟು ನಾಯಿಗಳು ಮಾತ್ರ ಪಟಾಕಿ ಶಬ್ದಕ್ಕೆ ಒಗ್ಗಿಕೊಂಡಿರುತ್ತವೆ. ಸಾಕುಪ್ರಾಣಿಗಳ ವರ್ತನೆ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಪಶುವೈದ್ಯರನ್ನು ಸಂಪರ್ಕಿಸಿ ಎನ್ನುತ್ತಾರೆ ಡಾ. ಗಿರೀಶ್.

ಇದರಿಂದ ತಿಳಿಯುವುದೇನೆಂದರೆ ನಮ್ಮ ಮನಃಸಂತೋಷಕ್ಕಾಗಿ ಹೊಡೆಯುವ ಪಟಾಕಿಗಳಿಂದ ಇಷ್ಟೊಂದು ತೊಂದರೆಗಳಿದೆ ಎಂಬುದು ಬೇಸರದ ಸಂಗತಿ.

English summary
Animals are afraid of the firecracker and there are many problems that can be heard by firecrackers. Here's a short article about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X