ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ವೃದ್ಧನಿಗೆ ವರದಾನವಾದ ಕೊರೊನಾ ಲಾಕ್ ಡೌನ್!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 21: ದಾರಿ ತಪ್ಪಿ ಬಂದು ಮಾನಸಿಕ ಖಿನ್ನತೆಗೆ ಒಳಗಾಗಿ, ಮೈಸೂರಿನಲ್ಲಿ ಅಲೆದಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವೃದ್ಧನಿಗೆ ಲಾಕ್ ಡೌನ್ ವರದಾನವಾಗಿ ಪರಿಣಮಿಸಿದೆ.

Recommended Video

ಯಲಹಂಕಾದ ರಾಯಲ್ ಆರ್ಕಿಡ್‌ನಲ್ಲಿ ತಬ್ಲಿಘಿಗಳಿಗೆ ಆಸರೆ , ಶಾಸಕ ಎಸ್.ಆರ್. ವಿಶ್ವನಾಥ್ ಖಂಡನೆ

ವೃದ್ಧನಿಗೆ ಲಾಕ್ ಡೌನ್ ವೇಳೆ ಮೈಸೂರಿನ ನಂಜರಾಜ ಬಹದ್ದೂರ್ ನಿರ್ಗತಿಕರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಉತ್ತರ ಪ್ರದೇಶ ಮೂಲದ 70 ವರ್ಷದ ಕರಮ್ ಸಿಂಗ್ ಎಂಬ ವೃದ್ಧ ಅಲೆದಾಡುತ್ತಿದ್ದನು.

ಸ್ವಚ್ಛತೆ ಶ್ರೇಯಾಂಕ ಪಟ್ಟಿ: 5 ಸ್ಟಾರ್ ಅಂಕ ಪಡೆದ ಮೈಸೂರು ಸ್ವಚ್ಛತೆ ಶ್ರೇಯಾಂಕ ಪಟ್ಟಿ: 5 ಸ್ಟಾರ್ ಅಂಕ ಪಡೆದ ಮೈಸೂರು

ನಂತರ ವೃದ್ಧನಿಗೆ ನಿರ್ಗತಿಕರ ಕೇಂದ್ರದಲ್ಲಿ ಮನಪರಿವರ್ತನೆ ಚಟುವಟಿಕೆಗಳನ್ನು ಮಾಡಿಸಲಾಗಿತ್ತು. ಈ ವೇಳೆ ಮಾನಸಿಕ ತಜ್ಞರು ನೀಡಿದ ಚಿಕಿತ್ಸೆಗೆ ವೃದ್ಧ ಸ್ಪಂದಿಸಿದ್ದನು. ಆರೋಗ್ಯದಲ್ಲಿ ಚೇತರಿಸಿಕೊಂಡ ವೃದ್ಧನು ವೈದ್ಯರ ಬಳಿ ತನ್ನ ಹಿನ್ನೆಲೆ ಹೇಳಿಕೊಂಡಿದ್ದಾನೆ.

An Old Man Cured From Mental Depression In Mysuru

ಕಳೆದ ಮೂರು ವರ್ಷದ ಹಿಂದೆ ಮಗನ ಮದುವೆಗೆ ಹಣ ಹೊಂದಿಸಲು ಊರಿಂದ ತೆರಳಿದ್ದ ವೃದ್ಧ, ಆ ವೇಳೆ ತಪ್ಪಾಗಿ ಬೆಂಗಳೂರಿನ ರೈಲು ಹತ್ತಿಕೊಂಡು ಹೇಗೋ ಮೈಸೂರಿಗೆ ತಲುಪಿದ್ದನು. ನಂತರ ತನಗೆ ಇಬ್ಬರು ಮಕ್ಕಳಿರುವುದಾಗಿ ಮನಪರಿವರ್ತನೆ ನಂತರ ತಿಳಿಸಿದ.

ಇದೀಗ ಪೊಲೀಸರ ಸಹಾಯದಿಂದ ಮಕ್ಕಳನ್ನು ಮೈಸೂರು ಪಾಲಿಕೆ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ತನ್ನ ತಂದೆ ಬದುಕಿಲ್ಲ ಎಂದುಕೊಂಡಿದ್ದ ಮಕ್ಕಳು. ತಂದೆ ಬದುಕಿರುವ ಸುದ್ದಿ ತಿಳಿದು ಸಂತಸ ಪಟ್ಟಿದ್ದಾರೆ.

ಇದೀಗ ಕ್ರೆಡಿಟ್ ಐ ಸಂಸ್ಥೆಯು ಮಕ್ಕಳ ಬಳಿಗೆ ತಂದೆಯನ್ನು ಮೈಸೂರಿನಿಂದ ಉತ್ತರ ಪ್ರದೇಶಕ್ಕೆ ಕಳುಹಿಸಲು ಪ್ರಯತ್ನಿಸುತ್ತಿದ್ದಾರೆ.

English summary
The elderly man was sheltered at the Nanjaraja Bahadur disabled center in Mysuru when lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X