ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೋಟೆ: ಹೊಸ ಇತಿಹಾಸ ಬರೆದ ಚಿಕ್ಕದೇವಮ್ಮನ ಜಾತ್ರೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಏಪ್ರಿಲ್ 11: ಹೆಗ್ಗಡದೇವನ ಕೋಟೆ ತಾಲೂಕಿನ ಹಾಲುಗಡ ಮತ್ತು ಇಟ್ನಾ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ನಡೆಯುವ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವ ಸಾಂಗವಾಗಿ ನೆರವೇರಿತು. ಆದರೆ, ಈ ಬಾರಿ ಪ್ರಾಣಿಬಲಿ ಮುಕ್ತವಾಗಿ ನಡೆದಿರುವುದು ವಿಶೇಷವಾಗಿದೆ.

ಜಾತ್ರೆಯ ಸಂದರ್ಭ ಕೋಳಿ, ಕುರಿಯನ್ನು ಬಲಿ ಕೊಡಲಾಗುತ್ತಿತ್ತು. ಆದರೆ ಪ್ರಾಣಿಬಲಿ ಮುಕ್ತ ಜಾತ್ರೆ ನಡೆಯುವ ಮೂಲಕ ಇತಿಹಾಸ ಬರೆಯುವಂತಾಗಿದೆ.

Animal sacrifice banned in Chikkadevamma Yugadi Jatra HD kote

ಚಿಕ್ಕದೇವಮ್ಮ ಬೆಟ್ಟದಿಂದ ಬೆಟ್ಟದ ತಪ್ಪಲಲ್ಲಿರುವ ಕಬಿನಿ ನದಿ ದಂಡೆಯ ಹಾಲುಗಡುವಿಗೆ ಅಮ್ಮನವರನ್ನು ಮೆರವಣಿಗೆ ಮೂಲಕ ತರುವ ಮೂಲಕ ಜಾತ್ರೆ ಆರಂಭವಾಗುತ್ತದೆ.

ನದಿ ಮಧ್ಯ ಭಾಗದಲ್ಲಿರುವ ಜಪದಕಟ್ಟೆಯಲ್ಲಿ ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ಇಟ್ಟು ಅಲ್ಲಿ ವಿಶೇಷ ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಬಳಿಕ ಸಮೀಪದಲ್ಲಿರುವ ಗೂಳಿ ಮಂಟಪದಲ್ಲಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಯಿತು.

Animal sacrifice banned in Chikkadevamma Yugadi Jatra HD kote

ಸಂಜೆ ವಾದ್ಯಗೋಷ್ಠಿಯೊಂದಿಗೆ ಚಿಕ್ಕದೇವಮ್ಮನವರನ್ನು ಬಿಜು ಮಾಡಿಸಿ ಇಟ್ನಾ ಗ್ರಾಮಕ್ಕೆ ತಂದು ಗ್ರಾಮದ ಮಠದ ಹೊಲದ ಮಂಟಪದಲ್ಲಿರಿಸಿ ರಾತ್ರಿ ಮೆರವಣಿಗೆ ನಡೆಸಲಾಯಿತು. ಬ್ಯಾಂಡ್ ಸೆಟ್, ಚಿಕ್ಕಮಗಳೂರಿನ ವೀರಗಾಸೆ ಕುಣಿತ, ಬೆಂಗಳೂರಿನ ಜಾನಪದ ಕಲಾ ತಂಡದವರಿಂದ ಪೂಜಾ ಕುಣಿತ ಮೆರವಣಿಗೆಗೆ ಮೆರಗು ತಂದವು. ಒಟ್ಟಾರೆ, ಯುಗಾದಿ ಸಂದರ್ಭದಲ್ಲಿ ನಡೆಯುವ ಈ ಜಾತ್ರೆ ಈ ಬಾರಿ ಹೊಸತನದಿಂದ ಕೂಡಿತ್ತು.

ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡಿ ದೇವರ ಹರಕೆ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವುದರಿಂದ, ಪ್ರಾಣಿ ಬಳಿ ಕೊಡುವ ಪದ್ಧತಿಯು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ 1959 ಮತ್ತು ಕರ್ನಾಟಕ ಪ್ರಾಣಿ ಬಲಿ ನಿಯಮಗಳು 1963ರ ಪ್ರಕಾರ ಅಪರಾಧ ಮತ್ತು ಶಿಕ್ಷಾರ್ಹವಾಗಿದೆ.

English summary
Chikkadevamma Jatra held during the Yugadi festival in Itna and Halugada village, Heggadadevana Kote Taluk, Mysuru. Public witnessed a unique change in the celebration. There was no animal sacrifice this year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X